ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಫೋನ್ ನೆಕ್ಸ್ಟ್ ಪ್ರಯೋಗಗಳ ಮುಂದುವರಿಕೆ, ದೀಪಾವಳಿಗೆ ಮಾರುಕಟ್ಟೆಗೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 12: ಬಹುನಿರೀಕ್ಷಿತ ಜಿಯೋಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆಯೆಂದು ಜಿಯೋ ಮತ್ತು ಗೂಗಲ್ ಘೋಷಿಸಿವೆ. ಭಾರತಕ್ಕಾಗಿಯೇ ತಯಾರಿಸಲಾದ ಈ ಸ್ಮಾರ್ಟ್‌ಫೋನ್ ಅನ್ನು ಇವೆರಡೂ ಸಂಸ್ಥೆಗಳು ಒಟ್ಟಾಗಿ ವಿನ್ಯಾಸಗೊಳಿಸಿವೆ.

ಜಿಯೋಫೋನ್ ನೆಕ್ಸ್ಟ್, ಆಂಡ್ರಾಯ್ಡ್ ಮತ್ತು ಪ್ಲೇ ಸ್ಟೋರ್ ಆಧಾರಿತ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಆ ಬಗೆಯ ಮೊದಲ ಸಾಧನವಾಗಿದೆ. ಗ್ರಾಹಕರು ತಮ್ಮದೇ ಭಾಷೆಯಲ್ಲಿ ಮಾಹಿತಿ ಪಡೆಯಲು ಹಾಗೂ ಫೋನ್ ಬಳಸಲು ನೆರವಾಗುವ ವಾಯ್ಸ್-ಫಸ್ಟ್ ಫೀಚರ್‌ಗಳು, ಅತ್ಯುತ್ತಮ ಕ್ಯಾಮೆರಾ ಅನುಭವ, ಇತ್ತೀಚಿನ ಆಂಡ್ರಾಯ್ಡ್ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಅಪ್‌ಡೇಟ್‌ಗಳನ್ನು ಪಡೆಯುವ ಆಯ್ಕೆ ಸೇರಿದಂತೆ ಇದುವರೆಗೆ ಹೆಚ್ಚು ಶಕ್ತಿಯುತವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಇರುತ್ತಿದ್ದ ಪ್ರೀಮಿಯಂ ಸಾಮರ್ಥ್ಯಗಳನ್ನು ಈ ಸಾಧನ ಹಾಗೂ ಆಪರೇಟಿಂಗ್ ಸಿಸ್ಟಮ್‌ಗಳೆರಡೂ ನೀಡಲಿವೆ.

ಮತ್ತಷ್ಟು ಪರಿಷ್ಕರಿಷ್ಕರಿಸುವ ಉದ್ದೇಶದಿಂದ ಎರಡೂ ಸಂಸ್ಥೆಗಳು ಜಿಯೋಫೋನ್ ನೆಕ್ಸ್ಟ್ ಅನ್ನು ಸೀಮಿತ ಬಳಕೆದಾರರೊಂದಿಗೆ ಪರೀಕ್ಷಿಸಲು ಪ್ರಾರಂಭಿಸಿವೆ ಹಾಗೂ ದೀಪಾವಳಿ ಹಬ್ಬದ ಸಮಯಕ್ಕೆ ಸರಿಯಾಗಿ ಅದನ್ನು ಹೆಚ್ಚು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಪ್ರಸ್ತುತ ಉದ್ಯಮದಾದ್ಯಂತ ವ್ಯಾಪಿಸಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯ ತೀವ್ರತೆಯನ್ನು ಕಡಿಮೆಮಾಡುವುದಕ್ಕೂ ಈ ಹೆಚ್ಚುವರಿ ಸಮಯವು ಸಹಾಯ ಮಾಡಲಿದೆ.

ಜಿಯೋಫೋನ್ ನೆಕ್ಸ್ಟ್ ಆಕರ್ಷಕ ವೈಶಿಷ್ಟ್ಯ

ಜಿಯೋಫೋನ್ ನೆಕ್ಸ್ಟ್ ಆಕರ್ಷಕ ವೈಶಿಷ್ಟ್ಯ

ಜಿಯೋಫೋನ್ ನೆಕ್ಸ್ಟ್ ಅನ್ನು ಗೂಗಲ್ ಅಸಿಸ್ಟೆಂಟ್, ಯಾವುದೇ ಆನ್-ಸ್ಕ್ರೀನ್ ಪಠ್ಯಕ್ಕಾಗಿ ಸ್ವಯಂಚಾಲಿತ ಓದುವಿಕೆ ಮತ್ತು ಭಾಷಾ ಅನುವಾದ, ಭಾರತ-ಕೇಂದ್ರಿತ ಫಿಲ್ಟರ್‌ಗಳಿರುವ ಸ್ಮಾರ್ಟ್ ಕ್ಯಾಮೆರಾ ಮತ್ತು ಇನ್ನೂ ಹೆಚ್ಚಿನ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ. ಲಕ್ಷಾಂತರ ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಅಂತರ್ಜಾಲವನ್ನು ಅನುಭವಿಸುವವರಿಗೆ, ಹೊಸ ಅವಕಾಶಗಳನ್ನು ಒದಗಿಸುವ ತಮ್ಮ ಉದ್ದೇಶಕ್ಕೆ ಎರಡೂ ಸಂಸ್ಥೆಗಳು ತಮ್ಮ ಬದ್ಧತೆಯನ್ನು ಮುಂದುವರಿಸಿವೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಜಿಯೋಫೋನ್

ಅತ್ಯಂತ ಕಡಿಮೆ ಬೆಲೆಯಲ್ಲಿ ಜಿಯೋಫೋನ್

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ, ಇದೀಗ ಭಾರತವನ್ನು '2G-ಮುಕ್ತ'ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 4G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. 'ಜಿಯೋಫೋನ್ ನೆಕ್ಸ್ಟ್' ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂಬ ಸುದ್ದಿ ಇತ್ತು, ಆದರೆ, ಈಗ ದೀಪಾವಳಿಗೆ ಮುಂದೂಡಲ್ಪಟ್ಟಿದೆ.

300 ಮಿಲಿಯನ್ ಫೀಚರ್ ಫೋನ್

300 ಮಿಲಿಯನ್ ಫೀಚರ್ ಫೋನ್

300 ಮಿಲಿಯನ್ ಫೀಚರ್ ಫೋನ್ ಬಳಕೆದಾರರ ಪ್ರಸ್ತುತ ಸ್ಥಿತಿ ಅಸ್ತಿತ್ವದಲ್ಲಿರುವ ಫೀಚರ್ ಫೋನ್ ಬಳಕೆದಾರರನ್ನು ಹೆಚ್ಚಿನ ಶುಲ್ಕವನ್ನು ಪಾವತಿಸಲು ಒತ್ತಾಯಿಸಲಾಗುತ್ತಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ಉಚಿತ ಧ್ವನಿ ಕರೆಗಳನ್ನು ಆನಂದಿಸುತ್ತಿರುವಾಗ ಫೀಚರ್ ಫೋನ್ ಬಳಕೆದಾರರು ಪ್ರತಿ ನಿಮಿಷದ ಧ್ವನಿ ಕರೆಗೆ ₹ 1.20 ರಿಂದ ₹ 1.50 ಪಾವತಿಸುತ್ತಿದ್ದಾರೆ. ತಮ್ಮ ಸಂಪರ್ಕವನ್ನು ಸಕ್ರಿಯವಾಗಿಡಲು ಮತ್ತು ಮೂಲ ಟೆಲಿಕಾಂ ಸೇವೆಯನ್ನು ಪಡೆಯಲು ಪ್ರತಿ ತಿಂಗಳು ₹ 45 - ₹ 50 ಪಾವತಿ ಮಾಡಬೇಕಾಗಿದೆ. ಧ್ವನಿ ಕರೆಗಳಿಗೆ ದುಬಾರಿ ದರವನ್ನು ಪಾವತಿಸಿದ ನಂತರವು ಈ ಬಳಕೆದಾರರು ಇಂಟರ್ನೆಟ್‌ಗೆ ಪ್ರವೇಶವನ್ನು ಪಡೆಯುವುದಿಲ್ಲ!

ಹೊಸ ಜಿಯೋಫೋನ್ 2021 ಕೊಡುಗೆ

ಹೊಸ ಜಿಯೋಫೋನ್ 2021 ಕೊಡುಗೆ

ಎ. ಹೊಸ ಬಳಕೆದಾರರು:
1. ಜಿಯೋಫೋನ್ + ಕೇವಲ ₹ 1999ಕ್ಕೆ 24 ತಿಂಗಳುಗಳ ಅನಿಯಮಿತ ಸೇವೆ
* ಅನ್ಲಿಮಿಟೆಡ್ ಧ್ವನಿ ಕರೆಗಳು
* ಅನ್ಲಿಮಿಟೆಡ್ ಡೇಟಾ (ಪ್ರತಿ ತಿಂಗಳು 2 ಜಿಬಿ ಹೈ ಸ್ಪೀಡ್ ಡೇಟಾ)
* 2 ವರ್ಷಗಳವರೆಗೆ ಯಾವುದೇ ರೀಚಾರ್ಜ್ ಅಗತ್ಯವಿಲ್ಲ
2. ಜಿಯೋಫೋನ್ + ಕೇವಲ₹1499ಕ್ಕೆ 12 ತಿಂಗಳುಗಳ ಅನಿಯಮಿತ ಸೇವೆ
* ಅನ್ಲಿಮಿಟೆಡ್ ಧ್ವನಿ ಕರೆಗಳು
* ಅನ್ಲಿಮಿಟೆಡ್ ಡೇಟಾ (ಪ್ರತಿ ತಿಂಗಳು 2 ಜಿಬಿ ಹೈ ಸ್ಪೀಡ್ ಡೇಟಾ)
* 1 ವರ್ಷಗಳವರೆಗೆ ಯಾವುದೇ ರೀಚಾರ್ಜ್ ಅಗತ್ಯವಿಲ್ಲ

English summary
Jio and Google announced today that they have made considerable progress towards launching the much-awaited JioPhone Next, the made-for-India smartphone being jointly designed by the companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X