ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬ್ಯಾಂಕ್‌ಗೆ 4 ಕಂಪನಿಗಳಿಂದ 285 ಕೋಟಿ ರುಪಾಯಿ ವಂಚನೆ

|
Google Oneindia Kannada News

ನವದೆಹಲಿ, ಜೂನ್ 6: ಖಾಸಗಿ ವಲಯದ ಕರ್ನಾಟಕ ಬ್ಯಾಂಕ್‌ಗೆ, ಡಿಎಚ್‌ಎಫ್‌ಎಲ್ ಸೇರಿದಂತೆ ನಾಲ್ಕು ಕಂಪನಿಗಳು ಸಾಲ ಪಡೆದು ಮರುಪಾವತಿಸದೇ ಬರೋಬ್ಬರಿ 285 ಕೋಟಿ ರುಪಾಯಿ ವಂಚಿಸಿರುವುದಾಗಿ ವರದಿ ಮಾಡಿದೆ.

Recommended Video

ಪಕ್ಷದ ಮುಖಂಡರನ್ನ ವಾಪಸ್ ಕರೆತರೋ ಬಿಗ್ಗೆ ಮಾತನಾಡಿದ ಡಿಕೆಶಿ | DK Shivakumar | Oneindia Kannada

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಡಿಎಚ್‌ಎಫ್‌ಎಲ್), ರಿಲಿಗೇರ್ ಫಿನ್‌ವೆಸ್ಟ್, ಫೆಡರ್ಸ್ ಎಲೆಕ್ಟ್ರಿಕ್ ಮತ್ತು ಎಂಜಿನಿಯರಿಂಗ್ ಲಿಮಿಟೆಡ್ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ ನಿಂದ 2009 ರಿಂದ 2014 ರ ಅವಧಿಯಲ್ಲಿ ಒಟ್ಟು 285.52 ಕೋಟಿ ರುಪಾಯಿ ವಂಚಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ತಿಳಿಸಿದೆ.

ಎಸ್‌ಬಿಐ ಲಾಭದಲ್ಲಿ 4 ಪಟ್ಟು ಏರಿಕೆ: ಮಾರ್ಚ್‌ ತ್ರೈಮಾಸಿಕದಲ್ಲಿ 3,581 ಕೋಟಿ ಲಾಭಎಸ್‌ಬಿಐ ಲಾಭದಲ್ಲಿ 4 ಪಟ್ಟು ಏರಿಕೆ: ಮಾರ್ಚ್‌ ತ್ರೈಮಾಸಿಕದಲ್ಲಿ 3,581 ಕೋಟಿ ಲಾಭ

ಈ ನಾಲ್ಕು ಕಂಪನಿಗಳ ಪೈಕಿ ಡಿಎಚ್‌ಎಫ್‌ಎಲ್ ಅತಿ ಹೆಚ್ಚು ಅಂದರೆ 180.13 ಕೋಟಿ ರುಪಾಯಿ ವಂಚಿಸಿದೆ.

Karnataka Bank Reports Rs 285 Crore Fraud In 4 Loan Accounts

''2014 ರಿಂದ ನಮ್ಮೊಂದಿಗೆ ವ್ಯವಹರಿಸುವ ಡಿಎಚ್‌ಎಫ್‌ಎಲ್ ಒಕ್ಕೂಟದ ವ್ಯವಸ್ಥೆಯಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದೆ, ಅದರ ಸದಸ್ಯ ಬ್ಯಾಂಕುಗಳಲ್ಲಿ ನಾವು ಒಬ್ಬರಾಗಿದ್ದೇವೆ. ಖಾತೆಯ ನಡವಳಿಕೆ ಮತ್ತು ಇತರ ಬೆಳವಣಿಗೆಗಳಲ್ಲಿ ಆರಂಭಿಕ ಎಚ್ಚರಿಕೆ ಸಂಕೇತಗಳ(ಇಡಬ್ಲ್ಯೂಎಸ್) ಗಮನಿಸಿ, ಅದರ ಖಾತೆಯನ್ನು ನವೆಂಬರ್ 11, 2019 ರಂದು ಕೆಂಪು ಪಟ್ಟಿಗೆ ಸೇರಿಸಲಾಗಿದೆ'' ಎಂದು ತಿಳಿಸಿದೆ.

ಡಿಎಚ್‌ಎಫ್‌ಎಲ್ ರೀತಿಯಲ್ಲಿ 2014 ರಿಂದ ವ್ಯವಹರಿಸುತ್ತಿದ್ದ ರಿಲಿಗೇರ್ ಫಿನ್‌ವೆಸ್ಟ್ 43.44 ಕೋಟಿ ರುಪಾಯಿ, ಫೆಡರ್ಸ್ ಎಲೆಕ್ಟ್ರಿಕ್ 41.30 ಕೋಟಿ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ 20.65 ಕೋಟಿ ರುಪಾಯಿ ವಂಚಿಸಿದೆ ಎಂದು ಬ್ಯಾಂಕ್ ತಿಳಿಸಿದೆ.

ಮನೆ, ಕಾರು ಖರೀದಿ ಇನ್ನು ಅಗ್ಗ: ಬಡ್ಡಿ ದರ ಕಡಿತಗೊಳಿಸಿದ ದೇಶದ 2ನೇ ದೊಡ್ಡ ಬ್ಯಾಂಕ್ಮನೆ, ಕಾರು ಖರೀದಿ ಇನ್ನು ಅಗ್ಗ: ಬಡ್ಡಿ ದರ ಕಡಿತಗೊಳಿಸಿದ ದೇಶದ 2ನೇ ದೊಡ್ಡ ಬ್ಯಾಂಕ್

ಈ ಕಂಪನಿಗಳ ಸಾಲ ಖಾತೆಗಳನ್ನು ಅಕ್ಟೋಬರ್ 30, 2019 ರಂದು ಅನುತ್ಪಾದಕ ಆಸ್ತಿ(NPA) ಎಂದು ವರ್ಗೀಕರಿಸಲಾಗಿದೆ. ಈ ನಾಲ್ಕು ಕಂಪನಿಗಳಿಂದ ಒಟ್ಟಾರೆ 285.52 ಕೋಟಿ ವಂಚನೆಯಾಗಿದೆ ಎಂದು ಕರ್ನಾಟಕ ಬ್ಯಾಂಕ್ ಆರ್‌ಬಿಐಗೆ ತಿಳಿಸಿದೆ.

English summary
Private sector lender Karnataka Bank has reported to the RBI that it has been defrauded of over Rs 285 crore consequent to loans gone bad to 4 entities including DHFL
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X