ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Motor Vehicle Tax: ಜುಲೈ 15ರವರೆಗೂ ದಂಡರಹಿತ ತೆರಿಗೆ ಪಾವತಿ ಅವಕಾಶ

|
Google Oneindia Kannada News

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಮೋಟಾರು ವಾಹನ ತೆರಿಗೆ ಪಾವತಿ ದಿನಾಂಕವನ್ನು ಜುಲೈ 15ರವರೆಗೂ ವಿಸ್ತರಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಕೊವಿಡ್-19 ಸೋಂಕಿನ ಭೀತಿ ಹಿನ್ನೆಲೆ ಈ ಹಿಂದೆ ಎರಡು ಬಾರಿ ಮೋಟಾರು ವಾಹನ ತೆರಿಗೆ ಪಾವತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಮೂರನೇ ಬಾರಿಗೆ ದಂಡ ರಹಿತ ತೆರಿಗೆ ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ.

ಹೊಸ ವಾಹನಗಳ ನೋಂದಣಿ ಹೊರತುಪಡಿಸಿ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ದಂಡ ರಹಿತ ತೆರಿಗೆ ಪಾವತಿಸಲು ಏಪ್ರಿಲ್ 15 ಕೊನೆ ದಿನಾಂಕ ಎಂದು ಘೋಷಿಸಲಾಗಿತ್ತು. ನಂತರ ಈ ದಿನಾಂಕವನ್ನು ಮೇ 15ರವರೆಗೂ ವಿಸ್ತರಿಸಲಾಗಿತ್ತು. ರಾಜ್ಯದಲ್ಲಿ ಕೊರೊನಾವೈರಸ್ ಎರಡನೇ ಅಲೆ ಹೆಚ್ಚಿದ ಹಿನ್ನೆಲೆ ಜುಲೈ 15ರವರೆಗೂ ದಂಡರಹಿತ ವಾಹನ ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ.

ಹೋಟೆಲ್, ರೆಸ್ಟೋರೆಂಟ್, ಹೋಟೆಲ್ ಆಸ್ತಿ ತೆರಿಗೆ ವಿನಾಯಿತಿ

ಹೋಟೆಲ್, ರೆಸ್ಟೋರೆಂಟ್, ಹೋಟೆಲ್ ಆಸ್ತಿ ತೆರಿಗೆ ವಿನಾಯಿತಿ

2021-22ನೇ ಆರ್ಥಿಕ ಸಾಲಿನಲ್ಲಿ ಕೊರೊನಾವೈರಸ್ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಹಾಗೂ ಮನರಂಜನಾ ಪಾರ್ಕ್ ಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಲಾಗಿಗೆ. ಇದರ ಜೊತೆಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ವಿದ್ಯುಚ್ಛಕ್ತಿ ಬಿಲ್ ಪಾವತಿಗೂ ವಿನಾಯಿತಿ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಘೋಷಿಸಿದ್ದಾರೆ.

ಅಬಕಾರಿ ಸನ್ನದು ಶುಲ್ಕ, ಹೆಚ್ಚುವರಿ ಸನ್ನದು ಶುಲ್ಕ ಪಾವತಿ

ಅಬಕಾರಿ ಸನ್ನದು ಶುಲ್ಕ, ಹೆಚ್ಚುವರಿ ಸನ್ನದು ಶುಲ್ಕ ಪಾವತಿ

"ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಪ್ರವಾಸಿ ತಾಣಗಳಲ್ಲಿನ ಮಾರ್ಗದರ್ಶಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಅವರ ಖಾತೆಗೆ ನೇರವಾಗಿ 500 ರೂಪಾಯಿ ಸಹಾಯ ಧನವನ್ನು ಜಮೆ ಮಾಡಲಾಗುವುದು. ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕದ ಶೇ.50ರಷ್ಟು ತೆರಿಗೆಯನ್ನು ಪಾವತಿಸಬೇಕು. ಡಿಸೆಂಬರ್ 31ರೊಳಗೆ ಬಾಕಿ ಉಳಿದ ಶೇ.50ರಷ್ಟು ಶುಲ್ಕ ಪಾವತಿಸತಕ್ಕದ್ದು," ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ರಸ್ತೆ ಬಳಕೆಯ ಟೋಲ್ ಶುಲ್ಕದಲ್ಲಿ ಏರಿಕೆ

ಎಲೆಕ್ಟ್ರಾನಿಕ್ ಸಿಟಿ ರಸ್ತೆ ಬಳಕೆಯ ಟೋಲ್ ಶುಲ್ಕದಲ್ಲಿ ಏರಿಕೆ

ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ರಸ್ತೆ ಬಳಕೆಯ ಟೋಲ್ ಶುಲ್ಕವನ್ನು ಜುಲೈ 1ರಿಂದ ಮತ್ತಷ್ಟು ಏರಿಕೆ ಮಾಡಲಾಗಿದೆ. ಬೈಕ್ ಸವಾರರಿಗೆ 20 ರೂ. ನಿಗದಿಯಾಗಿದ್ದು, ಹಿಂತಿರುಗಿ ಬರುವುದಕ್ಕೆ (ಟು ಸೈಡ್) 30 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಕಾರು, ಜೀಪ್, ವ್ಯಾನ್​ಗಳಿಗೆ 50 ರೂ. ಮತ್ತು ಹಿಂತಿರುಗಿ ಬರುವುದಕ್ಕೆ 80 ರೂ. ಶುಲ್ಕ ನಿಗದಿಯಾಗಿದೆ. ಮಿನಿ ಬಸ್, ಲುಘು ವಾಹನಕ್ಕೆ 80 ರೂ. ವಾಪಸ್ ಬಂದರೆ 110 ರೂ. ಚಾರ್ಜ್ ಮಾಡಲಾಗುತ್ತದೆ. ಬಸ್, ಸರಕು ಸಾಗಾಣಿಕೆ ವಾಹನಗಳಿ​ಗೆ 145 ರೂ. ಹಿಂತಿರುಗಿ ಬಂದರೆ 220 ರೂ. ಟೋಲ್ ದರವನ್ನು ವಿಧಿಸಲಾಗುತ್ತದೆ.

ಭಾರಿ ವಾಹನಗಳಿಗೆ 295 ರೂ. ಹಾಗೂ ಹಿಂತಿರುಗಿ ಬಂದರೆ 440 ರೂ. ಟೋಲ್ ಶುಲ್ಕ ದರ ನಿಗದಿಯಾಗಿದೆ. ವಾಹನಗಳ ಮಾಸಿಕ ಪಾಸ್​ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳವಾಗಿದ್ದು, ಶೇಕಡಾ 75ರಿಂದ 80ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ತಿಂಗಳ ಪಾಸ್ ದರ 625 ರೂಪಾಯಿ, ಕಾರು, ಜೀಪ್, ವ್ಯಾನ್ಸ್​ಗೆ ಟೋಲ್​ನ ಮಾಸಿಕ ಪಾಸ್ ದರ 1,570 ರೂ. ಲಘು ವಾಹನಗಳಿಗೆ 4,390 ರೂ. ಟ್ರಕ್, ಬಸ್​ಗಳಿಗೆ ತಿಂಗಳ ಪಾಸ್ ದರ 4,390 ರೂ. ಭಾರಿ ವಾಹನಗಳ ತಿಂಗಳ ಪಾಸ್ ದರ 8,780 ರೂ. ಆಗಿದೆ.

ಎಲೆಕ್ಟ್ರಾನಿಕ್ ಸಿಟಿ ಟೋಲ್ ಶುಲ್ಕ ಹೆಚ್ಚಳಕ್ಕೆ ವಿರೋಧ

ಎಲೆಕ್ಟ್ರಾನಿಕ್ ಸಿಟಿ ಟೋಲ್ ಶುಲ್ಕ ಹೆಚ್ಚಳಕ್ಕೆ ವಿರೋಧ

ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ರಸ್ತೆ ಬಳಕೆ ಶುಲ್ಕ ಹೆಚ್ಚಳವಾದ ಹಿನ್ನೆಲೆ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಟೋಲ್ ಇರುವ ಸುತ್ತಮುತ್ತಲೂ ಐಟಿ ಕಂಪನಿಗಳು, ಹಲವು ಕಾರ್ಖಾನೆಗಳು ಇವೆ. ಕೆ.ಆರ್ ಮಾರ್ಕೆಟ್​ನ ಸಿಂಗಸಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತರಕಾರಿ ವ್ಯಾಪಾರಿಗಳಿಗೆ ಟೋಲ್ ರಸ್ತೆಯನ್ನೇ ಬಳಸಿ ಹೋಗಬೇಕಾದ ಅನಿವಾರ್ಯ ಎದುರಾಗಿದ್ದು, ಕೂಡಲೇ ಟೋಲ್ ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮಧ್ಯಸ್ಥಿಕೆ ವಹಿಸಲು ರೈತರು ಆಗ್ರಹಿಸಿದ್ದಾರೆ.

English summary
Karnataka Govt Extends Motor Vehicle Tax Payment without Penalty till July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X