ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಟ್ರಾವೆಲ್ ಟಿಕೆಟ್: ಕರ್ನಾಟಕವೇ ನಂ.1

By Mahesh
|
Google Oneindia Kannada News

Karnataka tops in booking e-travel tickets
ಬೆಂಗಳೂರು, ಅ.28 : ಭಾರತದ ಐಟಿ ರಾಜಧಾನಿ ಬೆಂಗಳೂರನ್ನು ರಾಜಧಾನಿಯಾಗಿ ಹೊಂದಿರುವ ಕರ್ನಾಟಕದ ಕೀರ್ತಿ ಕಲಶಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಆನ್ ಲೈನ್ ಟಿಕೆಟ್ ಬುಕ್ಕಿಂಗ್, ಇ ಟ್ರಾವೆಲ್ ಟಿಕೆಟ್ ಪಡೆಯುವವರಲ್ಲಿ ರಾಜ್ಯದ ಜನತೆ ಎಲ್ಲರಿಗಿಂತ ಮುಂದಿದ್ದಾರೆ ಎಂದು ತಿಳಿದು ಬಂದಿದೆ.

ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(IAMAI) ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ ಆನ್ ಲೈನ್ ಟ್ರಾವೆಲ್ ಟಿಕೆಟ್ ಪಡೆಯುವುದು ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಇಡೀ ದೇಶದಲ್ಲಿ ಜನವರಿಯಿಂದ ಜುಲೈ ತಿಂಗಳಿನವರೆಗಿನ ಅಂಕಿ ಅಂಶಗಳ ಪ್ರಕಾರ ಬಸ್ ಪ್ರಯಾಣಕ್ಕಾಗಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ರಮಾಣ ಶೇ 185ರಷ್ಟು ಹೆಚ್ಚಿದೆಯಂತೆ.

ಸಮೀಕ್ಷೆ ಪ್ರಕಾರ ಜನವರಿಯಲ್ಲಿ 2.5 ಲಕ್ಷ ಆನ್ ಲೈನ್ ಬಸ್ ಟಿಕೆಟ್ ಬುಕ್ ಆಗಿದೆ. ಜುಲೈನಲ್ಲಿ ಇದೇ ಸಂಖ್ಯೆ 7.2 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ರೀತಿಯಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಶೇ 43ರಷ್ಟು ಏರಿಕೆ ಕಂಡಿದೆ. ಜನವರಿಯಲ್ಲಿ 47 ಲಕ್ಷ ಇದ್ದದ್ದು ಜುಲೈ ಹೊತ್ತಿಗೆ 67 ಲಕ್ಷಕ್ಕೇರಿದೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಮುಂದಿದೆ ಎಂದು ರೇಡಿಯಂಟ್ ಇನ್ಫೋ ಸಿಸ್ಟಮ್ (RIS) ಸಂಸ್ಥೆ ಪ್ರಕಟಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆನ್ ಲೈನ್ ಸಹಯೋಗವನ್ನು ರೇಡಿಯಂಟ್ ಸಂಸ್ಥೆ ಹೊಂದಿದೆ. ಸಂಸ್ಥೆ ವರದಿ ಪ್ರಕಾರ ಜನವರಿಯಲ್ಲಿ 25,000 ಆನ್ ಲೈನ್ ಟಿಕೆಟ್ ಮಾರಾಟವಾಗಿದೆ ಜುಲೈನಲ್ಲಿ 30,000 ಟಿಕೆಟ್ ಬಿಕರಿಯಾಗಿದೆ.

ಕೆಎಸ್ಸಾರ್ಟಿಸಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮೊಬೈಲ್ ಮೂಲಕ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಿದ ಮೇಲೆ ಪ್ರತಿ ನಿತ್ಯ 8000ಕ್ಕೂ ಅಧಿಕ ಟಿಕೆಟ್ ಮಾರಾಟ ಮಾಡುತ್ತಿದೆ. ಪ್ರತಿ ವರ್ಷ ಶೇ 35-40 ರಷ್ಟು ಸರಾಸರಿಯಂತೆ ಟಿಕೆಟ್ ಖರೀದಿದಾರರ ಸಂಖ್ಯೆ ಏರಿಕೆಯಾಗಿದೆ.

ಸಂಕ್ರಾಂತಿ, ದಸರಾ, ದೀಪಾವಳಿ, ಬೇಸಿಗೆ ರಜೆ ಹಾಗೂ ಕ್ರಿಸ್ಮಸ್ ಹಬ್ಬಗಳ ಸಂದರ್ಭಗಳಲ್ಲಿ ಟಿಕೆಟ್ ಖರೀದಿಯಲ್ಲಿ ಶೇ 40 ರಷ್ಟು ಹೆಚ್ಚಳ ಕಂಡು ಬರುತ್ತದೆ ಎಂದು ರೆಡಿಯಂಟ್ ಸಂಸ್ಥೆ ಚೇರ್ಮನ್ ವೇಣು ಎಂ ಹೇಳಿದ್ದಾರೆ. [ಇದನ್ನೂ ಓದಿ : ಒನ್ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ]

ಇದಲ್ಲದೆ ಸುಮಾರು 1000ಕ್ಕೂ ಅಧಿಕ ಬಸ್ ಸಂಸ್ಥೆಗಳು 10,000ಕ್ಕೂ ಅಧಿಕ ಬಸ್ ಮಾರ್ಗಗಳಿಗೆ 600 ಕೋಟಿ ರು. ಗೂ ಅಧಿಕ ಮೌಲ್ಯ ಹೊಂದಿರುವ ಪಿಲಾನಿ ಸಾಫ್ಟ್ ಲ್ಯಾಬ್ ಸ್ವಾಮ್ಯದ ರೆಡ್ ಬಸ್ .ಇನ್ ಆನ್ ಲೈನ್ ಟಿಕೆಟ್ ನೀಡುತ್ತಿದೆ. ಜತೆಗೆ ಟ್ರಾವೆಲ್ ಯಾರಿ.ಕಾಂ ಸಂಸ್ಥೆ ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ಕೂಡಾ ನೀಡುತ್ತಿದೆ. ಹೀಗಾಗಿ ಟಿಕೆಟ್ ಖರೀದಿ ಮಟ್ಟಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಪೈಪೋಟಿ ನಡುವೆ ಪ್ರಯಾಣಿಕ ಸ್ನೇಹಿ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ.

English summary
A study by Internet and Mobile Association of India (IAMAI) has revealed that the Karnataka is the first among its southern sisters when it comes to booking travel tickets online.Radiant Info Systems (RIS), a leading transport logistics solutions provider that has a tie-up with KSRTC and has provided inputs to the survey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X