ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಶೀಘ್ರ ಆ್ಯಪಲ್ ಐ ಫೋನ್ ತಯಾರಿಕಾ ಘಟಕ

ಶೀಘ್ರದಲ್ಲೇ ಕಂಪನಿಯ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ಯೋಜನೆಗೆ ಅಂತಿಮ ಸ್ಪರ್ಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 3: ರಾಜ್ಯದಲ್ಲಿ ತನ್ನ ಐ ಫೋನ್ ತಯಾರಿಕಾ ಘಟಕವನ್ನು ಆರಂಭಿಸಲು ಆ್ಯಪಲ್ ಕಂಪನಿಯು ಸಲ್ಲಿಸಿರುವ ಪ್ರಸ್ತಾವನೆಯನ್ನು ತಾನು ಸ್ವಾಗತಿಸಿರುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಆರಂಭಿಕ ಹೆಜ್ಜೆಯಾಗಿ ಆ್ಯಪಲ್ ಕಂಪನಿಯು ಐ ಫೋನ್ ಗಳ ಬಿಡಿಭಾಗಗಳ ಜೋಡಣೆಯ ಕಾರ್ಯವನ್ನು ಮಾತ್ರ ಬೆಂಗಳೂರಿನಲ್ಲಿ ಆರಂಭಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಲ್ಲದೆ, ಶೀಘ್ರದಲ್ಲೇ ಕಂಪನಿಯ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ಯೋಜನೆಗೆ ಅಂತಿಮ ಸ್ಪರ್ಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

Karnataka Announces 'Initial Manufacturing Operations' of Apple in India

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರವು, "ಬೆಂಗಳೂರಿನಲ್ಲಿ ಐ ಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಆ್ಯಪಲ್ ಕಂಪನಿ ರಾಜ್ಯ ಸರ್ಕಾರದ ಮುಂದಿಟ್ಟಿದ್ದು ಅದನ್ನು ಸರ್ಕಾರವು ಸ್ವಾಗತಿಸಿದೆ. ಆ್ಯಪಲ್ ಕಂಪನಿಗೆ ಬೆಂಗಳೂರಿನಲ್ಲಿ ಸ್ಥಳಾವಕಾಶ ನೀಡಲು ರಾಜ್ಯ ಸರ್ಕಾರಕ್ಕೂ ಆಸಕ್ತಿಯಿದೆ. ಸ್ಮಾರ್ಟ್ ಫೋನ್ ಕ್ಷೇತ್ರದ ಆ ದೈತ್ಯ ಕಂಪನಿ ಬೆಂಗಳೂರಿಗೆ ಕಾಲಿಟ್ಟರೆ, ಅದು ಉದ್ಯಾನ ನಗರಿಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಹಾಗೂ ರಾಜ್ಯದ ಅಭಿವೃದ್ಧಿಗೆ ಅದು ಪೂರಕವಾಗಲಿದೆ" ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಐಟಿ ಸಚಿವ ಪ್ರಿಯಾಂಕ್ ಖರ್ಗೆ, "ಬೆಂಗಳೂರಿನಲ್ಲಿ ಆ್ಯಪಲ್ ಕಂಪನಿಯ ಐ ಫೋನ್ ತಯಾರಿಕಾ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಒಪ್ಪಿರುವುದನ್ನು ತಿಳಿಸಲು ಹರ್ಷವಾಗುತ್ತಿದೆ" ಎಂದು ತಿಳಿಸಿದ್ದಾರೆ.

English summary
The government of Karnataka said on Thursday it welcomed a proposal from Apple to begin initial manufacturing operations in the state, in a sign the tech company is slowly moving forward with plans to assemble iPhones in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X