ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಕೈಗಾರಿಕಾ ನೀತಿಗೆ ಅಸ್ತು, ಲಕ್ಷಾಂತರ ಉದ್ಯೋಗ ಸೃಷ್ಟಿ

|
Google Oneindia Kannada News

ಬೆಂಗಳೂರು ಜುಲೈ 24: ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಕೈಗಾರಿಕಾಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೂತನ ಕೈಗಾರಿಕಾ ನೀತಿ 2020-25 ರಾಜ್ಯವನ್ನು ಇನ್ನಷ್ಟು ಕೈಗಾರಿಕಾ ಸ್ನೇಹಿ ಮಾಡುವತ್ತ ಪ್ರಮುಖ ಹೆಜ್ಜೆಯಾಗಿದೆ, ಇದಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಬಹಳ ಸಂತಸದ ವಿಷಯ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ವಿಧಾನಸೌಧದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಾದ್ಯಂತ ಸಮತೋಲಿತ, ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಐದು ವರ್ಷಗಳ ನಿಯಮಿತ ಅವಧಿಯಲ್ಲಿ ಕೈಗಾರಿಕಾ ನೀತಿಗಳನ್ನು ಹೊರತರುತ್ತಿದೆ. 2014ನೇ ಸಾಲಿನಲ್ಲಿ ಹಿಂದಿನ ಕೈಗಾರಿಕಾ ನೀತಿಯನ್ನು ಹೊರತಂದಿದ್ದು, ತದನಂತರ ಅನೇಕ ಬದಲಾವಣೆಗಳು ಆಗಿ ಉತ್ಪಾದನೆ ಮತ್ತು ಉತ್ಪಾದನಾ ಸಂಬಂಧಿತ ಸೇವಾ ಕೈಗಾರಿಕೆಗಳು, ಇದರ ಜೊತೆಗೆ ಸ್ಮಾರ್ಟ್ ಉತ್ಪಾದನೆ, ಗ್ರಾಹಕೀಕರಣ, ಸಹಕಾರತ್ವದ ಉತ್ಪಾದನೆ ಇತ್ಯಾದಿ ಬೆಳವಣಿಗೆಗಳನ್ನು ಒಳಗೊಂಡಂತೆ ಹೊಸ ಅವಕಾಶಗಳು ಹೊರ ಹೊಮ್ಮಿರುತ್ತದೆ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಕಾಫಿ ಪಾರ್ಕ್ ಸ್ಥಾಪನೆ: ಜಗದೀಶ್ ಶೆಟ್ಟರ್ಚಿಕ್ಕಮಗಳೂರಿನಲ್ಲಿ ಕಾಫಿ ಪಾರ್ಕ್ ಸ್ಥಾಪನೆ: ಜಗದೀಶ್ ಶೆಟ್ಟರ್

ನೂತನ ಕೈಗಾರಿಕಾ ನೀತಿ 2020-25ರ ಗಮನವು ಕರ್ನಾಟಕ ಕೈಗಾರಿಕಾ ಶಕ್ತಿಯನ್ನು ಬಳಸಿಕೊಂಡು, ಕೈಗಾರೀಕರಣಕ್ಕಾಗಿ ಪರಿಸರವನ್ನು ಶಕ್ತಗೊಳಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟಯರ್-2 & ಟಯರ್-3 ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸಲಾಗುವುದು ಎಂದು ತಿಳಿಸಿದರು.

 ಬೃಹತ್ ಮತ್ತು ಮೆಗಾ ಯೋಜನೆಗಳ ಅಭಿವೃದ್ಧಿ / ಉತ್ತೇಜನ:

ಬೃಹತ್ ಮತ್ತು ಮೆಗಾ ಯೋಜನೆಗಳ ಅಭಿವೃದ್ಧಿ / ಉತ್ತೇಜನ:

• ಕರ್ನಾಟಕವನ್ನು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವುದು;
• OEM ಗಳಿಗೆ ರಾಜ್ಯವನ್ನು ಆದ್ಯತೆಯ ತಾಣವನ್ನಾಗಿ ಮಾಡುವುದು;
• ಬಂಡವಾಳ ಹೂಡಿಕೆಗಾಗಿ ವಾರ್ಷಿಕ ಕ್ರಿಯಾ ಯೋಜನೆ;
• ಮೂಲಸೌಲಭ್ಯ ಬೆಂಬಲ - ಕೆಐಎಡಿಬಿಯು ತನ್ನ ಕೈಗಾರಿಕಾ ಪ್ರದೇಶಗಳಲ್ಲಿ ಶೇ. 70 ರಷ್ಟು ಹಂಚಿಕೆಯ ಜಮೀನನ್ನು ಮೀಸಲಿಡುವುದು;
• ಅಂತರಾಷ್ಟ್ರೀಯ ಮಾಹಿತಿ ಸೌಲಭ್ಯ ಕೇಂದ್ರ;
• ಬಂಡವಾಳ ಹೂಡಿಕೆ ಸಮಾವೇಶ;
• ಉತ್ತೇಜನಗಳು ಮತ್ತು ರಿಯಾಯಿತಿಗಳು.

 ಕೋವಿಡ್-19ರ ನಂತರ ಹೊಸ ಅವಕಾಶ

ಕೋವಿಡ್-19ರ ನಂತರ ಹೊಸ ಅವಕಾಶ

ಕೋವಿಡ್-19ರ ನಂತರ ಹೊಸ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಬೃಹತ್ ಬಂಡವಾಳವನ್ನು ಎಲ್ಲಾ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ, ಈ ನೀತಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದು, ಮುಖ್ಯವಾಗಿ ಭೂಮಿ ಸಂಗ್ರಹಣೆ, ಕಾರ್ಮಿಕ ಕಾನೂನುಗಳ ಸುಧಾರಣೆ ಹಾಗೂ ಆಕರ್ಷಕ ರಿಯಾಯಿತಿ ಹಾಗೂ ಉತ್ತೇಜನಗಳನ್ನು ನೀಡಲಾಗಿದೆ.

ಉತ್ಪಾದನೆಗಾಗಿ ಜಮೀನನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು:
ಜಮೀನು ಪಡೆಯುವುದನ್ನು ಅನುಕೂಲಗೊಳಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲಾಗಿದೆ;

ಖಾಸಗಿಯವರಿಂದ ಖಾಸಗಿ ಕೈಗಾರಿಕಾ ಪಾರ್ಕ್‍ಗಳು ಅಂದರೆ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಪಾರ್ಕ್, ಸೆಕ್ಟರ್ ಸ್ಪೆಸಿಫಿಕ್ ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಹಾಗೂ ಫ್ಲಾಟೆಡ್ ಫ್ಯಾಕ್ಟರಿಗಳ ಸ್ಥಾಪನೆಗೆ ಉತ್ತೇಜಿಸುವುದು;
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಮತ್ತು ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್‍ಗಳಡಿ ಕೈಗಾರಿಕಾ ನೋಡ್‍ಗಳನ್ನು ಅಭಿವೃದ್ಧಿಪಡಿಸುವುದು;

ಕರ್ನಾಟಕ ಕೈಗಾರಿಕಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಕರ್ನಾಟಕ ಕೈಗಾರಿಕಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ

 ಸ್ಪೆಶಲ್ ಇನ್ವೆಸ್ಟ್ ಮೆಂಟ್ ರೀಜನ್

ಸ್ಪೆಶಲ್ ಇನ್ವೆಸ್ಟ್ ಮೆಂಟ್ ರೀಜನ್

100 ಕ್ಕಿಂತಲೂ ಹೆಚ್ಚು ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಸ್ಪೆಶಲ್ ಇನ್ವೆಸ್ಟ್ ಮೆಂಟ್ ರೀಜನ್ ( SIR) ಸ್ಥಾಪಿಸಲು, ಅಭಿವೃದ್ಧಿಪಡಿಸಲು, ನಿರ್ವಹಿಸಲು ರಾಜ್ಯದಲ್ಲಿ SIR ಕಾಯ್ದೆ ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ ಮತ್ತು ಈ ಪ್ರದೇಶವನ್ನು "ಕೈಗಾರಿಕಾ ಟೌನ್‍ಶಿಪ್" ಎಂದು ಪರಿಗಣಿಸಲಾಗುತ್ತದೆ. ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಧಾರವಾಡ SIR - ಮೊದಲನೇ SIRನ್ನು ಅಧಿಸೂಚಿತಗೊಳಿಸಲು ಪ್ರಸ್ತಾಪಿಸಲಾಗಿದೆ. ಮುಂದುವರೆದು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ SIR ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನೊಳಗೊಂಡ ಕಲಬುರಗಿ SIR ಅನ್ನು ಅಧಿಸೂಚಿತಗೊಳಿಸಲು ಪ್ರಸ್ತಾಪಿಸಲಾಗಿದೆ.

ಕೆ.ಐ.ಎ.ಡಿ. ಕಾಯ್ದೆ 1966 ರಡಿ ಸ್ಥಳೀಯ ಸಂಸ್ಥೆಗಳ ಶಾಸನಬದ್ಧ ಅಧಿಕಾರ / ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ Industrial Area Development Authority of Karnataka ಅನ್ನು ರಚಿಸಲಾಗುವುದು.

ರಾಜ್ಯದಲ್ಲಿನ ಅಸ್ತಿತ್ವದಲ್ಲಿರುವ ಬೃಹತ್ ಕೈಗಾರಿಕಾ ಪ್ರದೇಶಗಳನ್ನು ಸಂಬಂಧಿಸಿದ ಕಾಯ್ದೆಗಳಡಿ ಕೈಗಾರಿಕಾ ಟೌನ್‍ಶಿಪ್‍ಗಳೆಂದು ಘೋಷಿಸಲಾಗುವುದು.

 ಕಾರ್ಮಿಕ ಕಾನೂನುಗಳ ಸುಧಾರಣೆ:

ಕಾರ್ಮಿಕ ಕಾನೂನುಗಳ ಸುಧಾರಣೆ:

• ರಾತ್ರಿ ಪಾಳಿಯಲ್ಲಿ ಅಂದರೆ ರಾತ್ರಿ 7 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಲು ಮುಂದೆ ಬರುವ ಮಹಿಳಾ ಕಾರ್ಮಿಕರಿಗೆ ಫ್ಯಾಕ್ಟರೀಸ್ ಕಾಯ್ದೆ 1948ರಡಿ ತಿದ್ದುಪಡಿ ತರಲಾಗಿದೆ.
• ಒಂದು ತ್ರೈಮಾಸಿಕದಲ್ಲಿ ಒಟ್ಟು 125 ಗಂಟೆಗಳವರೆಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಫ್ಯಾಕ್ಟರೀಸ್ ಕಾಯ್ದೆ, 1948ರ ಸೆಕ್ಷನ್ 64 ಹಾಗೂ 65ರಡಿ ತಿದ್ದುಪಡಿ ಮಾಡಲು ಸರ್ಕಾರವು ಪ್ರಸ್ತಾಪಿಸಿದೆ.
• ಫಿಕ್ಸ್ಡ್ ಟರ್ಮ್ ಎಂಪ್ಲಾಯ್‍ಮೆಂಟ್ (ಎಫ್.ಟಿ.ಇ.) / ಕಾಂಟ್ರ್ಯಾಕ್ಟ್ ಎಂಪ್ಲಾಯ್‍ಮೆಂಟ್‍ಗಳ ಬಗ್ಗೆ ಸರ್ಕಾರವು ಅವಶ್ಯ ತಿದ್ದುಪಡಿಗಳನ್ನು ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್‍ಮೆಂಟ್ (ಸ್ಟ್ಯಾಂಡಿಂಗ್ ಆರ್ಡರ್) ಆಕ್ಟ್, 1946 ರಡಿ ಈಗಾಗಲೇ ತರಲಾಗಿದೆ ಮತ್ತು ದಿನಾಂಕ: 30.06.2020ರಂದು ನಿಯಮಗಳನ್ನು ಅಧಿಸೂಚಿಸಿದೆ.
• ಕಾಲಕ್ಕನುಗುಣವಾಗಿ ಕನಿಷ್ಠ ವೇತನ ಪರಿಷ್ಕರಣೆಯನ್ನು ಕನಿಷ್ಟ ವೇತನ ಕಾಯ್ದೆಯಡಿ ನಿಗಧಿಪಡಿಸಲಾಗುವುದು ಮತ್ತು ಹಣದುಬ್ಬರ & ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ರ ಅಂಶಗಳಿಗೂ ಸಹ ಲಿಂಕ್ ಆಗಿರುತ್ತದೆ.
• ಸರಕು ರಫ್ತು ಉತ್ತೇಜಿಸಲು, ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್‍ಮೆಂಟ್ (ಸ್ಟ್ಯಾಂಡಿಂಗ್ ಆರ್ಡರ್) ಆಕ್ಟ್, 1946 ರಡಿ ಐಟಿ ಮತ್ತು ಐಟಿಇಎಸ್ ಎಸ್ಟ್ಯಾಬ್ಲಿಷ್‍ಮೆಂಟ್‍ಗಳಿಗೆ ಅವಕಾಶವಿರುವಂತೆ ಇದೇ ವಿನಾಯಿತಿಯನ್ನು ಮ್ಯಾನುಫ್ಯಾಕ್ಚರಿಂಗ್ ಎಸ್.ಇ.ಜೆಡ್.ಗಳಿಗೂ ವಿಸ್ತರಿಸಲು ಅಧಿಸೂಚನೆ ಸಂಖ್ಯೆ: ಎಲ್‍ಡಿ 194 ಎಲ್‍ಇಟಿ 2016, ದಿನಾಂಕ: 28.11.2019 ರಲ್ಲಿ ತಿದ್ದುಪಡಿ ತರಲಾಗಿದೆ.

ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯೋದು ಹೇಗೆ?ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯೋದು ಹೇಗೆ?

 ಕರ್ನಾಟಕ ಕೈಗಾರಿಕಾ (ಸೌಲಭ್ಯ) (ತಿದ್ದುಪಡಿ) ಕಾಯ್ದೆ:

ಕರ್ನಾಟಕ ಕೈಗಾರಿಕಾ (ಸೌಲಭ್ಯ) (ತಿದ್ದುಪಡಿ) ಕಾಯ್ದೆ:

• ಎಸ್.ಹೆಚ್.ಎಲ್.ಸಿ.ಸಿ. / ಎಸ್.ಎಲ್.ಎಸ್.ಡಬ್ಲ್ಯೂ.ಸಿ.ಸಿ. / ಡಿ.ಎಲ್.ಎಸ್.ಡಬ್ಲ್ಯೂ.ಸಿ.ಸಿ.ಯಿಂದ ಅನುಮೋದನೆ ಪಡೆದ ನಂತರ ಉತ್ಪಾದನಾ ಕೈಗಾರಿಕೆಗಳು / ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ, ಉದ್ಯಮಗಳಿಗೆ ಸ್ವೀಕೃತಿ ಪ್ರಮಾಣಪತ್ರಗಳನ್ನು ನೀಡಲಾಗುವುದು. ಈ ಪ್ರಮಾಣಪತ್ರವು ವಿವಿಧ ಕೆಳಹಂತದ ಇಲಾಖೆಗಳಿಂದ ಮೂರು ವರ್ಷಗಳ ಆರಂಭಿಕ ಅವಧಿಗೆ ಅಥವಾ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾದ ದಿನಾಂಕದಿಂದ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ.
• ಕರ್ನಾಟಕ ಉದ್ಯೋಗ ಮಿತ್ರದ ವೆಬ್ ಪೋರ್ಟಲ್‍ನಲ್ಲಿ ಕೈಗಾರಿಕೆಗಳಿಗೆ / ಉದ್ಯಮಿಗಳಿಗೆ ಸಾಮಾನ್ಯ ಅರ್ಜಿ ನಮೂನೆ, ಸ್ವಯಂ ದೃಢೀಕರಣ ಮತ್ತು ಆನ್‍ಲೈನ್ ಶುಲ್ಕವನ್ನು ಪಾವತಿಸುವುದನ್ನು ಸಕ್ರಿಯಗೊಳಿಸಲಾಗುವುದು.
• ಸ್ವೀಕೃತಿ ಪ್ರಮಾಣಪತ್ರವು ಕೈಗಾರಿಕೆಗಳು ಸೈಟ್‍ನಲ್ಲಿ ಕೆಲಸ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
• ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವ ಮೊದಲು, ಸಂಬಂಧಿತ ಉತ್ಪಾದನಾ ಉದ್ಯಮ / ಉದ್ಯಮವು ಅಗತ್ಯವಾದ ಅನುಮತಿ / ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ.
• ಎಲ್ಲಾ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳು ಒಟ್ಟಾರೆ ಆಧಾರದ ಮೇಲೆ ಕನ್ನಡಿಗರಿಗೆ ಕನಿಷ್ಠ 70% ಮತ್ತು 100% ರಷ್ಟು ಗ್ರೂಪ್ ಡಿ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸತಕ್ಕದ್ದು.
• ನೂತನ ಕೈಗಾರಿಕಾ ನೀತಿ 2020-25 ರಲ್ಲಿ ಈ ಕೆಳಕಂಡ ರಿಯಾಯಿತಿ ಹಾಗೂ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ:

 ಉತ್ಪಾದನಾ ಆಧಾರಿತ ಕಾರ್ಯಕ್ಷಮತೆ

ಉತ್ಪಾದನಾ ಆಧಾರಿತ ಕಾರ್ಯಕ್ಷಮತೆ

ಕರ್ನಾಟಕವು ಭಾರತದಲ್ಲಿ ಮೊದಲ ಬಾರಿಗೆ ತೆರಿಗೆ ಆಧಾರಿತ ಪ್ರೋತ್ಸಾಹಗಳ ಬದಲಾಗಿ ಉತ್ಪಾದನಾ ಆಧಾರಿತ ಕಾರ್ಯಕ್ಷಮತೆಯನ್ನು ಉತ್ತೇಜಿಸಲು ವಾರ್ಷಿಕ ವಹಿವಾಟಿನ ಮೇಲೆ ಪ್ರೋತ್ಸಾಹಗಳನ್ನು ನೀಡಲು ಉದ್ದೇಶಿಸಿದೆ.

ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಗಳಿದ ಜಿಲ್ಲೆಗಳಲ್ಲಿ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ಒದಗಿಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಸಮತೋಲಿತ ಕೈಗಾರಿಕಾಭಿವೃದ್ಧಿಯನ್ನು ಖಾತರಿಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡಲಾಗುವುದು - ಪ್ರತಿ ವರ್ಷ 10% ವಹಿವಾಟಿನ ಮೇಲೆ ಗರಿಷ್ಟ 5 ವರ್ಷಗಳಿಗೆ ಅಥವಾ ಶೇ. 20-30ರ ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ.

 ರಫ್ತು ಆಧಾರಿತ ಘಟಕಗಳಿಗೆ ಉತ್ತೇಜನ

ರಫ್ತು ಆಧಾರಿತ ಘಟಕಗಳಿಗೆ ಉತ್ತೇಜನ

• ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ ನೋಂದಣಿ ಶುಲ್ಕದಲ್ಲಿ ರಿಯಾಯಿತಿ.
• ಭೂ ಪರಿವರ್ತನಾ ಶುಲ್ಕ ಮರುಪಾವತಿ.
• ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ತೆರಿಗೆ ವಿನಾಯಿತಿ.
• ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಸಹಾಯಧನ.
• ಕುಶಲಕರ್ಮಿಗಳಿಗೆ ಸವಲತ್ತುಗಳು.
• ಎಂ.ಎಸ್.ಎಂ.ಇ. ಕೈಗಾರಿಕೆಗಳಿಗೆ ತಂತ್ರಜ್ಞಾನ ನವೀಕರಣ ಸಾಲದ ಮೇಲೆ ಬಡ್ಡಿ ಸಹಾಯಧನ.
• ಮಳೆ ನೀರು ಕೊಯ್ಲು ಹಾಗೂ ತ್ಯಾಜ್ಯ ನೀರು ಮರುಬಳಕೆಗೆ ಉತ್ತೇಜನ.
• ಇಟಿಪಿ / ಸಿಇಟಿಪಿ ಉತ್ತೇಜನ.
• ವಿಶೇಷ ವರ್ಗದ ಉದ್ಯಮಶೀಲರಿಗೆ ಅಂದರೆ ಎಸ್.ಸಿ/ಎಸ್.ಟಿ, ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ ಹೆಚ್ಚುವರಿ ಉತ್ತೇಜನ.
• ರಫ್ತು ಆಧಾರಿತ ಘಟಕಗಳಿಗೆ ಉತ್ತೇಜನ.
• ಆಂಕರ್ ಕೈಗಾರಿಕೆಗಳಿಗೆ ಬಂಡವಾಳ ಸಹಾಯಧನ - ಯಾವುದೇ ತಾಲ್ಲೂಕಿನಲ್ಲಿ ರೂ. 100 ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯಾಗಿರುವ ಘಟಕಗಳು ಇಲ್ಲದಿದ್ದ ಪಕ್ಷದಲ್ಲಿ.
• ಮಧ್ಯಮ, ಬೃಹತ್, ಮೆಗಾ, ಅಲ್ಟ್ರಾ ಮೆಗಾ ಹಾಗೂ ಸೂಪರ್ ಮೆಗಾ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡಲಾಗುವುದು - ಪ್ರತಿ ವರ್ಷ ಸುಮಾರು 1.75%-2.50% ವಹಿವಾಟಿನ ಮೇಲೆ ಗರಿಷ್ಟ 5-10 ವರ್ಷಗಳಿಗೆ ಅಥವಾ ಶೇ. 35-60ರ ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ.
• ಖಾಸಗಿ ಕೈಗಾರಿಕಾ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲು ರಿಯಾಯಿತಿ ಹಾಗೂ ಪ್ರೋತ್ಸಾಹ.
• ಆರ್ & ಡಿ ಹಾಗೂ ಇಂಡಸ್ಟ್ರೀ-4.0ಗೆ ಸಹಾಯಧನ.

ವಿಶೇಷ ಆರ್ಥಿಕ ಪ್ಯಾಕೇಜ್‌, ಕೈಗಾರಿಕಾ ಕ್ಷೇತ್ರದ ಚೇತರಿಕೆ : ಶೆಟ್ಟರ್ವಿಶೇಷ ಆರ್ಥಿಕ ಪ್ಯಾಕೇಜ್‌, ಕೈಗಾರಿಕಾ ಕ್ಷೇತ್ರದ ಚೇತರಿಕೆ : ಶೆಟ್ಟರ್

English summary
The Karnataka State Cabinet has approved the new industrial policy for 2020-2025 which focus on labour, and land reforms providing jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X