ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಿಂದ ಜಿಎಸ್ಟಿ ಹೊರತಾಗಿ ಬದಲಾಗುವ 9 ಸಂಗತಿ

|
Google Oneindia Kannada News

ನವದೆಹಲಿ, ಜೂನ್ 28: ಈ ಬಾರಿಯ ಜುಲೈ ಒಂದು ಐತಿಹಾಸಿಕ ಆಗಲಿದೆ ಎಂಬುದು ನಿಮಗೆಲ್ಲ ಗೊತ್ತಿರುವ ಸಂಗತಿಯೇ. ಆದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಯಿಂದ ಮಾತ್ರವಲ್ಲ, ಇನ್ನೂ ಹಲವು ಬದಲಾವಣೆಗಳು ಆಗಲಿವೆ. ಅವು ಯಾವ್ಯಾವು ಎಂಬುದರ ವಿವರ ಇಲ್ಲಿದೆ. ಜುಲೈ ಒಂದರ ನಂತರ ಇವುಗಳಲ್ಲೆಲ್ಲ ಬದಲಾವಣೆ ಆಗಲಿದೆ.

ಆದಾಯ ತೆರಿಗೆ ರಿಟರ್ನ್ ಸಂದರ್ಭದಲ್ಲಿ ಆಧಾರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರಕಾರ ನಿಯಮ ಮಾಡಿದೆ. ಆಧಾರ್ ಇಲ್ಲದೆ ಜುಲೈ ಒಂದರ ನಂತರ ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸಾಧ್ಯವಿಲ್ಲ.

ತೆರಿಗೆ ತಪ್ಪಿಸುವುದಕ್ಕೆ ಅಂತ ಹಲವು ಪ್ಯಾನ್ ಕಾರ್ಡ್ ಗಳನ್ನು ಬಳಸುತ್ತಿರುವುದು ಕಂಡು ಬಂದಿರುವುದರಿಂದ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆಯನ್ನು ಸರಕಾರ ಕಡ್ಡಾಯ ಮಾಡಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ಅಡಿಯಲ್ಲಿ ಕಡ್ಡಾಯವಾಗಿರುವ ಈ ನಿಯಮವನ್ನು ಮುರಿದರೆ, ಆ ವ್ಯಕ್ತಿಯ ಪ್ಯಾನ್ ಕಾರ್ಡ್ ಮಾನ್ಯತೆಯೇ ರದ್ದಾಗುತ್ತದೆ.

ಆಧಾರ್ ಇಲ್ಲದೆ ಪ್ಯಾನ್ ಕಾರ್ಡ್ ಕೂಡ ಸಿಗಲ್ಲ

ಆಧಾರ್ ಇಲ್ಲದೆ ಪ್ಯಾನ್ ಕಾರ್ಡ್ ಕೂಡ ಸಿಗಲ್ಲ

ಹೊಸ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರಿಗೆ ಆಧಾರ್ ಕಡ್ಡಾಯವಾಗಿದೆ. ಜುಲೈ ಒಂದರ ನಂತರ ನಿಮ್ಮ ಹತ್ತಿರ ಆಧಾರ್ ಇಲ್ಲದಿದ್ದರೆ ಪ್ಯಾನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.

ನೆನಪಿಡಿ, ಆಧಾರ್ - ಪ್ಯಾನ್ ಜೋಡಣೆಗೆ ಕೊನೆಯ ದಿನಾಂಕ ಜೂನ್ 30ನೆನಪಿಡಿ, ಆಧಾರ್ - ಪ್ಯಾನ್ ಜೋಡಣೆಗೆ ಕೊನೆಯ ದಿನಾಂಕ ಜೂನ್ 30

ಪಿಎಫ್ ಖಾತೆ ಜತೆಗೆ ಆಧಾರ್ ಜೋಡಣೆ

ಪಿಎಫ್ ಖಾತೆ ಜತೆಗೆ ಆಧಾರ್ ಜೋಡಣೆ

ಜೂನ್ ಮೂವತ್ತರೊಳಗೆ ಪಿಎಫ್ ಖಾತೆ ಜತೆಗೆ ಆಧಾರ್ ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಿದೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್ ಒ). ಪಿಂಚಣಿದಾರರಿಗೂ ಆಧಾರ್ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಈ ರೀತಿ ಜೋಡಣೆ ಆಗುವುದರಿಂದ ಇಪಿಎಫ್ ಒ ಹಣ ತೆಗೆದುಕೊಳ್ಳುವುದು ಹಾಗೂ ವಿಲೇವಾರಿಯು ಕಡಿಮೆ ಸಮಯದಲ್ಲಿ ಆಗುತ್ತದೆ. ಅಂದರೆ ಸದ್ಯ ಇಪ್ಪತ್ತು ದಿನ ಹಿಡಿಸುತ್ತಿದ್ದು, ಅದು ಹತ್ತು ದಿನಕ್ಕೆ ಇಳಿಯಲಿದೆ.

ರೈಲ್ವೆ ಟಿಕೆಟ್ ಮೇಲೆ ವಿನಾಯ್ತಿ ಇಲ್ಲ

ರೈಲ್ವೆ ಟಿಕೆಟ್ ಮೇಲೆ ವಿನಾಯ್ತಿ ಇಲ್ಲ

ದುರ್ಬಳಕೆ ಹಾಗೂ ಸೋರಿಕೆ ತಡೆಯುವ ಉದ್ದೇಶದೊಂದಿಗೆ ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ ಆಧಾರ್ ಸಂಖ್ಯೆ ನಮೂದಿಸುವುದನ್ನು ಜುಲೈ ಒಂದರಿಂದ ಭಾರತೀಯ ರೈಲ್ವೆ ಕಡ್ಡಾಯ ಮಾಡಿದೆ.

ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿ ವೇತನ

ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿ ವೇತನ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ಸರಕಾರದಿಂದ ವಿದ್ಯಾರ್ಥಿ ವೇತನ ಪಡೆಯುತ್ತಿರುವವರು ಮುಂದೆ ಪಡೆಯಬೇಕು ಅನ್ನುವವರು ಜೂನ್ ಮೂವತ್ತರೊಳಗೆ ಕಡ್ಡಾಯವಾಗಿ ಆಧಾರ್ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಆಧಾರ್ ಸಲ್ಲಿಸದವರಿಗೆ ವಿದ್ಯಾರ್ಥಿ ವೇತನ ದೊರೆಯುವುದಿಲ್ಲ.

ಆಧಾರ್ ಇಲ್ಲದೆ ಸಾರ್ವಜನಿಕ ವಿತರಣೆ ಸೌಲಭ್ಯಗಳಿಲ್ಲ

ಆಧಾರ್ ಇಲ್ಲದೆ ಸಾರ್ವಜನಿಕ ವಿತರಣೆ ಸೌಲಭ್ಯಗಳಿಲ್ಲ

ಸಾರ್ವಜನಿಕ ವಿತರಣೆ ಸೌಲಭ್ಯ ಪಡೆಯುತ್ತಿರುವವರು ಆಧಾರ್ ಅನ್ನು ಪಡಿತರ ಚೀಟಿ ಜತೆಗೆ ಜುಲೈ ಒದಕ್ಕಿಂತ ಮುಂಚೆ ಜೋಡಣೆ ಮಾಡಬೇಕು. ಆಗಷ್ಟೇ ಸಾರ್ವಜನಿಕ ವಿತರಣೆ ಸೌಲಭ್ಯದ ಸಬ್ಸಿಡಿ ದೊರೆಯುತ್ತದೆ.

ಡಿಪಾರ್ಚರ್ ಅರ್ಜಿ ತುಂಬಬೇಕಿಲ್ಲ

ಡಿಪಾರ್ಚರ್ ಅರ್ಜಿ ತುಂಬಬೇಕಿಲ್ಲ

ಭಾರತೀಯರು ವಿದೇಶಗಳಿಗೆ ತೆರಳುವಾಗ ಜುಲೈ ಒಂದರಿಂದ ಡಿಪಾರ್ಚರ್ ಕಾರ್ಡ್ ತುಂಬಬೇಕಿಲ್ಲ. ಇದರಿಂದ ವಲಸಿಗ ನಿಯಮಾವಳಿಗಳನ್ನು ಪೂರೈಸಲು ತುಂಬ ಸಮಯ ತೆಗೆದುಕೊಳ್ಳುವುದಿಲ್ಲ. ಪ್ರಯಾಣಾವೂ ಸಲೀಸಾಗುತ್ತದೆ.

ಸೌದಿ ಅರೇಬಿಯಾದಲ್ಲಿ ಕೌಟುಂಬಿಕ ತೆರಿಗೆ ಹೆಚ್ಚಳ

ಸೌದಿ ಅರೇಬಿಯಾದಲ್ಲಿ ಕೌಟುಂಬಿಕ ತೆರಿಗೆ ಹೆಚ್ಚಳ

ಸೌದಿ ಅರೇಬಿಯಾವು ವಲಸಿಗರಿಗೆ ತಿಂಗಳ ಲೆಕ್ಕದಲ್ಲಿ ಕೌಟುಂಬಿಕ ತೆರಿಗೆ ಹಾಕಲಿದೆ. ಈ ವರ್ಷ ಆ ಶುಲ್ಕ ನೂರು ರಿಯಾಲ್. ಅದು ಮುಂದಿನ ವರ್ಷ ಜುಲೈನಿಂದ ಇನ್ನೂರು ರಿಯಾಲ್ ಗೆ ಏರಿಕೆ ಆಗಲಿದೆ. ಆ ನಂತರ ವರ್ಷಕ್ಕೆ ನೂರು ರಿಯಾಲ್ ನಂತೆ ಏರಿಕೆ ಮಾಡುತ್ತಾರೆ.

ಸಿಎ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ

ಸಿಎ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ

ಜುಲೈ ಒಂದರಂದು ಪ್ರಧಾನಿ ನರೇಂದ್ರ ಮೋದಿ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಹೊಸ ಪಠ್ಯಕ್ರಮ ಪರಿಚಯಕ್ಕೆ ಚಾಲನೆ ನೀಡಲಿದ್ದಾರೆ. ಈ ಪಠ್ಯಕ್ರಮವು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿರುತ್ತದೆ ಮತ್ತು ಅದರಲ್ಲಿ ಹೊಸ ತೆರಿಗೆ ಪದ್ಧತಿಯಾದ ಜಿಎಸ್ ಟಿಯನ್ನು ಸೇರಿಸಲಾಗುತ್ತದೆ.

ಆಸ್ಟ್ರೇಲಿಯಾಕ್ಕೆ ತೆರಳುವ ಭಾರತೀಯ ಪ್ರವಾಸಿಗರಿಗೆ ಆನ್ ಲೈನ್ ವೀಸಾ

ಆಸ್ಟ್ರೇಲಿಯಾಕ್ಕೆ ತೆರಳುವ ಭಾರತೀಯ ಪ್ರವಾಸಿಗರಿಗೆ ಆನ್ ಲೈನ್ ವೀಸಾ

ಭಾರತೀಯ ಪ್ರವಾಸಿಗರು ಜುಲೈ ಒಂದರಿಂದ ಆನ್ ಲೈನ್ ಮೂಲಕವೇ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಅಸ್ಟ್ರೇಲಿಯಾ ಸರಕಾರ ಘೋಷಿಸಿದೆ. ಆನ್ ಲೈನ್ ವೀಸಾ ವ್ಯವಸ್ಥೆಯಿಂದ ಪ್ರಕ್ರಿಯೆಯು ವೇಗ ಪಡೆದುಕೊಳ್ಳುತ್ತದೆ.

English summary
July 1 is set to enter into history books, and not just for the Goods and Services Tax (GST). A number of other major changes will happen from this date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X