ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬ್ಯಾಂಕ್ ತ್ರೈಮಾಸಿಕ ನಿವ್ವಳ ಲಾಭ ಶೇಕಡಾ 10ರಷ್ಟು ಏರಿಕೆ

|
Google Oneindia Kannada News

ಬೆಂಗಳೂರು, ಜನವರಿ 12: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಕರ್ನಾಟಕ ಬ್ಯಾಂಕ್ ಪ್ರಕಟಿಸಿದ್ದು, ನಿವ್ವಳ ಲಾಭವು ಶೇಕಡಾ 10ರಷ್ಟು ಏರಿಕೆಗೊಂಡು 135 ಕೋಟಿ ರೂಪಾಯಿಗೆ ತಲುಪಿದೆ ಎಂದು ವರದಿ ಮಾಡಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 123 ಕೋಟಿಗಳಷ್ಟಿದ್ದು, ಶೇಕಡಾ 10ರಷ್ಟು ಲಾಭ ಸಾಧಿಸಿದೆ.

ಬ್ಯಾಂಕ್‌ನ ಆಸ್ತಿಯ ಗುಣಮಟ್ಟವು ತ್ರೈಮಾಸಿಕದಲ್ಲಿ ಒಟ್ಟು ವಸೂಲಾಗದ ಸಾಲ (ಎನ್‌ಪಿಎ) ಶೇಕಡಾ 3.16ರಷ್ಟಿದ್ದು, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 3.97ಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ನಿವ್ವಳ ಎನ್‌ಪಿಎ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 2.21 ರಷ್ಟಿದ್ದರೆ, ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 1.74ರಷ್ಟಿದೆ.

ಆನ್‌ಲೈನ್‌ ಬ್ಯಾಂಕಿಂಗ್ ಬಳಕೆದಾರರಿಗೆ ಎಸ್‌ಬಿಐ ಎಚ್ಚರಿಕೆ: ವಂಚನೆ ಪ್ರಕರಣಗಳು ಹೆಚ್ಚಿವೆಆನ್‌ಲೈನ್‌ ಬ್ಯಾಂಕಿಂಗ್ ಬಳಕೆದಾರರಿಗೆ ಎಸ್‌ಬಿಐ ಎಚ್ಚರಿಕೆ: ವಂಚನೆ ಪ್ರಕರಣಗಳು ಹೆಚ್ಚಿವೆ

ಬ್ಯಾಂಕ್‌ನ ನಿವ್ವಳ ಲಾಭದ ಪ್ರಮಾಣ ಪ್ರಕಟವಾದ ಬಳಿಕ ಮಂಗಳವಾರ, ಎನ್‌ಎಸ್‌ಇಯಲ್ಲಿ ಕಂಪನಿಯ ಷೇರುಗಳ ಮೌಲ್ಯ ದಿನದ ವಹಿವಾಟು ಅಂತ್ಯಕ್ಕೆ ಶೇಕಡಾ 5.61ರಷ್ಟು ಹೆಚ್ಚಾಗಿ ಪ್ರತಿ ಷೇರು ಬೆಲೆ 67.75ಕ್ಕೆ ವಹಿವಾಟು ನಡೆಸುತ್ತಿದೆ.

Karnataka Bank Q3 Net Rises 10% To Rs 135 Crore

ತೃತೀಯ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯವು ಶೇಕಡಾ 21ರಷ್ಟು ಏರಿಕೆಯಾಗಿದ್ದು, 508 ಕೋಟಿಯಿಂದ 614 ಕೋಟಿ ರೂಪಾಯಿಗೆ ತಲುಪಿದೆ.

English summary
Net interest income rose 21% to Rs 614 crore from Rs 508 crore in Q3FY20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X