ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಿನ್ನ' ಖರೀದಿಸುವವರಿಗೆ ಬಂಗಾರದಂಥ ಸುದ್ದಿ ಕೊಟ್ಟ ರಾಜ್ಯ ಬಿಜೆಪಿ ಸರ್ಕಾರ!

|
Google Oneindia Kannada News

ಬೆಂಗಳೂರು, ಮಾ. 19: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಜನ-ಸಾಮಾನ್ಯರ ಚಿನ್ನದ ಮೇಲಿನ ಆಸೆ ಪೂರೈಸಲು ಇದೀಗ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು ಸರ್ಕಾರವೇ ನೇರವಾಗಿ ಚಿನ್ನ ಮಾರಾಟ ಮಾಡಲು ಮುಂದಾಗಿದೆ. ಆ ಮೂಲಕ ಯಾವುದೇ ಆತಂಕವಿಲ್ಲದೆ ಜನ ಸಾಮಾನ್ಯರು ಇನ್ಮುಂದೆ ಚಿನ್ನ ಖರೀದಿಸಬಹುದಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ 'ಕರ್ನಾಟಕ ಗೋಲ್ಡ್ ಜ್ಯುವೆಲ್ಲರಿ' ಮಳಿಗೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ನಂತರದ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಸರ್ಕಾರಿ ಸ್ವಾಮ್ಯದ ಬಂಗಾರದ ಅಂಗಡಿ ತೆರೆಯುವ ಚಿಂತನೆ ರಾಜ್ಯ ಸರ್ಕಾರಕ್ಕಿದೆ.

ಮಾರ್ಚ್ 19ರಂದು ಚಿನ್ನದ ದರದಲ್ಲಿ ಭಾರಿ ಏರಿಕೆ, ಬೆಳ್ಳಿ ತುಸು ಅಗ್ಗಮಾರ್ಚ್ 19ರಂದು ಚಿನ್ನದ ದರದಲ್ಲಿ ಭಾರಿ ಏರಿಕೆ, ಬೆಳ್ಳಿ ತುಸು ಅಗ್ಗ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ನಂತರ ವಿನೂತನ ಯೋಜನೆಗಳ ಮೂಲಕ ಇಲಾಖೆಯನ್ನು ಜನಸಾಮಾನ್ಯರತ್ತ ಕೊಂಡೊಯ್ಯಲು ಪ್ರಯತ್ನ ನಡೆಸಿರುವ ಸಚಿವ ಮುರುಗೇಶ್ ನಿರಾಣಿ ಅವರು ಈಗ ಮತ್ತೊಂದು ಜನಪ್ರಿಯ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.

ಸರ್ಕಾರಿ ಚಿನ್ನದ ಅಂಗಡಿಗಳು

ಸರ್ಕಾರಿ ಚಿನ್ನದ ಅಂಗಡಿಗಳು

ದೇಶದಲ್ಲಿ ಇದೇ ಮೊದಲ ಬಾರಿಗೆ ಹಾಗೂ ರಾಷ್ಟ್ರದಲ್ಲೇ ಪ್ರಥಮ ಎನ್ನಲಾದ ಸರಕಾರಿ ಒಡೆತನದ ಆಭರಣಗಳ ಮಳಿಗೆ (ಜ್ಯುವೆಲ್ಲರಿ ಶಾಪ್) ರಾಜ್ಯದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ. ಈ ಮಳಿಗೆಗಳನ್ನು ಸರ್ಕಾರವೇ ನಿರ್ವಹಣೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಭರಣಗಳನ್ನು ತಯಾರಿಸಲಿದೆ. ಮೈಸೂರು ಸಿಲ್ಕ್, ಮೈಸೂರ್ ಸ್ಯಾಂಡಲ್ ಸೋಪ್ ಹಾಗೂ ಕಾವೇರಿ ಕೈಮಗ್ಗ (ಹ್ಯಾಂಡ್ ಲೂಮ್ಸ್) ಮಾದರಿಯಲ್ಲಿ ಸರ್ಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಕಟಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಳಿಗೆಗಳನ್ನು ತೆರೆಯಲಾಗುವುದು. ಆರಂಭದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ (ಟೈರ್ 1) ನಗರಗಳಲ್ಲಿ ಈ ಮಳಿಗೆಗಳು ಕಾರ್ಯಾರಂಭ ಮಾಡಲಿವೆ. ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ, ಮುಂಬರುವ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಈ ಆಭರಣ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

'ಗಂಡಬೇರುಂಢ' ಗುರುತಿನ ಚಿನ್ನದ ನಾಣ್ಯಗಳು

'ಗಂಡಬೇರುಂಢ' ಗುರುತಿನ ಚಿನ್ನದ ನಾಣ್ಯಗಳು

ಮದುವೆ, ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಗ್ರಾಹಕರಿಗೆ ಉಡುಗೊರೆಯಾಗಿ ನೀಡಲು ಅನುಕೂಲವಾಗುವಂತೆ ಇನ್ನು ಮುಂದೆ ಕರ್ನಾಟಕ ರಾಜ್ಯದ ಲಾಂಛನವಾದ 'ಗಂಡುಬೇರುಂಡ' ಗುರುತಿನ ಚಿನ್ನದ ನಾಣ್ಯಗಳನ್ನು ಸಹ ಹೊರತರಲು ಗಣಿ ಇಲಾಖೆ ತೀರ್ಮಾನಿಸಿದೆ.


ಚಿನ್ನದ ನಾಣ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಅಭರಣ ಮಾಲೀಕರ ಸಂಘ ಸಭೆಯಲ್ಲಿ ಮನವಿ ಮಾಡಿತು. ಇದಕ್ಕೂ ಅಸ್ತು ಎಂದ ಸಚಿವ ನಿರಾಣಿ ಅವರು, ಶೀಘ್ರದಲ್ಲೇ ಆಭರಣ ಮಳಿಗೆಗಳಲ್ಲಿ ಚಿನ್ನದ ನಾಣ್ಯಗಳನ್ನು ಹೊರತರುವುದಾಗಿ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಚಿನ್ನದ SEZ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಚಿನ್ನದ SEZ

ಕಲ್ಯಾಣ ಕರ್ನಾಟಕ ಪ್ರದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಿನ್ನದ ವಿಶೇಷ ಆರ್ಥಿಕ ವಲಯ (S.E.Z) ಸ್ಥಾಪನೆ ಮಾಡುವ ಮತ್ತೊಂದು ಮಹತ್ವದ ತೀರ್ಮಾನವನ್ನು ಮುರುಗೇಶ್ ನಿರಾಣಿ ಪ್ರಕಟಿಸಿದರು. ವಿಶೇಷ ಆರ್ಥಿಕ ವಲಯ ಸ್ಥಾಪನೆಯಾದರೆ, ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಲಿದ್ದಾರೆ. ಇದರಿಂದ ಆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಉತ್ಪಾದನಾ ಸಾಮರ್ಥ್ಯವನ್ನು ವರ್ಷದ ಅಂತ್ಯಕ್ಕೆ ದ್ವಿಗುಣಗೊಳಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ.

ಪ್ರಸ್ತುತ ಹಟ್ಟಿ ಚಿನ್ನದ ಗಣಿಯಲ್ಲಿ 1500-1800 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಲಾಗುತ್ತದೆ. 2022ರ ವೇಳೆಗೆ ಉತ್ಪಾದನೆಯನ್ನು 5000 ಕೆ.ಜಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ನಿರಾಣಿ ವಿವರಿಸಿದ್ದಾರೆ.

Recommended Video

ಅಬ್ಬಾ ! ಬೆಲೆ ಎಷ್ಟು ಕಡಿಮೆ ಆಗಿದೆ ಗೊತ್ತಾ !! | Oneindia Kannada
ಹಟ್ಟಿ ಚಿನ್ನದ ಗಣಿಗೆ ಮರುನಾಮಕರಣ

ಹಟ್ಟಿ ಚಿನ್ನದ ಗಣಿಗೆ ಮರುನಾಮಕರಣ

ಹಟ್ಟಿ ಚಿನ್ನದ ಗಣಿ (ಹಟ್ಟಿ ಗೋಲ್ಡ್‌ ಮೈನ್ಸ್‌)ಗೆ ಮರು ನಾಮಕರಣ ಮಾಡಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ. ಹಟ್ಟಿ ಚಿನ್ನದ ಗಣಿಯನ್ನು ಇನ್ನುಮುಂದೆ 'ಕರ್ನಾಟಕ ರಾಜ್ಯ (ಹಟ್ಟಿ) ಚಿನ್ನದ ಗಣಿ' (ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್ಸ್) ಎಂದು ಮರು ನಾಮಕರಣ ಮಾಡಲಾಗಿದೆ. ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಮರುನಾಮಕರಣದ ಕುರಿತು ಸಚಿವ ಮುರುಗೇಶ್ ನಿರಾಣಿ ವಿವರಿಸಿದ್ದಾರೆ.

English summary
In yet another pioneering step, the state government is planning to open jewellery retail outlets and promote the yellow metal with ‘Brand Karnataka’ image. The state is also planning to sell gold coins with state emblem and aiming to partner with private jewellers. Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X