ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಪ್ರವಾಸಿಗರನ್ನು ಸೆಳೆದ ಹೆರಿಟೇಜ್ ವೈನ್ ಟೂರ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 09: ಮೈಸೂರು -ಬೆಂಗಳೂರು ಹೆದ್ದಾರಿ ಮೋಸ್ಟ್ ಹ್ಯಾಪನಿಂಗ್ ತಾಣವಾಗಿ ಬದಲಾಗಿ ದಶಕಗಳೇ ಕಳೆದಿವೆ. ವೀಕೆಂಡ್ ಮಸ್ತಿಗೆ ಎಲ್ಲರ ಅಚ್ಚು ಮೆಚ್ಚಿನ ತಾಣವಾಗಿರುವ ಮೈಸೂರು ಬೆಂಗಳೂರು ಹೆದ್ದಾರಿಯ ಮುಕುಟಕ್ಕೆ ಮತ್ತೊಂದು ಗರಿಯನ್ನು, ಹೆರಿಟೇಜ್ ವೈನ್ ಟೂರ್ ಮೂಡಿಸಿದೆ ಎಂದರೆ ತಪ್ಪಾಗಲಾರದು ಎಂದು ವೈನ್ ಬೋರ್ಡ್ ಎಂಡಿ ಟಿ ಸೋಮು ಹೇಳಿದರು

ಕಳೆದ 5 ವರ್ಷದಲ್ಲಿ ರಾಜ್ಯದ ಮೊದಲ ವೈನರಿ ಹೆರಿಟೇಜ್ ವೈನ್ ಟೂರ್ ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನಿಸಿದರೆ ಇದು ಸಾಬೀತಾಗುತ್ತದೆ.

ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ವೈನ್ ಪ್ರಿಯರು ಹೆರಿಟೇಜ್ ವೈನರಿಗೆ ಭೇಟಿ ನೀಡಿದ್ದು, ನಾಲ್ಕು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆದಿರುವ ದೇಶದ ಹಾಗೂ ರಾಜ್ಯದ ಮೊದಲ ವೈನರಿ, ಎಂಬ ಹೆಗ್ಗಳಿಕೆಯನ್ನೂ ತಂದು ಕೊಟ್ಟಿದೆ.

ಕಳೆದ 5 ವರ್ಷದ ಸಾಧನೆಯನ್ನು ವಿವರಿಸುವ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆರಿಟೇಜ್ ವೈನರಿಯ ವ್ಯವಸ್ಥಾಪಕ ನಿರ್ದೇಶಕ ಪಿ. ಎಲ್. ವೆಂಕಟರಾಮ ರೆಡ್ಡಿಯವರು, 2011 ರ ಮೇ ತಿಂಗಳಲ್ಲಿ ಅಧಿಕೃತವಾಗಿ ಪ್ರಾರಂಭವಾದ ಹೆರಿಟೇಜ್ ವೈನ್ ಟೂರ್, ರಾಜ್ಯದ ವೈನ್ ಪ್ರಿಯರನ್ನು ಅಷ್ಟೇ ಅಲ್ಲದೆ, ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವಲ್ಲಿ ಸಫಲವಾಗಿದೆ.

ಕರ್ನಾಟಕ ವೈನ್ ಮಂಡಳಿಯ ಸಹಯೋಗ

ಕರ್ನಾಟಕ ವೈನ್ ಮಂಡಳಿಯ ಸಹಯೋಗ

ಕರ್ನಾಟಕ ವೈನ್ ಮಂಡಳಿಯ ಸಹಯೋಗದಲ್ಲಿ ಆರಂಭಿಸಿದ ಈ ಪ್ರಯತ್ನ ಫಲ ನೀಡಿದೆ. ಹಾಗೇಯೇ, (BHM) ಹೊಟೇಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳಿಗೆ ವೈನ್ ಬಗ್ಗೆ ಹೆಚ್ಚಿಗೆ ಮಾಹಿತಿ ನೀಡುವುದಲ್ಲದೆ ಪ್ರಾಯೋಗಿಕ ಶಿಕ್ಷಣ ನೀಡುವ ಪ್ರಮುಖ ಸಂಸ್ಥೆಯಾಗಿಯೂ ಅಭಿವೃದ್ದಿಯಾಗಿದೆ ಎಂದರು.

 1 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿದೆ

1 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿದೆ

ಭಾರತ ದೇಶದಲ್ಲಿ ವೈನ್ ಸಂಸ್ಕೃತಿ ಕಾಲಿಡುತ್ತಿದ್ದ ಸಂಧರ್ಭದಲ್ಲಿ ಪ್ರಾರಂಭವಾದ ಹೆರಿಟೇಜ್ ವೈನ್ ಟೂರ್ 1 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿದೆ. ಅಲ್ಲದೆ, ಮೈಸೂರು ಹಾಗೂ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೆರಿಟೇಜ್ ವೈನರಿಯೂ ತನ್ನದೇ ಆದ ವೈಶಿಷ್ಟತೆಯನ್ನು ಪಡೆದುಕೊಂಡಿದೆ.

1 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿದೆ

1 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿದೆ

ಭಾರತ ದೇಶದಲ್ಲಿ ವೈನ್ ಸಂಸ್ಕೃತಿ ಕಾಲಿಡುತ್ತಿದ್ದ ಸಂಧರ್ಭದಲ್ಲಿ ಪ್ರಾರಂಭವಾದ ಹೆರಿಟೇಜ್ ವೈನ್ ಟೂರ್ 1 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿದೆ. ಅಲ್ಲದೆ, ಮೈಸೂರು ಹಾಗೂ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೆರಿಟೇಜ್ ವೈನರಿಯೂ ತನ್ನದೇ ಆದ ವೈಶಿಷ್ಟತೆಯನ್ನು ಪಡೆದುಕೊಂಡಿದೆ.

ಮೈಸೂರಿಗೆ ತೆರಳುವ ಬಹುತೇಕ ಪ್ರವಾಸಿಗರು

ಮೈಸೂರಿಗೆ ತೆರಳುವ ಬಹುತೇಕ ಪ್ರವಾಸಿಗರು

ಮೈಸೂರಿಗೆ ತೆರಳುವ ಬಹುತೇಕ ಪ್ರವಾಸಿಗರು ತಮ್ಮ ಭೇಟಿಯ ಸ್ಥಳಗಳಲ್ಲಿ ಹೆರಿಟೇಜ್ ವೈನರಿಗೂ ಆದ್ಯತೆಯನ್ನು ನೀಡುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ಹೆರಿಟೇಜ್ ವೈನರಿಯ ವ್ಯವಸ್ಥಾಪಕ ನಿದೇರ್ಶಕ ಪಿ. ಎಲ್. ವೆಂಕಟರಾಮ ರೆಡ್ಡಿ ಹರ್ಷ ವ್ಯಕ್ತಪಡಿಸಿದರು.

ನೀಲಿ ದ್ರಾಕ್ಷಿಯನ್ನು ಬಳಸಿಕೊಂಡು ವೈನ್

ನೀಲಿ ದ್ರಾಕ್ಷಿಯನ್ನು ಬಳಸಿಕೊಂಡು ವೈನ್

ರಾಜ್ಯದ ಬೆಂಗಳೂರು, ಗ್ರಾಮಾಂತರ ಪ್ರದೇಶಗಳಾದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯುವ ನೀಲಿ ದ್ರಾಕ್ಷಿಯನ್ನು ಬಳಸಿಕೊಂಡು ವೈನ್ ತಯಾರಿಕೆಯನ್ನು ಪ್ರಾರಂಭಿಸಿದ ಹೆರಿಟೇಜ್ ವೈನರಿಯ ವ್ಯಾಪಕ ಸಂಶೋಧನೆಯ ಫಲವಾಗಿದೆ.

ಹಲವಾರು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ

ಹಲವಾರು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ

ಇಂದು ಹಲವಾರು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೆ, ಫ್ರೆಂಚ್ ದ್ರಾಕ್ಷಿಯನ್ನು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟೇಬಲ್ ವೈನ್‍ಗಳನ್ನು ತಯಾರಿಸುತ್ತಿದೆ. ಹೆರಿಟೇಜ್ ಸ್ಪಾರ್ಕಲಿಂಗ್ ವೈನ್ ಎಲ್ಲರ ಗಮನ ಸೆಳೆಯುತ್ತಿದೆ.

ಆರೋಗ್ಯಕ್ಕೆ ಹಾನಿಕರವಾದ ಹಾರ್ಡ್ ಲಿಕ್ಕರ್

ಆರೋಗ್ಯಕ್ಕೆ ಹಾನಿಕರವಾದ ಹಾರ್ಡ್ ಲಿಕ್ಕರ್

ಆರೋಗ್ಯಕ್ಕೆ ಹಾನಿಕರವಾದ ಹಾರ್ಡ್ ಲಿಕ್ಕರ್ ಗಳ ಹೊರತಾಗಿ ಆರೋಗ್ಯಕ್ಕೆ ಅನುಕೂಲಕರವಾದ ವೈನ್ ನ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಈ ಪ್ರಯತ್ನಕ್ಕೆ ಬಹಳ ಯಶಸ್ಸು ದೊರೆತಿದೆ. ಆದರೆ ಹೆಚ್ಚಾದರೆ ಅಮೃತವೂ ಕೂಡಾ ವಿಷವಾಗುತ್ತದೆ ಎನ್ನುವ ರೀತಿಯಲ್ಲಿ, "ಅತಿಯಾದ ವೈನ್ ಕೂಡಾ ಆರೋಗ್ಯಕ್ಕೆ ಹಾನಿಕರ.

ದಿನಕ್ಕೆ ಒಂದು ಗ್ಲಾಸ್ ವೈನ್ ಆರೋಗ್ಯಕರ,

ದಿನಕ್ಕೆ ಒಂದು ಗ್ಲಾಸ್ ವೈನ್ ಆರೋಗ್ಯಕರ,

ದಿನಕ್ಕೆ ಒಂದು ಗ್ಲಾಸ್ ವೈನ್ ಆರೋಗ್ಯಕರ, ಎರಡು ಗ್ಲಾಸ್ ಕುಡಿದರೆ ಖುಷಿಯಾಗುತ್ತದೆ, ದಿನಕ್ಕೆ ಮೂರು ಗ್ಲಾಸ್ ಹಾನಿಕರ, ದಿನವೂ ನಾಲ್ಕು ಗ್ಲಾಸ್ ಕುಡಿದರೆ ಪ್ರಾಣಕ್ಕೇ ಅಪಾಯ" ಎನ್ನುತ್ತಾರೆ ಹೆರಿಟೇಜ್ ವೈನರಿಯ ವ್ಯವಸ್ಥಾಪಕ ನಿರ್ದೇಶಕ ಪಿ. ಎಲ್. ವೆಂಕಟರಾಮ ರೆಡ್ಡಿ. ಚಿತ್ರದಲ್ಲಿ ಎಡದಿಂದ ಎರಡನೆ ವ್ಯಕ್ತಿ ಪಿ. ಎಲ್. ವೆಂಕಟರಾಮ ರೆಡ್ಡಿ.

ನಿರ್ದೇಶಕ ಟಿ ಸೋಮು ಮಾತನಾಡಿ,

ನಿರ್ದೇಶಕ ಟಿ ಸೋಮು ಮಾತನಾಡಿ,

ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ವೈನ್ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ ಸೋಮು ಮಾತನಾಡಿ, ರಾಜ್ಯದಲ್ಲಿ ವೈನ್ ಟೂರ್ ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ವೈನ್ ಮಂಡಳಿಯ ಸಹಯೋಗದಲ್ಲಿ ಮುಂದಿನ 1 ತಿಂಗಳಿನಲ್ಲಿ ವೈನ್ ಫೆಸ್ಟಿವಲ್ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೇ ಈ ಭಾಗದಲ್ಲಿ ವೈನ್ ಟೂರ್‍ಗೆ ಹೆರಿಟೇಜ್ ವೈನರಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಫಲಿತಾಂಶವನ್ನು ಕಂಡಿರುವುದು ಬಹಳ ಸಂತಸದ ವಿಷಯ ಎಂದರು.

English summary
Karnataka's Premier Winery "Heritage Winery Pvt Ltd" has witnessed huge turnout for its "Wine Tour" Concept. From Last 5 years it had got more than 1 Lakh visitors from all corners of the world. Heritage winery held a press meet to announce the success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X