ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸರ್ವ್ ಬ್ಯಾಂಕ್ ರೆಪೋ ದರ 6.5% ಯಥಾ ಸ್ಥಿತಿ ಮುಂದುವರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 5: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರದಲ್ಲಿ (ಸಾಲ ನೀಡಿಕೆ ದರ) ಯಾವುದೇ ಬದಲಾವಣೆ ಮಾಡಿಲ್ಲ. ಆದ್ದರಿಂದ 6.5% ನಲ್ಲೇ ಮುಂದುವರಿಯಲಿದೆ. ಡಿಸೆಂಬರ್ ತಿಂಗಳ ಆರ್ ಬಿಐ ನೀತಿ ಪರಿಶೀಲನಾ ಸಭೆಯು ಬುಧವಾರ ಇತ್ತು. ರಿವರ್ಸ್ ರೆಪೋ ದರ (ಸಾಲ ಪಡೆಯುವ ದರ) ಕೂಡ ಅದೇ ಸ್ಥಿತಿ ಅಂದರೆ 6.25%ನಲ್ಲೇ ಮುಂದುವರಿಯಲಿದೆ.

ರೆಪೋ ದರ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬ್ಯಾಂಕ್ ಗಳಿಗೆ ನೀಡುವ ಅಲ್ಪಾವಧಿ ಸಾಲದ ಮೇಲೆ ವಿಧಿಸುವ ದರ ಮತ್ತು ರಿವರ್ಸ್ ರೆಪೋ ದರ ಅಂದರೆ ವಾಣಿಜ್ಯ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಹಣ ಪಡೆದುಕೊಳ್ಳುವ ದರ. ಮಧ್ಯಮಾವಧಿಯಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಹಣದುಬ್ಬರವನ್ನು ನಾಲ್ಕು ಪರ್ಸೆಂಟ್ ಗುರಿ ಇಟ್ಟುಕೊಂಡು, ಪ್ಲಸ್ ಅಥವಾ ಮೈನಸ್ ಎರಡು ಪರ್ಸೆಂಟ್ ಜತೆಗೆ ಅಭಿವೃದ್ಧಿಗೆ ಪೂರಕವಾದ ನಿರ್ಧಾರ ಕೈಗೊಳ್ಳುವುದು ಉದ್ದೇಶ ಎಂದು ಬ್ಯಾಂಕ್ ಹೇಳಿದೆ.

ಕಾಯ್ದಿರಿಸಿದ ದುಡ್ಡು ಕೊಡಲು ಸಾಧ್ಯವಿಲ್ಲ: ಕೇಂದ್ರಕ್ಕೆ ಊರ್ಜಿತ್ ಪಟೇಲ್ ಖಡಕ್ ಹೇಳಿಕೆಕಾಯ್ದಿರಿಸಿದ ದುಡ್ಡು ಕೊಡಲು ಸಾಧ್ಯವಿಲ್ಲ: ಕೇಂದ್ರಕ್ಕೆ ಊರ್ಜಿತ್ ಪಟೇಲ್ ಖಡಕ್ ಹೇಳಿಕೆ

ಜೂನ್ ನಂತರ ಆರ್ ಬಿಐ ಮೇಲಿಂದ ಮೇಲೆ ಬಡ್ಡಿ ದರ ಏರಿಕೆ ಮಾಡಿತ್ತು. ಆದರೆ ಅಕ್ಟೋಬರ್ ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ರುಪಾಯಿ ಮೌಲ್ಯ ಕುಸಿತ, ಹೆಚ್ಚುತ್ತಿರುವ ತೈಲ ಬೆಲೆಯಿಂದ ಹಣದುಬ್ಬರದ ಒತ್ತಡದ ಕಾರಣಕ್ಕೆ ಬಡ್ಡಿ ದರ ಏರಿಕೆ ಮಾಡಬಹುದು ಎಂದು ತಜ್ಞರು ಊಹಿಸಿದ್ದ ಅಕ್ಟೋಬರ್ ನಲ್ಲಿ ಏರಿಕೆ ಮಾಡಿರಲಿಲ್ಲ.

Reserve bank repo rate unchanged at 6.5 percent

ಮುಂದಿನ ಮಾರ್ಚ್ ತನಕ ಬಡ್ಡಿ ದರವು ಇದೇ ಪ್ರಮಾಣದಲ್ಲಿ ಇರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆರ್ ಬಿಐ ನ ಆರ್ಥಿಕ ನೀತಿ ಪರಿಶೀಲನಾ ಸಭೆಯು ಮುಂದಿನ ವರ್ಷದ ಫೆಬ್ರವರಿ ಐದರಿಂದ ಏಳನೇ ತಾರೀಕಿನ ತನಕ ನಡೆಯಲಿದೆ.

English summary
The Reserve Bank of India (RBI) on Wednesday kept the repo rate unchanged at 6.5 per cent in its December policy review.The reverse repo rate has also been maintained at 6.25 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X