ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಜ್ಯದಲ್ಲಿ 2.5 ಲಕ್ಷ ಐಟಿ ಉದ್ಯೋಗ ಸೃಷ್ಟಿ'

By Mahesh
|
Google Oneindia Kannada News

ಬೆಂಗಳೂರು, ಸೆ.16: ದೇಶದ ಎಲೆಕ್ಟ್ರಾನಿಕ್ ಕ್ಷೇತ್ರದ ಒಟ್ಟು ಆದಾಯಕ್ಕೆ ರಾಜ್ಯ ಸರ್ಕಾರ ಶೇ 10ರಷ್ಟು ಕೊಡುಗೆ ನೀಡಲಿದೆ. 2020ರ ವೇಳೆಗೆ ರಾಜ್ಯದಲ್ಲಿ ಐಟಿ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಅವಕಾಶ ಒದಗಿಸಲಾಗುವುದು ಎಂದು ರಾಜ್ಯದ ಐಟಿ, ಬಿಟಿ ಹಾಗೂ ವಿಜ್ಞಾನ, ತಂತ್ರಜ್ಞಾನ ಖಾತೆ ಎಸ್ ಆರ್ ಪಾಟೀಲ್ ಹೇಳಿದ್ದಾರೆ.

ಸ್ಪಾರ್ಕ್ ಐಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್ ಆರ್ ಪಾಟೀಲ್, 2020ರ ಹೊತ್ತಿಗೆ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಭಾರತ ಸುಮಾರು 400 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಮಾರುಕಟ್ಟೆ ಹೊಂದಲಿದೆ. ಇದಕ್ಕೆ ರಾಜ್ಯದಿಂದ ಶೇ 10ಕ್ಕೂ ಅಧಿಕ ಪ್ರಮಾಣದ ಕೊಡುಗೆ ಸಲ್ಲಿಸಲಾಗುವುದು ಎಂದರು. [ಇನ್ಫೋಸಿಸ್ ಗೆ ಮರಳುವ ಪ್ರಶ್ನೆಯೇ ಇಲ್ಲ]

2020ರ ಹೊತ್ತಿಗೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣ 4 ಲಕ್ಷ ಕೋಟಿ ಮೀರಲಿದೆ. ಕಳೆದ ವರ್ಷ ಸುಮಾರು 1.8 ಲಕ್ಷ ಕೋಟಿ ರು ಮೌಲ್ಯದ ರಫ್ತು ದಾಖಲಿಸಲಾಗಿದೆ. ನಾವು ಅಮೆರಿಕದ ಸಿಲಿಕಾನ್ ವ್ಯಾಲಿ ಜೊತೆ ಪೈಪೋಟಿ ನಡೆಸಿಲ್ಲ. ನಮ್ಮ ಗುರಿ ಸ್ಥಳೀಯರಿಗೆ ಆದ್ಯತೆ ನೀಡುವುದಾಗಿದೆ ಎಂದರು.

State will generate 2.5 lakh jobs in IT sector by 2020: S.R. Patil

ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಾಫ್ಟ್ ವೇರ್ ವೃತ್ತಿಪರರಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಐಟಿ ಕಂಪನಿ ಹಾಗೂ ಅದಕ್ಕೆ ಪೂರಕ ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವವರ ಸಂಖ್ಯೆ 30 ಲಕ್ಷ ದಾಟುತ್ತದೆ ಎಂದಿದ್ದಾರೆ. 2020ರ ವೇಳ್ಗೆ ನೇರ ನೇಮಕಾತಿ 20 ಲಕ್ಷಕ್ಕೇರಿಸುವುದು ಹಾಗೂ ಪರೋಕ್ಷ ನೇಮಕಾತಿ 60 ಲಕ್ಷಕ್ಕೇರಿಸುವುದು ನಮ್ಮ ಗುರಿ ಎಂದು ಪಾಟೀಲ್ ಹೇಳಿದರು. ಮಿಷನ್ 2020 ಸಮಿತಿಯ ನೇತೃತ್ವವನ್ನು ಟಿವಿ ಮೋಹನ್ ದಾಸ್ ಪೈ ವಹಿಸಿಕೊಂಡಿದ್ದಾರೆ. [ಐಟಿ ಪಾರ್ಕ್ ಸ್ಥಾಪನೆ, 80 ಲಕ್ಷ ಉದ್ಯೋಗ]

ಶೇ 75ರಷ್ಟು ಇಂಜಿನಿಯರಿಂಗ್ ಪದವಿಧರರಲ್ಲಿ ಶೇ 25ರಷ್ಟು ಮಂದಿ ಮಾತ್ರ ಸಾಫ್ಟ್ ವೇರ್ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕೌಶಲ್ಯ ಅಭಿವೃದ್ಧಿ ಕೊರತೆಯೇ ಕಾರಣ ಎಂದು ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

English summary
Minister for IT, BT and Science and Technology S.R. Patil said on Monday that by 2020, the State would be in a position to contribute 10 per cent to the country’s total earnings in electronics sector, besides generating about 2.5 lakh jobs in the industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X