ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ದಿಮೆ ಪೂರಕ ಪರಿಸರ ಪಟ್ಟಿಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ

By Vanitha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 15: ಬಿಸಿನೆಸ್ ಗೆ ಸೂಕ್ತ ಪರಿಸರವನ್ನು ಹೊಂದಿರುವ ಟಾಪ್ ಹತ್ತು ರಾಜ್ಯಗಳಲ್ಲಿ ಕರ್ನಾಟಕ 9ನೇ, ಅಂತರಾಷ್ಟ್ರೀಯ ಪಟ್ಟಿಯಲ್ಲಿ ಭಾರತ 142ನೇ ಸ್ಥಾನ ಗಳಿಸಿಕೊಂಡು ವ್ಯಾಪಾರೋದ್ಯಮಿಗಳನ್ನು ಇನ್ನಷ್ಟು ಬರಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ವಿಶ್ವಬ್ಯಾಂಕ್ ತಯಾರಿಸಿರುವ ವರದಿಯಿಂದ ಈ ಮಾಹಿತಿ ದೊರಕಿದ್ದು, ಕ್ರಮವಾಗಿ ಗುಜರಾತ್, ಆಂಧ್ರ ಪ್ರದೇಶ, ಜಾರ್ಖಂಡ್ ಮೊದಲ ಮೂರು ಸ್ಥಾನವನ್ನು ಪಡೆದುಕೊಂಡರೆ, ಕೊನೆಯಲ್ಲಿ ಮಿಜೋರಾಂ, ಜಮ್ಮು ಕಾಶ್ಮೀರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳಿವೆ.[ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]

Karnataka take top 9th, India 142 place in best business environment in world

ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಾಗ ವಿಶ್ವಬ್ಯಾಂಕ್ ಉದ್ದಿಮೆ ಸ್ಥಾಪನೆ, ಭೂಮಿ ಮಂಜೂರು, ಕಾರ್ಮಿಕ ನೀತಿ ಸುಧಾರಣೆ, ಪರಿಸರ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆ, ಮೂಲ ಸೌಲಭ್ಯ, ತೆರಿಗೆ ಸಂಬಂಧಿತ ನೋಂದಣಿ, ನಾನಾ ಪರಿಶೀಲನೆಗಳು ಎಂಬ ಮಾನದಂಡಗಳನ್ನು ಇರಿಸಿಕೊಂಡು ಈ ಪಟ್ಟಿ ತಯಾರಿಸಿದೆ.

ಉದ್ಯಮಕ್ಕೆ ಪೂರಕವಾದ ಸ್ಥಳಕ್ಕೆ ಸಂಬಂಧಿಸಿದಂತೆ 10ರ ನಂತರದ ಸ್ಥಾನ ಪಡೆದ ಇನ್ನುಳಿದ ರಾಜ್ಯಗಳೆಂದರೆ, ಪಶ್ಚಿಮ ಬಂಗಾಳ (11), ತಮಿಳುನಾಡು (12), ಹರಿಯಾಣ (14), ನವದೆಹಲಿ (15), ಹಿಮಾಚಲ ಪ್ರದೇಶ (17), ಕೇರಳ (18), ಗೋವಾ (19), ಬಿಹಾರ (21), ಅಸ್ಸಾಂ (22).

English summary
Karnataka state take top 9th, India 142 place in best business environment in world. The World bank released this report. First three places is going to Gujarath, Andra pradesh, Jharkhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X