ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಫೆ ಕಾಫಿ ಡೇ ಅಂಗ ಸಂಸ್ಥೆ ಕೊಳ್ಳಲು ಮುಂದಾದ ಜಿಂದಾಲ್, ಅದಾನಿ

|
Google Oneindia Kannada News

ಬೆಂಗಳೂರು, ಸೆ.10: ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಸಂಸ್ಥೆಯು ಸಾಲದ ಹೊರೆಯನ್ನು ತಗ್ಗಿಸಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ.

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟಕ್ಕಿಟ್ಟ ಬಳಿಕ ಲಾಜಿಸ್ಟಿಕ್ ಕಂಪನಿ ಸಿಕಾಲ್ ಕೂಡಾ ಮಾರಾಟಕ್ಕಿಡಲಾಗಿದೆ. ಸಿಕಾಲ್ ಲಾಜಿಸ್ಟಿಕ್ ಲಿಮಿಟೆಡ್ ಕೂಡಾ 1,488 ಕೋಟಿ ರು ಸಾಲ ಹೊಂದಿದೆ.

ವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿವಿಜಿ ಸಿದ್ಧಾರ್ಥ ಮಾಡಿದ್ದ ಸಾಲ 8000 ಕೋಟಿ ರೂ.ಗೂ ಅಧಿಕ, ಇಲ್ಲಿದೆ ಪಟ್ಟಿ

ಜುಲೈ 31, 2019ರ ಪ್ರಕಟಣೆಯಂತೆ ಸಂಸ್ಥೆ 3,472 ಕೋಟಿ ರು ಸಾಲ ಹೊಂದಿತ್ತು. ಕೆಫೆ ಕಾಫಿ ಡೇ ಮಾಲೀಕರಾದ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಹೂಡಿಕೆದಾರರು ಒಟ್ಟು 2,437.29 ಕೋಟಿ ರು ಕಳೆದುಕೊಂಡಿದ್ದಾರೆ. ಜುಲೈ 29ರಂದು 4, 067.65 ಕೋಟಿ ರು ಇದ್ದ ಸಂಸ್ಥೆಯ ಮಾರುಕಟ್ಟೆ ಮೌಲ್ಯ 1630. 86 ಕೋಟಿ ರುಗೆ ಕುಸಿದಿದೆ.

JSW, Adani may bid for Coffee Day group-owned Sical Logistics

ಲಾಜಿಸ್ಟಿಕ್ ಲಿಮಿಟೆಡ್ ಕಂಪನಿ ಸಿಕಾಲ್ ಮೂಲಕ ಕಂಟೇನರ್ ಫ್ರೇಟ್ ಕೇಂದ್ರ, ಪೋರ್ಟ್ ಟರ್ಮಿನಲ್ ಗಳನ್ನು ನಿಭಾಯಿಸಲಾಗುತ್ತಿದೆ. ಸಿಕಾಲ್ ಸಂಸ್ಥೆ ಕೊಳ್ಳಲು ಜೆಎಸ್ ಡಬ್ಲ್ಯೂ ಸಮೂಹ, ಅದಾನಿ ಗ್ರೂಪ್ ಮುಂಚೂಣಿಯಲ್ಲಿವೆ. ಇದಲ್ಲದೆ ದುಬೈ ಸರ್ಕಾರ ಸ್ವಾಮ್ಯದ ಡಿಪಿ ವರ್ಲ್ಡ್ ಕೂಡಾ ಆಸಕ್ತಿ ತೋರಿದೆ.

ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ತಮಿಳುನಾಡಿನ ಕಾಮರಾಜರ್ ಪೋರ್ಟ್ ನಲ್ಲಿ ಶೇ 74ರಷ್ಟು, ತೂತ್ತುಕುಡಿಯಲ್ಲಿ ಖಾಸಗಿ- ಸರ್ಕಾರಿ ಸಹಭಾಗಿತ್ವದ ವಿಒಸಿ ಬಂದರಿನಲ್ಲಿ ಶೇ49ರಷ್ಟು ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಶೇ 37ರಷ್ಟು ಆದಾಯವನ್ನು ಸಿಕಾಲ್ ಹೊಂದಿದೆ. ಇದಲ್ಲದೆ, ಭಾರತೀಯ ರೈಲ್ವೆಯಿಂದ ಕೆಟಗೆರಿ 1 ಲೈಸನ್ಸ್ ಹೊಂದಿದ್ದು, ಕಂಟೇನರ್ ರೈಲುಗಳನ್ನು ಭಾರತದಾದ್ಯಂತ ಓಡಿಸಲು ಅನುಮತಿ ಪಡೆದುಕೊಂಡಿದೆ. ಇದೆಲ್ಲರ ಜೊತೆಗೆ ಎಲ್ಲಾ ಕಡೆಗಳಿಂದಲೂ ಸಿಕಾಲ್ ಸಾಲ ಹೊಂದಿದೆ.

ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಸತ್ಯವೇ?ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಸತ್ಯವೇ?

ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ

English summary
Sical Logistics Ltd — a Coffee Day Group company that runs port terminals and container freight stations — is likely to see bidding by JSW Group and Adani Group, sources close to the development told BusinessLine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X