ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕೈಗಾರಿಕಾ ನೀತಿಯಿಂದ ಹೆಚ್ಚು ಉದ್ಯೋಗ ಸೃಷ್ಟಿ: ಜಗದೀಶ್ ಶೆಟ್ಟರ್

|
Google Oneindia Kannada News

ಬೆಂಗಳೂರು ಅಕ್ಟೋಬರ್‌ 16: ಜಿಲ್ಲೆಗಳ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಪ್ರಮುಖ ಯೋಜನೆಯಾಗಿರುವ 'ಕಾಂಪೀಟ್‌ ವಿತ್‌ ಚೈನಾ' ಯೋಜನೆಯಡಿ ಗುರುತಿಸಲಾದ ಜಿಲ್ಲೆಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರುವಂತೆ ಶ್ರಮವಹಿಸಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿಯನ್ನು ಪಡೆದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಶಿವಮೊಗ್ಗದಲ್ಲಿ ಆಯುಷ್ ಫಾರ್ಮ, ವೆಲ್ ನೆಸ್ ಕ್ಲಸ್ಟರ್ ಸ್ಥಾಪನೆ: ಬಿಎಸ್ವೈಶಿವಮೊಗ್ಗದಲ್ಲಿ ಆಯುಷ್ ಫಾರ್ಮ, ವೆಲ್ ನೆಸ್ ಕ್ಲಸ್ಟರ್ ಸ್ಥಾಪನೆ: ಬಿಎಸ್ವೈ

ಅಲ್ಲದೆ, ಈ ಕ್ಲಸ್ಟರ್‌ ಆಧಾರಿತ ಯೋಜನೆಯಲ್ಲಿ ಬಂಡವಾಳ ಹೆಚ್ಚಾಗಿ ಹರಿದು ಬರುವಂತೆ ಮಾಡುವುದರಿಂದ ಉದ್ಯೋಗ ಸೃಷ್ಟಿ ಹಾಗೂ ರಾಜ್ಯದ ಅಭಿವೃದ್ದಿಗೆ ಬಲ ನೀಡಿದಂತಾಗುತ್ತದೆ. ಈ ಕ್ಲಸ್ಟರ್‌ ಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಾಗೂ ಹೂಡಿಕೆಗೆ ಇರುವ ಸಮಸ್ಯೆಗಳನ್ನು ಪರಿಹರಿಸಲು ತ್ವರಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ, ಕೈಗಾರಿಕೆಗಳಿಗೆ ಬೇಕಾಗಿರುವ ಅಗತ್ಯ ಭೂಮಿ ಹಾಗೂ ಇನ್ನಿತರೆ ಅನುಮತಿಗಳನ್ನು ತ್ವರಿತವಾಗಿ ನೀಡಲು ಅನುಕೂಲವಾಗುವಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಒಂದು ಸಭೆಯನ್ನು ಆಯೋಜಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್‌ ಕೃಷ್ಣಾ ಹಾಗೂ ಕ್ಲಸ್ಟರ್‌ಗಳ ನೋಡಲ್‌ ಅಧಿಕಾರಿಗಳು ಭಾಗವಹಿಸಿದ್ದರು.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಮೂಲಕ ಹೆಚ್ಚೆಚ್ಚು ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಲಾಗುವುದು, ಉದ್ಯೋಗ ಸೃಷ್ಟಿ ಪ್ರಕ್ರಿಯೆಯನ್ನು ಖಾಸಗೀಕರಣಗೊಳಿಸಲಾಗುವುದು, ಕಳೆದ ಬಜೆಟ್ ನಲ್ಲಿ ಘೋಷಣೆಯಾದ 'ಸಾರ್ಥಕ್' ಯೋಜನೆಯನ್ನು ಮುಂದುವರೆಸಲಾಗುವುದು, ಗುಜರಾತ್ ಬಂಡವಾಳ ಪ್ರದೇಶ ಕಾಯ್ದೆ-2009 ಅಧ್ಯಯನ ನಡೆಸಿ ಇಲ್ಲಿಗೆ ಅದನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

2ನೇ ಹಂತದ ನಗರಗಳಲ್ಲಿ ಕೈಗಾರಿಕೆ

2ನೇ ಹಂತದ ನಗರಗಳಲ್ಲಿ ಕೈಗಾರಿಕೆ

ರಾಜ್ಯ ಸರ್ಕಾರವು 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ 2ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಸರ್ಕಾರ ಎಲ್ಲ ರೀತಿಯಲ್ಲೂ ನೆರವಾಗಲಿದೆ ಎಂದು ತಿಳಿಸಿದರು.

ದೇಶದ ರಫ್ತಿನ ಶೇ.17.8 ರಷ್ಟು ಪಾಲನ್ನು ರಾಜ್ಯ ಹೊಂದಿದೆ: ಬಿಎಸ್ವೈದೇಶದ ರಫ್ತಿನ ಶೇ.17.8 ರಷ್ಟು ಪಾಲನ್ನು ರಾಜ್ಯ ಹೊಂದಿದೆ: ಬಿಎಸ್ವೈ

ವಿವಿಧ ನಗರಗಳಲ್ಲಿ ಕ್ಲಸ್ಟರ್ ನಿರ್ಮಾಣ

ವಿವಿಧ ನಗರಗಳಲ್ಲಿ ಕ್ಲಸ್ಟರ್ ನಿರ್ಮಾಣ

ಕೊಪ್ಪಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಟಿಕೆಗಳ ಉತ್ಪಾದನಾ ಕ್ಲಸ್ಟರ್, ಬಳ್ಳಾರಿಯ ವಸ್ತ್ರೋದ್ಯಮ ಕ್ಲಸ್ಟರ್, ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಸಿಬಿ/ ಪಿಸಿಬಿ ಕ್ಲಸ್ಟರ್, ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ತಯಾರಿಕೆ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳು, ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೊಬೈಲ್ ಫೋನ್ ಬಿಡಿಭಾಗಗಳ ಕ್ಲಸ್ಟರ್, ಕಲಬುರಗಿಯ ಸೋಲಾರ್ ಉಪಕರಣಗಳ ಉತ್ಪಾದನಾ ಕ್ಲಸ್ಟರ್ ಹಾಗೂ ಚಿತ್ರದುರ್ಗದ ಎಲ್‍ಇಡಿ ಲೈಟ್ ತಯಾರಿಕೆ ಘಟಕ ಮಾಡುವ ಯೋಜನೆಯನ್ನು ಸರ್ಕಾರ ಮಾಡಿದೆ.

ಕ್ಲಸ್ಟರ್ ಗಳ ವಿಷನ್ ಗ್ರೂಪ್‍ನ ಸದಸ್ಯರು

ಕ್ಲಸ್ಟರ್ ಗಳ ವಿಷನ್ ಗ್ರೂಪ್‍ನ ಸದಸ್ಯರು

ಕ್ಲಸ್ಟರ್ ಗಳ ವಿಷನ್ ಗ್ರೂಪ್‍ನ ಸದಸ್ಯರು ತಮ್ಮ ತಮ್ಮ ವಲಯದ ಸವಾಲುಗಳು ಹಾಗೂ ಈ ಕೈಗಾರಿಕಾ ಕ್ಲಸ್ಟರ್ ಗಳ ಸ್ಥಾಪನೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು, ಕೌಶಲ್ಯ ಅಭಿವೃದ್ಧಿ, ಸರ್ಕಾರ ಕಲ್ಪಿಸಬೇಕಾದ ಮೂಲಸೌಕರ್ಯಗಳ ಕುರಿತು ಈಗಾಗಲೇ ಸರ್ಕಾರಕ್ಕೆ ವಿವರಿಸಿದ್ದಾರೆ. ಇನ್ನಷ್ಟು ಆಳವಾದ ಅಧ್ಯಯನ ಮಾಡಿ ವರದಿ ಸಲ್ಲಿಸುವುದಾಗಿ ಈ ವಿಷನ್ ಗ್ರೂಪ್‌ಗಳ ಸದಸ್ಯರು ತಿಳಿಸಿದರು.

ಕರ್ನಾಟಕ ರಾಜ್ಯ ದೇಶದಲ್ಲಿ ಮೊದಲ ರಾಜ್ಯವೆನಿಸಿದೆ

ಕರ್ನಾಟಕ ರಾಜ್ಯ ದೇಶದಲ್ಲಿ ಮೊದಲ ರಾಜ್ಯವೆನಿಸಿದೆ

ಕರ್ನಾಟಕವು ರಫ್ತಿನಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. 2018-19 ನೇ ಸಾಲಿನಲ್ಲಿ ಕರ್ನಾಟಕ 95,180 ದಶಲಕ್ಷ ಯುಎಸ್ ಡಾಲರ್‍ನಷ್ಟು ರಫ್ತು ಮಾಡಿದ್ದು, ದೇಶದ ಒಟ್ಟಾರೆ ರಫ್ತಿನ ಶೇ.17.8 ರಷ್ಟು ಪಾಲನ್ನು ಹೊಂದಿದೆ.

ಹಲವಾರು ಹೊಸ ಹೊಸ ನೀತಿಗಳನ್ನು ತರುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಮೊದಲ ರಾಜ್ಯವೆನಿಸಿದೆ. ಅದರಲ್ಲಿ ಪ್ರಮುಖವಾಗಿ ಎಲೆಕ್ಟ್ರಿಕಲ್ ವಾಹನ ನೀತಿ, ಆಗ್ರೋ ಬ್ಯುಸಿನೆಸ್ ನೀತಿ, ಸ್ಟಾರ್ಟಪ್ ನೀತಿ, ಎನ್‍ಆರ್‍ಐ ನೀತಿ, ರೀಟೇಲ್ ಟ್ರೇಡ್ ನೀತಿ ಸೇರಿದಂತೆ ಹಲವಾರು ನೀತಿಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಹಲವಾರು ನೀತಿಗಳನ್ನು ಘೋಷಿಸಿದೆ.

English summary
Karnataka Minister for Large and Medium Industries Jagadish Shettar said Karnataka is preparing a new Industrial Policy to prioritise Jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X