ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಸಾವನ್ ನಿಂದ 45 ಮಿಲಿಯನ್ ಸಾಂಗ್ಸ್ ನಿಮಗಾಗಿ

|
Google Oneindia Kannada News

ಮುಂಬೈ, ಡಿಸೆಂಬರ್ 06: ಸಂಗೀತ, ಮೀಡಿಯಾ ಹಾಗೂ ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆಯಾದ 'ಜಿಯೋಸಾವನ್' ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ಸಾವನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಲೋಕಾರ್ಪಣೆಗೊಳಿಸಿದೆ.

ಭಾರತದ ಅತ್ಯಂತ ಜನಪ್ರಿಯ ಮ್ಯೂಸಿಕ್ ಆಪ್ ಜಿಯೋಮ್ಯೂಸಿಕ್ ಹಾಗೂ ಭಾರತದ ಮುಂಚೂಣಿ ಜಾಗತಿಕ ಓವರ್-ದ-ಟಾಪ್ ವೇದಿಕೆ ಸಾವನ್‌ಗಳ ಅಧಿಕೃತ ಏಕೀಕರಣವನ್ನು ಜಿಯೋಸಾವನ್ ಪ್ರತಿನಿಧಿಸಲಿದೆ.

ಜಿಯೋ ಮನಿ ಅಪ್ಲಿಕೇಷನ್ ಶೀಘ್ರದಲ್ಲೇ ಚಾಲನೆಗೆ ಬರಲಿದೆ! ಜಿಯೋ ಮನಿ ಅಪ್ಲಿಕೇಷನ್ ಶೀಘ್ರದಲ್ಲೇ ಚಾಲನೆಗೆ ಬರಲಿದೆ!

ಈ ಹೊಸ ಏಕೀಕೃತ ಜಿಯೋಸಾವನ್ ಆಪ್ ಜಿಯೋ ಆಪ್ ಸ್ಟೋರ್ ಸೇರಿದಂತೆ ಎಲ್ಲ ಆಪ್ ಸ್ಟೋರ್‌ಗಳಲ್ಲಿ, ಜಿಯೋಫೋನ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಮಾರ್ಚ್ 2018ರಲ್ಲಿ, ಸಾವನ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಸೇರ್ಪಡೆಯಾದ ಸಂದರ್ಭದಲ್ಲಿ ಘೋಷಿಸಿದಂತೆ, ಈ ಏಕೀಕೃತ ಸಂಸ್ಥೆಯ ಮೌಲ್ಯ ಒಂದು ಬಿಲಿಯನ್ ಡಾಲರುಗಳಿಗಿಂತ ಹೆಚ್ಚಿದ್ದು ಇದು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಮೌಲ್ಯಯುತ ಮ್ಯೂಸಿಕ್ ಸ್ಟ್ರೀಮಿಂಗ್ ವೇದಿಕೆಯಾಗಿ, ವಿಶ್ವದಲ್ಲೇ ಅತ್ಯಂತ ಜನಪ್ರಿಯ ವೇದಿಕೆಗಳಲ್ಲೊಂದಾಗಿ ಹೊರಹೊಮ್ಮಿದೆ.

ಸಾವನ್‌ನ ಸ್ಟ್ರೀಮಿಂಗ್ ಮೀಡಿಯಾ ಪರಿಣತಿ ಹಾಗೂ ಜಿಯೋ ಡಿಜಿಟಲ್ ಸೇವೆಗಳ ಇಕೋಸಿಸ್ಟಂ ಒಟ್ಟುಗೂಡಿ ಜಿಯೋಸಾವನ್ ರೂಪುಗೊಂಡಿದೆ. 252 ಮಿಲಿಯನ್‌ಗೂ ಹೆಚ್ಚು ಚಂದಾದಾರರೊಡನೆ ಜಿಯೋ ಭಾರತದ ಅತಿದೊಡ್ಡ ಡಿಜಿಟಲ್ ಸೇವೆಗಳ ಜಾಲವಾಗಿದೆ. ಹೊಸ ಏಕೀಕೃತ ಆಪ್ ಅತ್ಯಂತ ವಿಸ್ತಾರವಾದ ಮಾರುಕಟ್ಟೆ ಸಾಧ್ಯತೆಯನ್ನು ಹೊಂದಿದ್ದು ಭಾರತದಲ್ಲಿರುವ ಗ್ರಾಹಕರನ್ನಷ್ಟೇ ಅಲ್ಲದೆ ವಿದೇಶಗಳಲ್ಲಿರುವ ಭಾರತೀಯರನ್ನೂ ತಲುಪಬಲ್ಲದಾಗಿದೆ.

ಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟ ಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟ

ಏಕೀಕೃತ ಜಿಯೋಸಾವನ್ ಆಪ್‌

ಏಕೀಕೃತ ಜಿಯೋಸಾವನ್ ಆಪ್‌

ಏಕೀಕೃತ ಜಿಯೋಸಾವನ್ ಆಪ್‌ನಿಂದ ಗ್ರಾಹಕರು ಆಪ್‌ನೊಳಗಿಗೆ ಉತ್ಪನ್ನಗಳು ಹಾಗೂ ಸಂಗೀತದ ಹೊಸ ಅನುಭವಗಳನ್ನು ನಿರೀಕ್ಷಿಸಬಹುದಾಗಿದೆ. ಇಂಟರಾಕ್ಟಿವ್ ಲಿರಿಕ್ಸ್ ಸೌಲಭ್ಯ, ಸ್ಥಳೀಯ ಭಾಷೆಗಳಲ್ಲಿನ ಮಾಹಿತಿ, ಕಾನ್ಸರ್ಟ್ ಹಾಗೂ ಲೈವ್ ಕಾರ್ಯಕ್ರಮಗಳೊಡನೆ ಜೊತೆಗೂಡುವಿಕೆ ಮಾತ್ರವೇ ಅಲ್ಲದೆ ವಿಶಿಷ್ಟ ವೀಡಿಯೋ ಕಂಟೆಂಟ್ ಕೂಡ ಮುಂದಿನ ಕೆಲ ತಿಂಗಳುಗಳಲ್ಲಿ ಈ ವೇದಿಕೆಯ ಮೂಲಕ ದೊರಕಲಿವೆ.

ಭಾರತದಲ್ಲಿ ಪ್ರೀಮಿಯಂ ಮಾದರಿಯಲ್ಲಿ ಲಭ್ಯ

ಭಾರತದಲ್ಲಿ ಪ್ರೀಮಿಯಂ ಮಾದರಿಯಲ್ಲಿ ಲಭ್ಯ

ಜಾಹೀರಾತು ಬೆಂಬಲಿತ ಆವೃತ್ತಿ ಎಲ್ಲ ಗ್ರಾಹಕರಿಗೂ ದೊರಕಲಿರುವ ಈ ಸೇವೆಯನ್ನು ಭಾರತದಲ್ಲಿ ಪ್ರೀಮಿಯಂ ಮಾದರಿಯಲ್ಲಿ ನೀಡಲಾಗುತ್ತಿದೆ. ಜಿಯೋ ಗ್ರಾಹಕರು ಏಕೀಕೃತ ಆಪ್‌ಗೆ ಮುಕ್ತ ಪ್ರವೇಶ ಪಡೆಯಲಿದ್ದಾರೆ. ಹೆಚ್ಚುವರಿಯಾಗಿ, ಈ ಲೋಕಾರ್ಪಣೆಯ ಅಂಗವಾಗಿ, ಜಿಯೋ ಗ್ರಾಹಕರು ಈ ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಆವೃತ್ತಿಯಾದ ಜಿಯೋಸಾವನ್ ಪ್ರೋ ಅನ್ನು 90 ದಿನಗಳ ಕಾಲ ಉಚಿತವಾಗಿ ಬಳಸಬಹುದಾಗಿದೆ.

ಆಕಾಶ್ ಅಂಬಾನಿ ಮಾತನಾಡಿ,

ಆಕಾಶ್ ಅಂಬಾನಿ ಮಾತನಾಡಿ,

ಜಿಯೋಸಾವನ್ ಲೋಕಾರ್ಪಣೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ತಂತ್ರಜ್ಞಾನದ ವಿನೂತನ ಆವಿಷ್ಕಾರಗಳನ್ನು ಕ್ಷಿಪ್ರವಾಗಿ ಅನುಭವಿಸುತ್ತಿರುವ, ಡಿಜಿಟಲ್ ಸೇವೆಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿರುವ, ಜಾಗತಿಕ ಮಟ್ಟದ ಡಿಜಿಟಲ್ ಮ್ಯೂಸಿಕ್ ಉದ್ದಿಮೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಭಾರತದ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಜಿಯೋಸಾವನ್ ಒಂದು ಮಹತ್ವದ ತಿರುವು ನೀಡಿದೆ. ಜಿಯೋನ ಆಧುನಿಕ ಡಿಜಿಟಲ್ ಸೇವೆಗಳ ಮೂಲಸೌಕರ್ಯ ಹಾಗೂ ವ್ಯಾಪಕ ಬಳಕೆದಾರ ಸಮುದಾಯವನ್ನು ಬಳಸಲಿರುವ ಜಿಯೋಸಾವನ್ ಭಾರತದ ಅತಿದೊಡ್ಡ ಸ್ಟ್ರೀಮಿಂಗ್ ವೇದಿಕೆಯಾಗಲಿದೆ" ಎಂದು ಹೇಳಿದರು.

ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್

ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್

ಭಾರತದ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಸೇವೆಗಳ ಜಾಲದ ಸಂಪನ್ಮೂಲಗಳು ಹಾಗೂ ಸಂಪರ್ಕದ ಬೆಂಬಲ ಪಡೆದುಕೊಂಡು, ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್ ಹಾಗೂ ಕಲಾವಿದರ ಅಭಿವೃದ್ಧಿ ವೇದಿಕೆಯಾದ ಆರ್ಟಿಸ್ಟ್ ಒರಿಜಿನಲ್ಸ್ (ಏಓ) ಅನ್ನು ಜಿಯೋಸಾವನ್ ಮುಂದೆಯೂ ಬೆಳೆಸಲಿದೆ. ಒರಿಜಿನಲ್ ಆಡಿಯೋ ಮನರಂಜನೆಯ ಅಭಿವೃದ್ಧಿ, ಮಾರ್ಕೆಟಿಂಗ್ ಹಾಗೂ ವಿತರಣೆಗೆ ಹೊಸ ಭಾಷ್ಯ ಬರೆದಿರುವ ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್, '#ನೋಫಿಲ್ಟರ್‌ನೇಹಾ', 'ಥ್ಯಾಂಕ್ ಯೂ ಫಾರ್ ಶೇರಿಂಗ್', 'ಟೇಕ್ 2 ವಿತ್ ಅನುಪಮಾ ಆಂಡ್ ರಾಜೀವ್', 'ಟಾಕಿಂಗ್ ಮ್ಯೂಸಿಕ್' ಹಾಗೂ 'ಕಹಾನಿ ಎಕ್ಸ್‌ಪ್ರೆಸ್ ವಿತ್ ನೀಲೇಶ್ ಮಿಸ್ರಾ'ದಂತಹ ಭಾರತದ ಅತ್ಯಂತ ಜನಪ್ರಿಯ ಆಡಿಯೋ ಪಾಡ್‌ಕಾಸ್ಟ್‌ಗಳನ್ನು ನಿರ್ಮಿಸಿ ವಿತರಿಸುತ್ತಿದೆ.

English summary
Available now across all app stores, JioSaavn services are being offered on a freemium model with all users having access to the ad-supported product. Jio subscribers will get a 90-day extended free trial of JioSaavn Pro, the streaming service’s premium product.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X