• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ಪೋರೇಟ್ ಕಂಪನಿಗಳಿಂದ ಬ್ಯಾಂಕ್ ಆರಂಭಕ್ಕೆ ಕೌಶಿಕ್ ಬಸು ವಿರೋಧ

|

ನವದೆಹಲಿ, ನವೆಂಬರ್ 27: ಕಾರ್ಪೋರೇಟ್ ಸಂಸ್ಥೆಗಳಿಗೆ ಬ್ಯಾಂಕ್ ಮಾಡಲು ಅವಕಾಶ ನೀಡಬಹುದು ಎಂಬ ಆರ್‌ಬಿಐ ಆಂತರಿಕ ಸಮಿತಿಯ ಪ್ರಸ್ತಾವನೆಗೆ ಭಾರತದ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ವಿರೋಧಿಸಿದ್ದಾರೆ.

ಕಾರ್ಪೋರೇಟ್ ಕಂಪನಿಗಳಿಗೆ ಬ್ಯಾಂಕ್ ಆರಂಭಿಸಲು ಅವಕಾಶ ಕೊಡುವುದು ತಪ್ಪು ದಾರಿಯಲ್ಲಿ ಸುಂದರವಾದ ಹೆಜ್ಜೆಯನ್ನಿಡುವುದಾಗಿದೆ ಎಂದು ವಿಶ್ವಬ್ಯಾಂಕ್‌ನ ಮಾಜಿ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅಭಿಪ್ರಾಯ ಪಟ್ಟಿದ್ದಾರೆ. ಆರ್‌ಬಿಐ ಈ ಕ್ರಮದಿಂದಾಗಿ ಹಣಕಾಸಿನ ಅಸ್ಥಿರತೆಗೆ ಕಾರಣವಾಗಿ, ತಪ್ಪು ದಾರಿಗೆ ಕರೆದೊಯ್ಯುವುದಾಗಿದೆ ಎಂದು ಎಚ್ಚರಿಸಿದ್ದಾರೆ.

ಕಾರ್ಪೋರೇಟ್‌ NBFCಗಳನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಯೋಜನೆಗೆ ರಘುರಾಮ್ ರಾಜನ್ ವಿರೋಧ

ಎಲ್ಲಾ ಯಶಸ್ವಿ ಆರ್ಥಿಕತೆಗಳು ಒಂದೆಡೆ ಕೈಗಾರಿಕೆಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳ ನಡುವೆ ಸ್ಪಷ್ಟವಾದ ವಿಭಜನಾ ರೇಖೆಯನ್ನು ಹೊಂದಿರುತ್ತವೆ. ಇದಕ್ಕೆ ಕಾರಣಗಳು ಸಹ ಇವೆ ಎಂದಿದ್ದಾರೆ.

ಇತ್ತೀಚೆಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ಆರ್‌ಬಿಐ ಆಂತರಿಕ ಸಮಿತಿಯ ಪ್ರಸ್ತಾವನೆಯನ್ನು ವಿರೋಧಿಸಿದ್ದರು. ಆರ್‌ಬಿಐನ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದರೆ ವಿನಾಶಕಾರಿ ಎಂದು ರಾಜನ್ ಭಾವಿಸಿದ್ದಾರೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆಸ್ತಿಯ ಒಟ್ಟು ಮೊತ್ತವು 50 ಸಾವಿರ ಕೋಟಿಗಿಂತ ಹೆಚ್ಚಿದ್ದರೆ, ಅವುಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಬಹುದು ಎಂದು ಆರ್‌ಬಿನ ಆಂತರಿಕ ಸಮಿತಿ ಸಲಹೆಯನ್ನು ಕೊಟ್ಟಿದೆ.

English summary
The RBI working group’s proposal to allow corporate houses to set up banks is a ‘good-looking’ step in a ‘bad direction’ and may lead to financial instability says Indian economist kaushik basu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X