• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉದ್ಯೋಗ ಸೃಷ್ಟಿಗೆ ಅದ್ಯತೆ ಅತ್ಯಗತ್ಯ: ಸಚಿವ ಆರ್ ವಿ ದೇಶಪಾಂಡೆ

By Mahesh
|

ಬೆಂಗಳೂರು, ಜನವರಿ 24: ಕರ್ನಾಟಕ ರಾಜ್ಯವು ಅಪಾರ ಸಂಖ್ಯೆಯಲ್ಲಿರುವ ಪ್ರತಿಭಾನ್ವಿತ ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸುವ ರಾಜ್ಯವಾಗುವುದು ಅತ್ಯಂತ ಮುಖ್ಯವಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಇಂದು ಅವರು, ಎರಡು ದಿನಗಳ 18ನೇ ವರ್ಷದ "ಇಂಡಿಯಾ ಸಾಫ್ಟ್-2018'' ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. 'ಬೆಂಗಳೂರು ಇಂದು ಕೇವಲ ಭಾರತದ ಸಿಲಿಕಾನ್ ವ್ಯಾಲಿಯಾಗಿ ಮಾತ್ರ ಉಳಿದುಕೊಂಡಿಲ್ಲ. ಬದಲಿಗೆ, ಇದು ಈಗ ಇಡೀ ಜಗತ್ತಿನ ಸಿಲಿಕಾನ್ ಕಣಿವೆಯಾಗಿ ಬೆಳೆದಿದೆ. ಉದ್ದಿಮೆಗಳ ಸ್ಥಾಪನೆ ಮತ್ತು ಇದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯಲ್ಲಿ ರಾಜ್ಯವು ಉಳಿದೆಲ್ಲ ರಾಜ್ಯಗಳಿಗಿಂತ ಮುಂದಿದೆ'' ಎಂದರು.

'ಪ್ರವರ್ಧಮಾನಕ್ಕೆ ಬರುತ್ತಿರುವ ಆಫ್ರಿಕಾಖಂಡದ ಹಲವು ದೇಶಗಳಲ್ಲಿ ಭಾರತೀಯ ಕಂಪನಿಗಳಿಗೆ ಉಜ್ವಲ ಭವಿಷ್ಯವಿದೆ. ನಮ್ಮಲ್ಲಿರುವ ಮಾನವ ಸಂಪನ್ಮೂಲವೇ ನಮ್ಮ ಶಕ್ತಿಯಾಗಿದೆ. ನಮ್ಮಲ್ಲಿರುವಷ್ಟು ಕೌಶಲ್ಯ ಪೂರ್ಣ ಮಾನವಶಕ್ತಿ ಮತ್ತು ಪ್ರತಿಭೆ ಅಮೆರಿಕದಲ್ಲಿ ಕೂಡ ಇಲ್ಲ ಎನ್ನುವುದನ್ನು ಉದ್ಯಮಿಗಳು ಗಮನಕ್ಕೆ ತೆಗೆದುಕೊಳ್ಳಬೇಕು' ಎಂದು ಆರ್.ವಿ. ದೇಶಪಾಂಡೆ ಅವರು ಮೇಳದಲ್ಲಿ ನೆರೆದಿದ್ದ 400ಕ್ಕೂ ಹೆಚ್ಚು ಉದ್ಯಮಿಗಳಿಗೆ ಕರೆ ನೀಡಿದರು.

'ಮೂಲಸೌಲಭ್ಯಗಳಿಗೆ ಸಂಬಂಧಿಸಿದಂತೆ ರಾಜ್ಯವು 1996 ರಷ್ಟು ಹಿಂದೆಯೇ ಸ್ಪಷ್ಟ ನೀತಿಯನ್ನು ಜಾರಿಗೆ ತಂದಿತು. ಐಟಿ-ಬಿಟಿ, ನವೋದ್ಯಮಗಳು, ವಿದ್ಯುತ್‍ಚಾಲಿತ ವಾಹನಗಳು ಹೀಗೆ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯವು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಅತ್ಯಂತ ಪಾರದರ್ಶಕ ನೀತಿಗಳನ್ನುರೂಪಿಸಿರುವ ಹೆಗ್ಗಳಿಕೆ ಹೊಂದಿದೆ'' ಎಂದು ಅವರು ವಿವರಿಸಿದರು.

"ಜಗತ್ತಿನ ಎಲ್ಲ ಕಡೆಗಳಲ್ಲೂ ಸಮಸ್ಯೆಗಳಿವೆ. ಹಾಗೆಯೇ ಬೆಂಗಳೂರಿನಲ್ಲೂ ಕೆಲವು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಲು ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ.

ರಾಜ್ಯದಲ್ಲಿ ಬೆಂಗಳೂರಿನ ಜತೆಗೆ ಕಲಬುರಗಿ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮುಂತಾದೆಡೆಗಳಲ್ಲೂ ಉದ್ದಿಮೆಗಳನ್ನು ಸ್ಥಾಪಿಸಲು ತಕ್ಕ ವಾತಾವರಣವಿದೆ. ಉದ್ದಿಮೆಗಳಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ವೈಮಾನಿಕ ಸಂಪರ್ಕ ವಲಯವನ್ನು ಸುಧಾರಿಸಲಾಗುತ್ತಿದೆ'' ಎಂದು ಸಚಿವರು ಹೇಳಿದರು.

'ಬೆಂಗಳೂರಿನಲ್ಲಿ ಮೂಲಸೌಲಭ್ಯ ಸುಧಾರಣೆ ದೃಷ್ಟಿಯಿಂದ ಮೆಟ್ರೊ, ಪೆರಿಫೆರಲ್‍ರಸ್ತೆ, ಮೇಲ್ಸೇತುವೆಗಳು, ಸಿಗ್ನಲ್‍ ರಹಿತ ರಸ್ತೆಗಳು, ಅತ್ಯುತ್ತಮಗುಣಮಟ್ಟದ ರಸ್ತೆಗಳು, ಇತ್ಯಾದಿಗಳನ್ನುಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನೊಂದೆಡೆ, ರಾಜ್ಯದಲ್ಲಿ ವರ್ಷಕ್ಕೆ 13 ಲಕ್ಷಕ್ಕೂ ಹೆಚ್ಚು ಯುವಜನರನ್ನು ಕೌಶಲ್ಯ ಪೂರ್ಣರನ್ನಾಗಿ ಮಾಡಲಾಗುತ್ತಿದೆ' ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.

ಸಮಾರಂಭದಲ್ಲಿ ಸಣ್ಣ ಕೈಗಾರಿಕಾ ಸಚಿವೆ ಡಾ. ಗೀತಾ ಮಹದೇವಪ್ರಸಾದ್, ಇಎಸ್‍ಸಿ ಅಧ್ಯಕ್ಷ ಪ್ರಸಾದ್‍ಗರಪತಿ, ಇಂಡಿಯಾ ಸಾಫ್ಟ್‍ನಅಧ್ಯಕ್ಷ ನಳಿನ್‍ ಕೊಹ್ಲಿ, ಇಎಸ್‍ಸಿ ಉಪಾಧ್ಯಕ್ಷ ಸೇಥಿಯಾ, ರಾಜ್ಯ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತ, ಇಎಸ್‍ಸಿ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಕೆ.ಸರೀನ್ ಮುಂತಾದವರು ಉಪಸ್ಥಿತರಿದ್ದರು. ಎರಡು ದಿನಗಳ ಈ ಮೇಳದಲ್ಲಿ 400ಕ್ಕೂ ಹೆಚ್ಚು ಮಳಿಗೆಗಳಿದ್ದು, 60ಕ್ಕೂ ಹೆಚ್ಚು ದೇಶಗಳ ಉದ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka with its vast reservoirs of talent and skill will become the hub of employment generation, said Large and Medium Industries and Infrastructure Development R V Deshpande in Bengaluru on Wednesday. He was speaking at two day India Soft-2018 conclave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more