ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ತ್ರೈಮಾಸಿಕದಲ್ಲಿ ವಾಹನ ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತ

|
Google Oneindia Kannada News

ನವದೆಹಲಿ, ಜುಲೈ 21: ಕೊರೊನಾ ಸಾಂಕ್ರಾಮಿಕ ರೋಗದ ಜೊತೆಗೆ ಲಾಕ್‌ಡೌನ್ ಬಿಸಿ ಮುಗಿದ ಮೇಲೂ ವಾಹನ ಮಾರಾಟವೂ ನೀರಸವಾಗಿದೆ. ಜೂನ್ ತ್ರೈಮಾಸಿಕದಲ್ಲಿ ದೇಶೀಯ ವಾಹನ ಕಂಪನಿಗಳ ಮಾರಾಟವು ತೀವ್ರ ಕುಸಿತ ಕಂಡಿದೆ ಎಂದು ಹಣಕಾಸು ಸೇವಾ ಕಂಪನಿ ಜೆಪ್ರೀಸ್ ಹೇಳಿದೆ.

ಬಜಾಜ್ ಆಟೋ, ಮಾರುತಿ ಸುಜುಕಿ ಮತ್ತು ಟಿವಿಎಸ್ ಮೋಟಾರ್ ಮತ್ತು ಇನ್ನೂ ಕೆಲವು ಕಂಪನಿಗಳು ತಮ್ಮ ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಿದೆ. ಮೊದಲ ತ್ರೈಮಾಸಿಕವು ವಾಹನ ಉದ್ಯಮ ಪಾಲಿಗೆ ಅತ್ಯಂತ ಕೆಟ್ಟ ತ್ರೈಮಾಸಿಕ ಆಗಲಿರಲಿದೆ ಎಂದು ಜೆಫ್ರೀಸ್ ಅಭಿಪ್ರಾಯ ಪಟ್ಟಿದೆ.

ಟಿವಿಎಸ್ ಮೋಟಾರ್ ಮಾರಾಟ ಪ್ರಮಾಣ ಜೂನ್‌ನಲ್ಲಿ ಶೇಕಡಾ 33ರಷ್ಟು ಇಳಿಕೆಟಿವಿಎಸ್ ಮೋಟಾರ್ ಮಾರಾಟ ಪ್ರಮಾಣ ಜೂನ್‌ನಲ್ಲಿ ಶೇಕಡಾ 33ರಷ್ಟು ಇಳಿಕೆ

''ಕೋವಿಡ್-19 ರ ಮಧ್ಯೆ ಸಂಪುಟಗಳ ತೀವ್ರ ಕುಸಿತದಿಂದಾಗಿ 2020-21ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ವಾಹನ ಉದ್ಯಮದ ಅತ್ಯಂತ ಕೆಟ್ಟ ತ್ರೈಮಾಸಿಕವಾಗಿದೆ ಎಂದು ನಿರೀಕ್ಷಿಸಲಾಗಿದೆ" ಎಂದು ಜೆಫರೀಸ್ ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಿದೆ.

June Quarter Result: Auto Companies Saw A Sharp Decline In Sales Volume

ಪ್ರಯಾಣಿಕರ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಸಗಟು ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ. 74-78ರಷ್ಟು (ವೈ-ಒ-ವೈ) ಕುಸಿದಿದ್ದರೆ, ಟ್ರಕ್ ಸಗಟು ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 93 ರಷ್ಟು ಕುಸಿದಿದೆ ಎಂದು ಟಿಪ್ಪಣಿ ತಿಳಿಸಿದೆ.

ಅಶೋಕ್ ಲೇಲ್ಯಾಂಡ್, ಬಜಾಜ್ ಆಟೊ, ಹೀರೊಮೊಟೊಕಾರ್ಪ್, ಮಾರುತಿ ಸುಜುಕಿ, ಈಶರ್ ಮೋಟರ್ಸ್, ಮಹೀಂದ್ರಾ, ಟಿವಿಎಸ್ ಮೋಟರ್, ಮದರ್‌ಸನ್ ಸುಮಿ ಮತ್ತು ಭಾರತ್ ಫೋರ್ಜ್ ಕಂಪನಿಗಳ ಸ್ಥಿತಿಯನ್ನು ಗಮನಿಸಿ ಜೆಫ್ರೀಸ್ ಕಂಪನಿ ತನ್ನ ವರದಿ ಸಿದ್ಧಪಡಿಸಿದೆ.

English summary
Domestic auto companies, which saw a sharp decline in sales volume in the June quarter owing to Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X