ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿಯರಿಂದ ಆಮದು ನಿಲ್ಲಿಸಲು ಕೈಗಾರಿಕೋದ್ಯಮಿಗಳು ಒಟ್ಟಾಗಬೇಕು: ಸಜ್ಜನ್ ಜಿಂದಾಲ್

|
Google Oneindia Kannada News

ನವದೆಹಲಿ, ಜುಲೈ 7: ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಸ್ವತಃ ನಿಷೇಧಿಸಲು ಮುಂದಾಗಿರುವ ಜೆಎಸ್‌ಡಬ್ಲ್ಯೂ ಗ್ರೂಪ್, ದೇಶದ ಎಲ್ಲಾ ಕೈಗಾರಿಕೋದ್ಯಮಿಗಳು ಒಟ್ಟಾಗಬೇಕೆಂದು ಕರೆ ನೀಡಿದೆ.

ಈ ಕುರಿತು ಮಾತನಾಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್ ಮಾಲೀಕ ಸಜ್ಜನ್ ಜಿಂದಾಲ್ ''ಭಾರತೀಯ ಯೋಧರನ್ನು ಎಲ್‌ಎಸಿಯಲ್ಲಿ ಚೀನಿಯರು ಹತ್ಯೆಗೈದಿದ್ದು ಇಂತಹ ದುಷ್ಟ ನಡೆಯ ನಂತರವೂ ಚೀನಾ ಜೊತೆ ವ್ಯವಹಾರವು ಎಂದಿನಂತೆ ಹೋಗಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.

ಚೀನಾ ಜೊತೆಗಿನ 900 ಕೋಟಿ ರು ಡೀಲ್ ಕ್ಯಾನ್ಸಲ್ ಮಾಡಿದ ಹೀರೋಚೀನಾ ಜೊತೆಗಿನ 900 ಕೋಟಿ ರು ಡೀಲ್ ಕ್ಯಾನ್ಸಲ್ ಮಾಡಿದ ಹೀರೋ

ಇದರ ಜೊತೆಗೆ ಮುಂದಿನ 24 ತಿಂಗಳಲ್ಲಿ 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ವಾರ್ಷಿಕ ಆಮದನ್ನು ಚೀನಾದಿಂದ ನಿಲ್ಲಿಸುವುದಾಗಿ ಹೇಳಿದ್ದರು.

JSW Wont Import Any Materials From China:Sajjan Jindal Calls For Unity Among Industrialists

ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಉಲ್ಲೇಖಿಸಿದ ಅವರು, ಈ ನಿರ್ಧಾರವೂ ಚೀನಾ ಭಾರತದ ನೆಲದಲ್ಲಿ ಮಾಡಿದ ದುಷ್ಕೃತ್ಯದ ಪರಿಣಾಮವಾಗಿದೆ ಎಂದು ಹೇಳಿದರು.

ಸಜ್ಜನ್ ಜಿಂದಾಲ್ ಅವರು "ನಮ್ಮ ಸೈನಿಕರು ಎಲ್‌ಎಸಿಯಲ್ಲಿ(ವಾಸ್ತವಿಕ ನಿಯಂತ್ರಣದ ರೇಖೆ) ಹತ್ಯೆಯಾದ ನಂತರವೂ ನಮ್ಮ ವ್ಯವಹಾರಕ್ಕಾಗಿ ಚೀನಾದ ಅಗ್ಗದ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ನಾವು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ'' ಎಂದು ಹೇಳಿದರು. ಇದೇ ವೇಳೆ ಎಲ್ಲಾ ಕೈಗಾರಿಕೋದ್ಯಮಿಗಳು ಒಗ್ಗೂಡಿ ಬಲಿಷ್ಠ ಆತ್ಮ ನಿರ್ಭರ ಭಾರತ್‌ಗೆ ಒತ್ತು ನೀಡಬೇಕಿದೆ ಎಂದಿದ್ದಾರೆ.

English summary
Calling for unity among industrialists to stop imports from China, JSW Group owner Sajjan Jindal said on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X