• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋ ಗ್ರಾಹಕರಿಗೆ ದೀಪಾವಳಿ ಕೊಡುಗೆ, 699ರು ಗೆ ಫೀಚರ್ ಫೋನ್!

|

ಮುಂಬೈ, ಅಕ್ಟೋಬರ್ 1: ಎಲ್ಲ ಭಾರತೀಯರ ಸಂಪೂರ್ಣ ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇಂದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿದೆ.

ದಸರಾ ಹಾಗೂ deepavali ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ ₹699ರ ವಿಶೇಷ ಬೆಲೆಯಲ್ಲಿ ದೊರಕಲಿದೆ. ₹1,500ರ ಸಾಮಾನ್ಯ ಬೆಲೆಯ ಹೋಲಿಕೆಯಲ್ಲಿ ಇದು ₹800ರ ಸ್ಪಷ್ಟ ಉಳಿತಾಯವಾಗಿದ್ದು, ಇದಕ್ಕೆ ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕು ಎನ್ನುವಂತಹ ಯಾವ ವಿಶೇಷ ನಿಬಂಧನೆಯೂ ಇರುವುದಿಲ್ಲ.

ಜಿಯೋ ಫೋನಿನಲ್ಲಿ ವಾಟ್ಸಾಪ್ ಡೌನ್ಲೋಡ್ ಮಾಡುವುದು ಹೇಗೆ?

ಈ ಬೆಲೆ ಸದ್ಯ ಮಾರುಕಟ್ಟೆಯಲ್ಲಿರುವ ಅನೇಕ 2ಜಿ ಫೀಚರ್ ಫೋನುಗಳ ಬೆಲೆಗಿಂತ ಬಹಳ ಕಡಿಮೆಯಿದೆ. ಹೀಗಾಗಿ, 4ಜಿ ಸೇವೆಗಳಿಗೆ ಉನ್ನತೀಕರಿಸಿಕೊಳ್ಳಲು ಫೀಚರ್ ಫೋನ್ ಬಳಕೆದಾರರಿಗಿದ್ದ ಕೊನೆಯ ಅಡಚಣೆಯೂ ಇದೀಗ ನಿವಾರಣೆಯಾದಂತಾಗಿದೆ.

ಜಿಯೋಫೋನ್ ಕೊಳ್ಳಲು ಹಾಗೂ 2ಜಿಯಿಂದ 4g ಡೇಟಾ ಜಗತ್ತಿಗೆ ಸ್ಥಳಾಂತರಗೊಳ್ಳಲು ಜಿಯೋಫೋನ್ ಗ್ರಾಹಕರು ವ್ಯಯಿಸುವ ₹700 ಮೊತ್ತಕ್ಕೆ ಪ್ರತಿಯಾಗಿ, ಜಿಯೋ ತನ್ನ ಕಡೆಯಿಂದಲೂ ಒಂದು ಹೂಡಿಕೆಯ ವಾಗ್ದಾನ ಮಾಡುತ್ತಿದೆ. ಇದು ಜಿಯೋದ ಹೂಡಿಕೆ ಮತ್ತು ಭಾರತೀಯ ಸಮಾಜದ ಅತ್ಯಂತ ಅಗತ್ಯವುಳ್ಳ ವರ್ಗಗಳನ್ನು ಅಂತರಜಾಲದ ಅರ್ಥವ್ಯವಸ್ಥೆಗೆ ಕರೆತರುವ ನಿಟ್ಟಿನ ಬದ್ಧತೆಯಾಗಿದೆ.

₹700 ಮೌಲ್ಯದ ಡೇಟಾ ಲಾಭ ದೊರಕಲಿದೆ

₹700 ಮೌಲ್ಯದ ಡೇಟಾ ಲಾಭ ದೊರಕಲಿದೆ

ದೀಪಾವಳಿ 2019 ಕೊಡುಗೆಯ ಮೂಲಕ ಜಿಯೋಗೆ ಸೇರುವ ಜಿಯೋಫೋನ್ ಗ್ರಾಹಕರಿಗೆ ಜಿಯೋ ವತಿಯಿಂದ ₹700 ಮೌಲ್ಯದ ಡೇಟಾ ಲಾಭ ದೊರಕಲಿದೆ. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್‌ಗಳಿಗೆ, ತಲಾ ₹99 ಮೌಲ್ಯದ ಡೇಟಾವನ್ನು ಜಿಯೋ ಹೆಚ್ಚುವರಿಯಾಗಿ ನೀಡಲಿದೆ.

₹700 ಮೌಲ್ಯದ ಈ ಹೆಚ್ಚುವರಿ ಡೇಟಾದಿಂದ ಮನರಂಜನೆ, ಪಾವತಿಗಳು, ಇ-ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್, ಕೃತಕ ಬುದ್ಧಿಮತ್ತೆಯ (ಎಐ) ಆಪ್‌ಗಳು ಮತ್ತಿತರ ಅನೇಕ ಸವಲತ್ತುಗಳ ಹಿಂದೆಂದೂ ನೋಡಿರದ ಜಗತ್ತನ್ನು ಪ್ರವೇಶಿಸುವುದು ಜಿಯೋಫೋನ್ ಗ್ರಾಹಕರಿಗೆ ಸಾಧ್ಯವಾಗಲಿದೆ.

2ಜಿಯಿಂದ 4ಜಿಗೆ ಬದಲಾಯಿಸಿಕೊಳ್ಳಿ

2ಜಿಯಿಂದ 4ಜಿಗೆ ಬದಲಾಯಿಸಿಕೊಳ್ಳಿ

ಜಿಯೋಫೋನ್ ಮೇಲೆ ₹800ರ ಉಳಿತಾಯ ಹಾಗೂ ₹700 ಮೌಲ್ಯದ ಡೇಟಾ ಸೇರಿ, ಪ್ರತಿ ಜಿಯೋಫೋನ್ ಮೇಲೆ ₹1,500ರಷ್ಟು ಲಾಭ ದೊರಕುತ್ತಿದೆ. ಅಭಿವೃದ್ಧಿಹೊಂದುತ್ತಿರುವ ಡಿಜಿಟಲ್ ಇಂಡಿಯಾಗಾಗಿ ₹1,500ರ ಈ ಲಾಭ ಜಿಯೋದ ದೀಪಾವಳಿ ಉಡುಗೊರೆಯಾಗಿದೆ. ಹಬ್ಬದ ತಿಂಗಳಿನಲ್ಲಿ ಲಭ್ಯವಿರುವ ಈ ಒಂದು ಬಾರಿಯ ಕೊಡುಗೆಯನ್ನು ಬಳಸಿಕೊಳ್ಳಲು ಹಾಗೂ ಜಿಯೋಫೋನ್ ವೇದಿಕೆಗೆ ಉನ್ನತೀಕರಿಸಿಕೊಳ್ಳಲು 2ಜಿ ಸೇವೆಗಳನ್ನು ಬಳಸುತ್ತಿರುವ ಎಲ್ಲ ಭಾರತೀಯರನ್ನೂ ಜಿಯೋ ಆಹ್ವಾನಿಸುತ್ತಿದೆ.

ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ

ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಮುಖೇಶ್ ಡಿ. ಅಂಬಾನಿ, "ಕೈಗೆಟುಕುವ ಬೆಲೆಯ ಅಂತರಜಾಲದಿಂದ ಹಾಗೂ ಡಿಜಿಟಲ್ ಕ್ರಾಂತಿಯ ಫಲಗಳಿಂದ ಯಾವ ಭಾರತೀಯರೂ ವಂಚಿತರಾಗದಂತೆ ಜಿಯೋ ಖಾತರಿಪಡಿಸಲಿದೆ. 'ಜಿಯೋಫೋನ್ ದೀಪಾವಳಿ ಉಡುಗೊರೆ'ಯನ್ನು ನೀಡುವ ಮೂಲಕ, ಆರ್ಥಿಕ ಪಿರಮಿಡ್‌ನ ಕೆಳಭಾಗದಲ್ಲಿರುವ ಪ್ರತಿಯೊಬ್ಬ ಹೊಸ ವ್ಯಕ್ತಿಯನ್ನೂ ಅಂತರಜಾಲದ ಅರ್ಥವ್ಯವಸ್ಥೆಗೆ ಕರೆತರುವ ನಿಟ್ಟಿನಲ್ಲಿ ನಾವು ₹1,500 ಮೊತ್ತದ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಆಂದೋಲನದ ಯಶಸ್ಸಿನ ಕುರಿತು ನಮಗಿರುವ ಬದ್ಧತೆಯನ್ನೂ ಇದು ತೋರಿಸುತ್ತದೆ." ಎಂದು ಹೇಳಿದ್ದಾರೆ.

35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ತಲುಪಿಲ್ಲ

35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ತಲುಪಿಲ್ಲ

ಭಾರತದಲ್ಲಿ, ಭಾರತೀಯರಿಂದ, ಭಾರತೀಯರಿಗಾಗಿ ಮತ್ತು ಭಾರತೀಯ ಕಾರ್ಯಾಚರಣ ವ್ಯವಸ್ಥೆಯೊಂದಿಗೆ ತಯಾರಾದ ಏಕೈಕ ಸ್ಮಾರ್ಟ್‌ಫೋನ್ ಎಂದರೆ ಅದು ಜಿಯೋ ಸ್ಮಾರ್ಟ್‌ಫೋನ್.

ಇನ್ನೂ 2ಜಿ ಜಾಲವನ್ನು ಬಳಸುತ್ತಿರುವ ಸುಮಾರು 35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ಇನ್ನೂ ತಲುಪಿಲ್ಲ. ಸವಲತ್ತುಗಳ ದೃಷ್ಟಿಯಿಂದ ಅವರು ನಮ್ಮ ದೇಶದಲ್ಲೇ ಅತ್ಯಂತ ಹಿಂದುಳಿದವರಾಗಿದ್ದು ಜಿಯೋಫೋನ್‌ನ ಕಡಿಮೆ ಬೆಲೆಯೂ ಅವರ ಕೈಗೆಟುಕುತ್ತಿಲ್ಲ. ಇದೀಗ ಈ 35 ಕೋಟಿ 2ಜಿ ಬಳಕೆದಾರರು ಡೇಟಾ ಸೇವೆಗಳನ್ನು ಸಂಪೂರ್ಣವಾಗಿ ತೊರೆಯುವ, ಇಲ್ಲವೇ ಕಡಿಮೆ ಗುಣಮಟ್ಟದ 2ಜಿ ಡೇಟಾಕ್ಕೆ ಅತ್ಯಂತ ಹೆಚ್ಚು ಶುಲ್ಕ ತೆರುವ ಕಠಿಣ ಆಯ್ಕೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಉಚಿತ ವಾಯ್ಸ್ ಕರೆಗಳ ಸೌಲಭ್ಯವೂ ಇಲ್ಲ, ಅಂತರಜಾಲವನ್ನು ಬಳಸುವ ಅವಕಾಶವೂ ಇಲ್ಲ.

English summary
Jio is making the JioPhone available for a special price of only Rs 699 as against the current price of Rs. 1500. This is a clear saving of over Rs. 800 without any special conditions like having to exchange your old phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X