ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ease of Doing Business: ಅಗ್ರ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ

|
Google Oneindia Kannada News

ನವದೆಹಲಿ, ಜೂನ್ 30: ಕೇಂದ್ರ ಸರಕಾರ ಇಂದು ಗುರುವಾರ ದೇಶದಲ್ಲಿನ ಉದ್ಯಮ ಪೂರಕ ವಾತಾವರಣ ಇರುವ ಪ್ರದೇಶಗಳ ಶ್ರೇಯಾಂಕಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅತ್ಯುತ್ತಮ ಸಾಧಕರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಇದೆ.

ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಹರ್ಯಾಣ, ಕರ್ನಾಟಕ, ಪಂಜಾಬ್ ಮತ್ತು ತಮಿಳುನಾಡು ಈ ಏಳು ರಾಜ್ಯಗಳು ಅತ್ಯುತ್ತಮವಾದ ಉದ್ಯಮ ಪೂರಕ ವಾತಾವರಣ ಕಲ್ಪಿಸಿವೆ.

ಜುಲೈ 18ರಿಂದ ನೂತರ ಜಿಎಸ್‌ಟಿ ದರ ಜಾರಿ: ಯಾವೆಲ್ಲಾ ದುಬಾರಿ ತಿಳಿಯರಿಜುಲೈ 18ರಿಂದ ನೂತರ ಜಿಎಸ್‌ಟಿ ದರ ಜಾರಿ: ಯಾವೆಲ್ಲಾ ದುಬಾರಿ ತಿಳಿಯರಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ವ್ಯವಹಾರ ಸುಧಾರಣೆ ಕ್ರಿಯಾ ಯೋಜನೆ 2020" (Business Reforms Action Plan 2020) ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕರ್ನಾಟಕ ಸೇರಿ ಏಳು ರಾಜ್ಯಗಳು ಅಗ್ರಸ್ಥಾನಿಗರ ಸಾಲಿನಲ್ಲಿ ಇರುವುದನ್ನು ತಿಳಿಸಿದ್ದಾರೆ.

ಹಾಗೆಯೇ, ಸಾಧಕ ರಾಜ್ಯಗಳು, ವೇಗವಾಗಿ ವ್ಯವಹಾರ ಬೆಳೆಯುತ್ತಿರುವ ರಾಜ್ಯಗಳು, ಮೇಲೇರುವ ಆಶಯದಲ್ಲಿರುವ ರಾಜ್ಯಗಳು, ಹೀಗೆ ನಾಲ್ಕು ಭಾಗಗಳಾಗಿ ರಾಜ್ಯಗಳನ್ನು ವರ್ಗೀಕರಿಸಲಾಗಿದೆ.

ಭಾರತದಲ್ಲೇ ವಲಸಿಗರಿಗೆ ಅತ್ಯಂತ ದುಬಾರಿ ನಗರ ಯಾವುದು? ಭಾರತದಲ್ಲೇ ವಲಸಿಗರಿಗೆ ಅತ್ಯಂತ ದುಬಾರಿ ನಗರ ಯಾವುದು?

ಅಗ್ರ ಸಾಧಕರು ಮತ್ತು ಸಾಧಕರ ಪಟ್ಟಿ

ಅಗ್ರ ಸಾಧಕರು ಮತ್ತು ಸಾಧಕರ ಪಟ್ಟಿ

ಆಂಧ್ರಪ್ರೇಶ, ಗುಜರಾತ್, ಹರ್ಯಾಣ, ಕರ್ನಾಟಕ, ಪಂಜಾಬ್, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಟಾಪ್ ಅಚೀವರ್ಸ್ ಗುಂಪಿನಲ್ಲಿವೆ.

ಹಿಮಾಚಲ ಪ್ರದೇಶ, ಮಧ್ಯಪ್ರೇಶ, ಮಹಾರಾಷ್ಟ್ರ, ಒಡಿಶಾ, ಉತ್ತರಪ್ರದೇಶ, ಉತ್ತರಾಖಂಡ್ ರಾಜ್ಯಗಳನ್ನು ಅಚೀವರ್ಸ್ ಗುಂಪಿನಲ್ಲಿ ಒಳಗೊಳ್ಳಲಾಗಿದೆ.

ಅಚ್ಚರಿ ಮೂಡಿಸಿದ ಕಾಶ್ಮೀರ ಮತ್ತು ಈಶಾನ್ಯ

ಅಚ್ಚರಿ ಮೂಡಿಸಿದ ಕಾಶ್ಮೀರ ಮತ್ತು ಈಶಾನ್ಯ

ಮೂರನೇ ಸ್ತರದ ಪಟ್ಟಿಯಲ್ಲಿ ಎಮರ್ಜಿಂಗ್ ಬ್ಯುಸಿನೆಸ್ ಇಕೋಸಿಸ್ಟಂಗಳನ್ನು ಹೊಂದಿರುವ ರಾಜ್ಯಗಳಿವೆ. ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತು ಪುದುಚೆರಿ ರಾಜ್ಯಗಳು ಇಲ್ಲಿವೆ. ಬಿಹಾರ, ಚಂಡೀಗಡ, ದಮನ್ ಅಂಡ್ ಡಿಯು, ದಾದ್ರ ನಾಗರ್ ಹವೇಲಿ, ಅಂಡಮಾನ್ ಮೊದಲಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳು ಉದ್ದಿಮೆ ವ್ಯವಸ್ಥೆಯನ್ನು ವೇಗವಾಗಿ ಬಲಪಡಿಸಿಕೊಳ್ಳುತ್ತಿರುವ ರಾಜ್ಯಗಳ ಗುಂಪಿಗೆ ಸೇರಿವೆ.

ಬಂಗಾಳ ಕೊನೆಯ ಸಾಲಿನಲ್ಲಿ

ಇನ್ನು, ಅತಿ ಕಡಿಮೆ ಉದ್ಯಮ ಪೂರಕ ವಾತಾವರಣ ಇರುವ ರಾಜ್ಯಗಳು ಕೊನೆಯ ಹಾಗು ನಾಲ್ಕನೇ ಗುಂಪಿನಲ್ಲಿವೆ. ರಾಜಸ್ಥಾನ, ಅಸ್ಸಾಂ, ಛತ್ತೀಸ್‌ಗಡ, ಗೋವಾ, ಜಾರ್ಖಂಡ್, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಕೆಳಗಿನ ಸ್ತರದಲ್ಲಿವೆ.

ಸುಲಲಿತ ವಹಿವಾಟು ಅಥವಾ ಉದ್ಯಮ ಪೂರಕ ವಾತಾವರಣ ಇರುವ ರಾಜ್ಯಗಳನ್ನು ಗುರುತಿಸುವ ಕೆಲಸವನ್ನು ಕೇಂದ್ರ ಸರಕಾರ ಇತ್ತೀಚಿನ ವರ್ಷಗಳ ಹಿಂದೆ ಆರಂಭಿಸಿದ್ದು. ಈಗ ಪ್ರಕಟವಾಗಿರುವುದು ಐದನೇ ಪಟ್ಟಿ. ಆದರೆ, ರಾಜ್ಯಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶ್ರೇಯಾಂಕ ಪಟ್ಟಿ ಮಾಡಿರುವುದು ಇದೇ ಮೊದಲು. ಈ ಹಿಂದೆ ಶ್ರೇಯಾಂಕದ ಪೂರ್ಣ ಪಟ್ಟಿಯನ್ನು ಹಾಕಲಾಗುತ್ತಿತ್ತು.

ಶ್ರೇಯಾಂಕಕ್ಕೆ ಏನು ಮಾನದಂಡ?

ಶ್ರೇಯಾಂಕಕ್ಕೆ ಏನು ಮಾನದಂಡ?

ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯು 2020ರ ಬ್ಯುಸಿನೆಸ್ ರಿಫಾರ್ಮ್ಸ್ ಆ್ಯಕ್ಷನ್ ಪ್ಲಾನ್‌ನದ್ದಾಗಿದೆ. ವಿವಿಧ ರಾಜ್ಯಗಳಲ್ಲಿ ಉದ್ಯಮಕ್ಕೆ ಪೂರಕ ವಾತಾರಣ ಕಲ್ಪಿಸಲು ತೆಗೆದುಕೊಳ್ಳಲಾಗಿರುವ ಸುಧಾರಣಾ ಕ್ರಮಗಳನ್ನು ಅವಲೋಕಿಸಿ ಶ್ರೇಯಾಂಕ ನೀಡಲಾಗಿದೆ.

ಮಾಹಿತಿಯ ಲಭ್ಯತೆ, ಏಕ ಗವಾಕ್ಷಿ ವ್ಯವಸ್ಥೆ, ಕಾರ್ಮಿಕ ಲಭ್ಯತೆ, ಆಡಳಿತ ವ್ಯವಸ್ಥೆ ಸೇರಿ 15 ವಿಚಾರಗಳಲ್ಲಿ 301 ಸುಧಾರಣಾ ಅಂಶಗಳನ್ನು ಪರಿಗಣಿಸಲಾಗಿದೆ. ವ್ಯಾಪಾರ ಪರವಾನಿಗೆ, ಆರೋಗ್ಯಪಾಲನೆ, ಲೀಗಲ್ ಮೆಟ್ರೋಲಜಿ, ಸಿನಿಮಾ ಹಾಲ್ ಇತ್ಯಾದಿ ಒಂಬತ್ತು ವಲಯಗಳಲ್ಲಿ 72 ಕ್ರಿಯಾ ಅಂಶಗಳನ್ನು ಮೊದಲ ಬಾರಿಗೆ ಒಳ್ಳಗೊಳ್ಳಲಾಗಿತ್ತು. ಇವುಗಳನ್ನು ಯಾವ್ಯಾವ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ಅವಲೋಕಿಸಿ ರ‍್ಯಾಂಕಿಂಗ್ ನೀಡಲಾಗಿದೆ.

ಕರ್ನಾಟಕ ಸೇರಿ ಏಳು ರಾಜ್ಯಗಳು ನಿರೀಕ್ಷಿತ ರೀತಿಯಲ್ಲಿ ಸಾಧನೆ ತೋರಿ ಮೊದಲ ಗುಂಪಿಗೆ ಸೇರಿವೆ.

(ಒನ್ಇಂಡಿಯಾ ಸುದ್ದಿ)

Recommended Video

Bommai ಹಾಗು Modiಯವರು Bosch ಬಗ್ಗೆ ಹೇಳಿದ್ದೇನು? | Oneindia Kannada

English summary
Andhra Pradesh, Gujarat, Telangana, Haryana, Karnataka, Punjab and Tamil Nadu are the seven states categorised as ‘top achievers’ in ease of doing business rankings released by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X