ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಳಿಕೆಯಲ್ಲಿ ಜಿಂದಾಲ್ ಹಿಂದಿಕ್ಕಿದ್ದ ಮಾರನ್

By Mahesh
|
Google Oneindia Kannada News

Kalanithi Maran, his wife top paid executives with Rs 56 crore package
ಬೆಂಗಳೂರು, ಸೆ. 23: ಸನ್ ಟಿವಿ ಸಂಸ್ಥೆಯ ಕಲಾನಿಧಿ ಮಾರನ್ ಹಾಗೂ ಅವರ ಪತ್ನಿ ಕಾವೇರಿ ಅವರು ಭಾರತದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಕಾರ್ಪೊರೇಟ್ ಗಳೆನಿಸಿದ್ದಾರೆ. ಈವರೆಗೂ ಮೊದಲ ಸ್ಥಾನದಲ್ಲಿದ್ದ ನವೀನ್ ಜಿಂದಾಲ್ ಅವರನ್ನು ಕೆಳಗೆ ದೂಡಿದ್ದಾರೆ.

ಸನ್ ಟಿವಿಯ ಕಲಾನಿಧಿ ಮಾರನ್ ಹಾಗೂ ಅವರ ಪತ್ನಿ ಕಾವೇರಿ ಪ್ಯಾಕೇಜ್ ವರ್ಷಕ್ಕೆ ತಲಾ 56.25 ಕೋಟಿ. 3ನೇ ಸ್ಥಾನದಲ್ಲಿ 54.98 ಕೋಟಿ ಪಡೆಯುವ ಜಿಂದಾಲ್ ಅವರಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಅತಿ ಹೆಚ್ಚು ವೇತನ ಪಡೆಯುವವರ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಮಾರನ್ ದಂಪತಿ ಹಾಗೂ ಜಿಂದಾಲ್ ಅವರೇ ಪಡೆಯುತ್ತಿದ್ದಾರೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಕಾರ್ಪೊರೇಟ್ ಗಳ ಪೇ ಪ್ಯಾಕೇಜ್ ನ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡು ಬಂದಿದೆ. 2011-12ರಲ್ಲಿ 74.32 ಕೋಟಿ ರು ಪ್ಯಾಕೇಜ್ ಪಡೆಯುತ್ತಿದ್ದ ಜಿಂದಾಲ್ ಅವರು ಈಗ 54.98 ಕೋಟಿ ರು ಪ್ಯಾಕೇಜ್ ಪಡೆಯುತ್ತಿದ್ದಾರೆ.

ಉಳಿದಂತೆ ಆದಿತ್ಯಾ ಬಿರ್ಲಾ ಸಮೂಹಸ ಸಂಸ್ಥೆ ಚೇರ್ಮನ್ ಮಂಗಳಂ ಬಿರ್ಲಾ ಅವರು ಮೊದಲ ಐವರಲ್ಲಿ ಸೇರಿದ್ದಾರೆ. ಇವರ ಗಳಿಕೆ 49.62 ಕೋಟಿ ರು ಪ್ಯಾಕೇಜ್, ಹೀರೋ ಮೋಟೋಕಾರ್ಪ್ ನ ತಂದೆ ಮಕ್ಕಳು ಬ್ರಿಜ್ ಮೋಹನ್ ಲಾಲ್ ಮುಂಜಾಲ್ (32.72 ಕೋಟಿ ರು), ಪವನ್ ಮುಂಜಾಲ್ (32.80 ಕೋಟಿ ರು) ಹಾಗೂ ಸುನಿಲ್ ಕಾಂತ್ ಮುಂಜಾಲ್ (31.51 ಕೋಟಿ ರು) ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಟಾಪ್ 10 ಅಧಿಕಾರಿಗಳ ಸಂಬಳ ಕೇವಲ 15 ಕೋಟಿ ರು (ಶೇ 4) ಏರಿಕೆಯಾಗಿದ್ದು, ಪ್ಯಾಕೇಜ್ ನಲ್ಲಿ ಭಾರಿ ಇಳಿಮುಖ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 402 ಕೋಟಿ ರು ಏರಿಕೆ ಕಂಡು ಬಂದಿತ್ತು.

ಉಳಿದಂತೆ ಪಟ್ಟಿಯಲ್ಲಿ ರಾಮ್ಕೊ ಸಿಮೆಂಟ್ಸ್ (ಈ ಇಂದಿನ ಮದ್ರಾಸ್ ಸಿಮೆಂಟ್ಸ್)ನ ಪಿ ಆರ್ ಆರ್ ರಾಜಾ (30.96 ಕೋಟಿ ರು) 8ನೇ ಸ್ಥಾನದಲ್ಲಿದ್ದಾರೆ. ಮಾರುತಿ ಸುಜುಕಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಶಿನ್ಜೊ ನಕಾನಿಶಿ(30.90 ಕೋಟಿ ರು), ದಿವಿಸ್ ಲ್ಯಾಬ್ಸ್ ಮುರಳಿ ಕೆ ದಿವಿ (26.46 ಕೋಟಿ ರು). ಬಿಜಿಆರ್ ಎನರ್ಜಿಯ ಬಿಜಿ ರಘುಪತಿ (13.19 ಕೋಟಿ ರು), ಟಾಟಾ ಮೋಟರ್ಸ್ ಕಾರ್ಲ್ ಪೀಟರ್ ಫೋಸ್ಟರ್ ನಂತರದ ಸ್ಥಾನದಲ್ಲಿದ್ದಾರೆ. ಈ ಪೈಕಿ ಫೋಸ್ಟರ್ 2011ರಲ್ಲಿ ಟಾಟಾ ಮೋಟರ್ಸ್ ತೊರೆದಿದ್ದಾರೆ. ರಘುಪತಿ ಪ್ಯಾಕೇಜ್ ಶೇ 50ರಷ್ಟು ಕುಸಿತ ಕಂಡಿದೆ.

ವಿಶೇಷವೆಂದರೆ ಜಾಗತಿಕವಾಗಿ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಅಜೀಂಪ್ರೇಂಜಿ, ಆನಂದ್ ಮಹೀಂದ್ರಾ ಹಾಗೂ ಸುನಿಲ್ ಮಿತ್ತಲ್ ಅವರು ಈ ಟಾಪ್ 10 ಪಟ್ಟಿಯಲ್ಲಿಲ್ಲ.

ಮಿತ್ತಲ್(24.33 ಕೋಟಿ ರು), ಅಮರ ರಾಜಾ ಬ್ಯಾಟರೀಸ್ ಜಯದೇವ್ ಗಲ್ಲ( 23.48 ಕೋಟಿ ರು), ಲಾರ್ಸೆನ್ ಅಂಡ್ ಟ್ರೋಬ್ರೊ ಎಎಂ ನಾಯಕ್ (21.06 ಕೋಟಿ ರು) ಹಿಂಡಲ್ಕೋದ ಡಿ ಭಟ್ಟಾಚಾರ್ಯ (20.61 ಕೋಟಿ ರು) ಜೆಎಸ್ ಡಬ್ಲ್ಯೂ ಸ್ಟೀಲ್ಸ್ ಸಜ್ಜನ್ ಜಿಂದಾಲ್ (20.25 ಕೋಟಿ ರು) ಗಳಿಸಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಗಳಿಕೆ ವಾರ್ಷಿಕ 15 ಕೋಟಿ ಎಂದು ಹೇಳಲಾಗಿದೆ. (ಪಿಟಿಐ)

English summary
Sun TV promoters Kalanithi Maran and his wife Kavery were the top paid corporates in India in the last fiscal with a package of Rs 56.25 crore each among the listed companies, replacing Jindal Steel's Naveen Jindal from the pole position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X