ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಗಿಲಿಗೆ ಮದ್ಯ ಪೂರೈಕೆ, ಕರ್ನಾಟಕದ ಯೋಜನೆ

|
Google Oneindia Kannada News

ಬೆಂಗಳೂರು, ಜುಲೈ 30: ಭಾರತದಲ್ಲಿ ಲಾಕ್ ಡೌನ್ ನಡುವೆಯೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಬಗ್ಗೆ ಅನೇಕ ರಾಜ್ಯಗಳು ಚಿಂತನೆ ನಡೆಸಿ, ಜಾರಿಗೆ ತಂದಿದ್ದು ನೆನಪಿರಬಹುದು. ಈಗ ಹೋಮ್ ಡೆಲಿವರಿ ಮೂಲಕ ಮದ್ಯ ಪೂರೈಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಕೇರಳ ಮಾದರಿಯಲ್ಲಿ ಆಪ್ ಅಧಾರಿತ ಆನ್ ಲೈನ್ ಮದ್ಯ ಪೂರೈಕೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಅಬಕಾರಿ ಇಲಾಖೆ ಮುಂದಾಗಿದೆ. ನಂತರ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗಿದೆ.

ಎಣ್ಣೆ ಅಂಗಡಿ ಮುಂದೆ ಕ್ಯೂ ಯಾಕೆ; ಇನ್ಮುಂದೆ ಮನೆ ಬಾಗಿಲಿಗೆ ಮದ್ಯ!ಎಣ್ಣೆ ಅಂಗಡಿ ಮುಂದೆ ಕ್ಯೂ ಯಾಕೆ; ಇನ್ಮುಂದೆ ಮನೆ ಬಾಗಿಲಿಗೆ ಮದ್ಯ!

ಈ ಕುರಿತಂತೆ ಮದ್ಯ ದಾಸ್ತಾನುದಾರರ ಜೊತೆ ಅಬಕಾರಿ ಇಲಾಖೆ ಆಯುಕ್ತ ಎಂ ಲೋಕೇಶ್ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸರಿಯಾದರೆ ಆಗಸ್ಟ್ ತಿಂಗಳಿನಿಂದ ಆನ್ ಲೈನ್ ಮದ್ಯ ಪೂರೈಕೆ ಆರಂಭವಾಗುವ ಸಾಧ್ಯತೆಯಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ 6 ರಾಜ್ಯಗಳಲ್ಲಿ ಆನ್ ಲೈನ್ ಡೆಲಿವರಿ ವ್ಯವಸ್ಥೆ ಇತ್ತೀಚೆಗೆ ಜಾರಿಗೆ ಬಂದಿದೆ.

ಮಾರ್ಚ್ ತಿಂಗಳಿನಿಂದ ಕೋವಿಡ್ 19 ಕಾರಣಕ್ಕೆ ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ ಗಳು ಬಂದ್ ಆಗಿವೆ. ಆನ್ ಲಾಕ್ 3.0ರ ಮಾರ್ಗಸೂಚಿಯಲ್ಲೂ ಆನ್ ಲೈನ್ ಮದ್ಯ ಪೂರೈಕೆ ಬಗ್ಗೆ ಸರ್ಕಾರ ಸೂಚಿಸಿದೆ ಎಂದು ಅಧಿಕಾರಿ ಲೋಕೇಶ್ ಹೇಳಿದರು.

ಆನ್ ಲೈನ್ ಮೂಲಕ ಮದ್ಯ ಪೂರೈಕೆ

ಆನ್ ಲೈನ್ ಮೂಲಕ ಮದ್ಯ ಪೂರೈಕೆ

ಪಂಜಾಬ್ ಸರ್ಕಾರ ಈಗಾಗಲೇ ಆನ್ ಲೈನ್ ಮೂಲಕ ಬುಕ್ ಮಾಡಿದ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶುರು ಮಾಡಿದೆ. ಇನ್ನು, ಕೆಲವು ರಾಜ್ಯಗಳಲ್ಲಿ ಇಷ್ಟರಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿವೆ ಎಂದು ಇಂಡಸ್ಟ್ರಿ ಲೈಸಿಂಗ್ ಬಾಡಿ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ(ISWAI)ದ ಚೇರ್ ಮನ್ ಅಮ್ರಿತ್ ಕಿರಣ್ ಸಿಂಗ್ ತಿಳಿಸಿದ್ದಾರೆ.

 ವೈನ್ ಮರ್ಚಂಟ್ಸ್ ಅಸೋಸಿಯೇಷನ್

ವೈನ್ ಮರ್ಚಂಟ್ಸ್ ಅಸೋಸಿಯೇಷನ್

ಕೊವಿಡ್ 19 ರ ಸಮಸ್ಯೆಯಿಂದ ತೊಂದರೆಗೆ ಒಳಗಾಗಿರುವ ಮಧ್ಯಮ ವರ್ಗದ ಉದ್ದಿಮೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಒಳಿತಿಗಾಗಿ ದೇಶದಲ್ಲಿಯೇ ಮೊನೊಪಾಲಿ ವ್ಯವಸ್ಥೆಯನ್ನು ನಿಲ್ಲಿಸಬೇಕಾಗಿರುವ ಈ ಸಂದರ್ಭದಲ್ಲಿ ಮದ್ಯ ಉದ್ಯಮದಲ್ಲಿ ಆನ್ ಲೈನ್ ಪದ್ಧತಿ ಬೇಡ. ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ವ್ಯವಸ್ಥೆ ಬಗ್ಗೆ ಕರ್ನಾಟಕದಲ್ಲಿ ಯಾಕೆ ತುರ್ತಾಗಿ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರಶ್ನಿಸಿದ್ದಾರೆ.

26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆ

26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆ

2020-21ರ ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಯು ಬರೋಬ್ಬರಿ 26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಲಾಕ್ಡೌನ್ ಅವಧಿಯಲ್ಲೂ ಮದ್ಯ ಮಾರಾಟ ಭರ್ಜರಿಯಾಗಿದ್ದು ಒಟ್ಟಾರೆ, 2146.84 ಕೋಟಿ ರು ಮೌಲ್ಯದ ಮದ್ಯ ಮಾರಾಟವಾಗಿದೆ.

ಬಜೆಟ್ ನಲ್ಲಿ ಹೇಳಿದಂತೆ ಶೇ 6 ರಷ್ಟು ಹಾಗೂ ಈಗ ಶೇ 11ರಷ್ಟು ಸೇರಿಸಿ ಶೇ 17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ. ಮದ್ಯ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಈ ಬಾರಿಗೆ ಹೊಸ ತೆರಿಗೆ ಸೇರಿದ್ದರಿಂದ ಹೆಚ್ಚು ರಾಜಧನ ಸರ್ಕಾರಕ್ಕೆ ಬರಲಿದೆ ಎಂದು ಸಚಿವ ನಾಗೇಶ್ ಹೇಳಿದರು.

 ಸ್ಥಳೀಯ ಹೋಮ್ ಡೆಲಿವರಿ ಕಂಪನಿ ಜೊತೆ ಒಪ್ಪಂದ

ಸ್ಥಳೀಯ ಹೋಮ್ ಡೆಲಿವರಿ ಕಂಪನಿ ಜೊತೆ ಒಪ್ಪಂದ

ಆಯಾ ರಾಜ್ಯಗಳಲ್ಲಿ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಯಾವುದೇ ಸ್ಥಳೀಯ ಹೋಮ್ ಡೆಲಿವರಿ ಕಂಪನಿಗಳ ಜೊತೆಗಾದರೂ ಒಪ್ಪಂದ ಮಾಡಿಕೊಳ್ಳಲಿ. ಕೇವಲ ಝೋಮ್ಯಾಟೋ ಅಷ್ಟೇ ಅಲ್ಲ, ಸ್ವಿಗ್ಗಿ, ಹಿಪ್ ಬಾರ್ ಕಂಪನಿಗಳ ಮೂಲಕ ಮದ್ಯವನ್ನು ಹೋಮ್ ಡೆಲಿವರಿಗೆ ಬಳಸಿಕೊಳ್ಳಬಹುದು. ಈ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಡಲಾಗಿದೆ. ಯಾವುದೇ ಹೋಮ್ ಡೆಲಿವರಿ ಕಂಪನಿಯಾದರೂ ISWAI ಸದಸ್ಯ ಕಂಪನಿಗಳ ಅಭ್ಯಂತರವಿಲ್ಲ ಎಂದು ಅಮ್ರತ್ ಕಿರಣ್ ಸಿಂಗ್ ತಿಳಿಸಿದ್ದಾರೆ.

English summary
Karnataka excise department is planning to allow online sale of liquor in Bengaluru via mobile apps later it will be extended to the rest of the state through MSIL shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X