ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಬಿಆರ್ ಶೆಟ್ಟಿ ತೆಕ್ಕೆಗೆ ಟ್ರಾವೆಲ್ ಎಕ್ಸ್

|
Google Oneindia Kannada News

ಬೆಂಗಳೂರು, ಮೇ 25 : ಮಂಗಳೂರು ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಲಂಡನ್ ಮೂಲದ ಟ್ರಾವೆಲ್ ಎಕ್ಸ್ ಹೋಲ್ಡಿಂಗ್ಸ್ ಕಂಪನಿಯನ್ನು ಸುಮಾರು 9,850 ಕೋಟಿ ರೂ.ಗಳಿಗೆ ಖರೀದಿ ಮಾಡಿದ್ದಾರೆ. ವಿದೇಶಿ ವಿನಿಮಯ ವಹಿವಾಟಿನಲ್ಲಿ ಪ್ರಪಂಚದಲ್ಲೇ ಮುಂಚೂಣಿಯಲ್ಲಿಯಲ್ಲಿರುವ ರಿಟೇಲ್ ಕಂಪನಿ ಟ್ರಾವೆಲ್ ಎಕ್ಸ್ 27 ದೇಶಗಳಲ್ಲಿ ವಹಿವಾಟು ಹೊಂದಿದೆ.

ಅಪೆಕ್ಸ್ ಪಾರ್ಟ್ ನರ್ಸ್ ಮತ್ತು ಲಾಯ್ಡ್ ಡಾರ್ಫ್ ಮನ್ ಟ್ರಾವೆಲ್ ಎಕ್ಸ್ ಕಂಪನಿಯ ಮಾಲೀಕರಾಗಿದ್ದರು. ಇವರಿಂದ ಬಿ.ಆರ್.ಶೆಟ್ಟಿ ಕಂಪನಿಯನ್ನು ಖರೀದಿ ಮಾಡಿದ್ದು, ಖರೀದಿ ಮೊತ್ತವನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಸುಮಾರು 9,500 ರಿಂದ 10 ಸಾವಿರ ಕೋಟಿಗೆ ಈ ಖರೀದಿ ನಡೆದಿದೆ ಎಂದು ಹೂಡಿಕೆ ಸಂಸ್ಥೆಯೊಂದು ಮಾಹಿತಿ ನೀಡಿದೆ. [ಫೋರ್ಬ್ ಪಟ್ಟಿ ಸೇರಿದ ಕನ್ನಡಿಗ ಬಿಆರ್ ಶೆಟ್ಟಿ]

BR Shetty

ದುಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಬಿ.ಆರ್‌.ಶೆಟ್ಟಿ ಟ್ರಾವೆ­ಲ್‌ ಎಕ್ಸ್‌ ಹೋಲ್ಡಿಂಗ್ಸ್‌ ಕಂಪೆನಿ­ಯ ಖರೀದಿಸುವ ಮೂಲಕ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ವಿದೇಶಿ ವಿನಿಮಯ ವಹಿವಾಟಿನಲ್ಲಿ ಮುಂಚೂ­ಣಿಯಲ್ಲಿ­ರುವ ರಿಟೇಲ್‌ ಕಂಪೆನಿ ಟ್ರಾವೆಲ್ ­ಎಕ್ಸ್‌, 27 ದೇಶಗಳಲ್ಲಿ ವಹಿ­ವಾಟು ಹೊಂ­ದಿದ್ದು, 1,500 ಮಳಿಗೆಗಳು ಮತ್ತು 1,300 ಎಟಿಎಂಗಳನ್ನು ಹೊಂದಿದೆ.

ಈ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಟ್ರಾವೆಲ್‌ ಎಕ್ಸ್‌ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಲಾಯ್ಡ್‌ ಡಾರ್ಫ್‌ ಮನ್‌ ಹೂಡಿಕೆದಾರರಾಗಿ ಮುಂದುವರಿಯಲಿದ್ದಾರೆ. ಸಿಇಒ ಪೀಟರ್‌ ಜಾಕ್ಸನ್‌ ಹೊಸ ಆಡಳಿತ ಮಂಡಳಿಯನ್ನು ಸೇರಲಿದ್ದು, ಕಂಪೆನಿ­ಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

English summary
Mangalore based billionaire entrepreneur BR Shetty is buying Travelex, the world's leading foreign exchange specialist, from private equity group Apax Partners in a 1-billion-pound deal Rs (9,800 crore).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X