ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ಜೋಡಿಸಲಿವೆ ಮೈಕ್ರೋಸಾಫ್ಟ್, ಇಂಟೆಲ್, ಜೆಪಿ ಮಾರ್ಗನ್!!

ಜಾಗತಿಕ ಮಟ್ಟದಲ್ಲಿ ವ್ಯಾಪಾರ ಕುಸಿದಿರುವ ಕಾರಣದಿಂದಾಗಿ ಪರಸ್ಪರ ಕೈ ಜೋಡಿಸಿದ ಕಂಪನಿಗಳು; ಹೊಸ ಸಹಭಾಗಿತ್ವದಿಂದ ವ್ಯಾಪಾರಾಭಿವೃದ್ಧಿಯ ನಿರೀಕ್ಷೆ

|
Google Oneindia Kannada News

ನ್ಯೂಯಾರ್ಕ್, ಫೆಬ್ರವರಿ 28: ದೈತ್ಯ ಕಂಪನಿಗಳಾದ ಮೈಕ್ರೋ ಸಾಫ್ಟ್, ಇಂಟೆಲ್ ಕಾರ್ಪೊರೇಷನ್, ಜೆಪಿ ಮಾರ್ಗನ್ ಚೇಸ್ ಆ್ಯಂಡ್ ಕೋ ಸೇರಿದಂತೆ ಸುಮಾರು 12 ಕಂಪನಿಗಳು ಪರಸ್ಪರ ಕೈ ಜೋಡಿಸುಲು ಮುಂದಾಗಿದ್ದು, ಈ ಮೂಲಕ ತಂತ್ರಜ್ಞಾನ ಹಾಗೂ ವ್ಯಾಪಾರ ಅಭಿವೃದ್ಧಿಗೆ ಹೊಸದೊಂದು ಭಾಷ್ಯ ಬರೆಯಲು ಸಿದ್ಧವಾಗಿವೆ.

ಇದರ ಪರಿಣಾಮ ಭಾರತದಲ್ಲೂ ಆಗಲಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಈ ದೈತ್ಯ ಕಂಪನಿಗಳ ಪರಸ್ಪರ ಕೈ ಜೋಡಿಸುವಿಕೆಯ ಮೂಲಕ ಆನ್ ಲೈನ್ ನಲ್ಲಿ ಪರಸ್ಪರ ಹೊಂದಾಣಿಕೆಯಲ್ಲಿ ಕೆಲಸ ಮಾಡಲು ಹೊಸತೊಂದು ವೇದಿಕೆ ಸೃಷ್ಟಿಯಾಗಲಿದ್ದು, ಈ ಕಂಪನಿಗಳ ನಡುವೆ ಸದೃಢ ನೆಟ್ ವರ್ಕ್ ಸಾಧಿಸಿ ಉತ್ಪನ್ನಗಳ ಗುಣಮಟ್ಟವನ್ನು ಅಗಾಧವಾಗಿ ಹೆಚ್ಚಿಸಲು ನೆರವಾಗುವುದಲ್ಲದೆ, ಗ್ರಾಹಕರಿಗೂ ಇದರಿಂದ ವಿಶೇಷ ಅನುಕೂಲ ಕಲ್ಪಿಸಲು ನಿರ್ಧರಿಸಲಾಗಿದೆ. ಇದರ ಪರಿಣಾಮ ಶೀಘ್ರವೇ ಭಾರತದ ಮೇಲೂ ಆಗಿ ಇಲ್ಲಿನ ಗ್ರಾಹಕರಿಗೆ ಈ ಕಂಪನಿಗಳ ಸಂಘದಿಂದ ಅತ್ಯುತ್ತಮ ಸೇವೆ, ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

JPMorgan, Microsoft, Intel and others form new blockchain alliance

ಇತರ ಪ್ರತಿಷ್ಠಿತ ಕಂಪನಿಗಳಾದ ಆಕ್ಸೆಂಚರ್, ಥಾಮ್ಸನ್ ರಾಯ್ಟರ್ ಮುಂತಾದ ಕಂಪನಿಗಳೂ ಈ ಸಹಭಾಗಿತ್ವದಲ್ಲಿ ಪರಸ್ಪರ ಕೈ ಜೋಡಿಸಲಿರುವುದು ವಿಶೇಷ.

ಬದಲಾದ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ವಿಶ್ವಮಟ್ಟದಲ್ಲಿ ವ್ಯಾಪಾರದ ತೇಜಿ ಮಂದಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಕೈ ಜೋಡಿಸುವಿಕೆಯಿಂದ ವ್ಯಾಪಾರ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ಅವಕಾಶಗಳನ್ನು ತೆರೆಯುವಂತೆ ಮಾಡಲು ನಿರ್ಧರಿಸಲಾಗಿದೆ.

ಇದರಿಂದ ಆಯಾ ಕಂಪನಿಗಳ ಗ್ರಾಹಕರಿಗೂ ಅನುಕೂಲವಾಗಲಿದ್ದು, ನಿರ್ದಿಷ್ಟ ಗ್ರಾಹಕರು ಒಂದೇ ದರದ ಪ್ಯಾಕೇಜ್ ನಡಿಯಲ್ಲಿ ಈ ಗುಂಪಿನ ಇತರೆ ಕಂಪನಿಗಳ ಉತ್ಪಾದನೆಗಳನ್ನು ಉಪಯೋಗಿಸಿಕೊಳ್ಳುವಂಥ ಅವಕಾಶಗಳೂ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದೂ ಹೇಳಲಾಗಿದೆ.

English summary
JPMorgan Chase & Co, Microsoft Corp, Intel Corp and more than two dozen other companies have teamed up to develop standards and technology to make it easier for enterprises to use blockchain code Ethereum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X