ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಮಾರ್ಟ್ App ಪ್ಲೇ ಸ್ಟೋರಲ್ಲಿ 10 ಲಕ್ಷ ಡೌನ್ ಲೋಡ್

|
Google Oneindia Kannada News

ಮುಂಬೈ, ಜುಲೈ 24: ರಿಲಯನ್ಸ್ ರೀಟೇಲ್ ವ್ಯವಹಾರದ ಭಾಗವಾದ ಗ್ರಾಹಕರ ದಿನಸಿ ಖರೀದಿ ವೇದಿಕೆ ಜಿಯೋಮಾರ್ಟ್ ಅಪ್ಲಿಕೇಷನ್ ಈಗ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಷನ್ ಶುರುವಾದ ಕೆಲವೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ 10 ಲಕ್ಷ ಡೌನ್ ಲೋಡ್ ಆಗಿದೆ.

ಶಾಪಿಂಗ್ ವಿಭಾಗದಲ್ಲಿ ಡೌನ್ ಲೋಡ್ ಆದ ಟಾಪ್ 3 ಅಪ್ಲಿಕೇಷನ್ ಗಳಲ್ಲಿ ಜಿಯೋ ಮಾರ್ಟ್ ಕೂಡ ಒಂದು. ಇದೀಗ ಗ್ರಾಹಕರಿಗೆ ಜಿಯೋ ಮಾರ್ಟ್ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲೂ ದೊರೆತಂತಾಗಿದೆ. ತುಂಬ ಸುಲಭವಾಗಿ ಕೈಗೆಟುಕುತ್ತದೆ. ಮೊಬೈಲ್ ತಲೆಮಾರಿನ ಗ್ರಾಹಕರು ಆಂಡ್ರಾಯಿಡ್ ಹಾಗೂ ಐಒಎಸ್ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತಿತರ ಗ್ಯಾಜೆಟ್ ಗಳ ಮೂಲಕ ಸುಲಭವಾಗಿ ಜಿಯೋಮಾರ್ಟ್ ಅಪ್ಲಿಕೇಷನ್ ಬಳಸಬಹುದು.

ಜಿಯೋ ಮಾರ್ಟ್ ಆ್ಯಪ್ ಬಿಡುಗಡೆ: ಹೇಗೆ ಕಾರ್ಯನಿರ್ವಹಿಸಲಿದೆ?ಜಿಯೋ ಮಾರ್ಟ್ ಆ್ಯಪ್ ಬಿಡುಗಡೆ: ಹೇಗೆ ಕಾರ್ಯನಿರ್ವಹಿಸಲಿದೆ?

ಅಪ್ಲಿಕೇಷನ್ ಅಂತಷ್ಟೇ ಅಲ್ಲ, ಜತೆಗೆ ಪೋರ್ಟಲ್ ಕೂಡ ಬಳಸಬಹುದು. ಲಾಗಿನ್ ಐಡಿ ಬಳಸಿಕೊಂಡು ಬೇರೆ ಬೇರೆ ಡಿವೈಸ್ ಗಳ ಮೂಲಕ ಜಿಯೋಮಾರ್ಟ್ ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು, ಖರೀದಿ ಮಾಡಬಹುದು. ಲಾಗ್ ಇನ್ ಐಡಿ ಬಳಸಿ, ಒಂದು ಬಾರಿ ಆಯ್ಕೆ ಮಾಡಿಕೊಂಡ ನಂತರ ಅದು ನಿಮ್ಮದೇ ಬುಟ್ಟಿಯಲ್ಲಿ (ಕಾರ್ಟ್) ಇರುತ್ತದೆ. ಈ ಹಿಂದಿನ ಆರ್ಡರ್ ಗಳು ಯಾವುವು ಅಂತಲೂ ಗೊತ್ತಾಗುತ್ತದೆ.

 ದಿನದಿನಕ್ಕೂ ಹೊಸ ಉತ್ಪನ್ನ, ಹೊಸ ಅನುಭವ

ದಿನದಿನಕ್ಕೂ ಹೊಸ ಉತ್ಪನ್ನ, ಹೊಸ ಅನುಭವ

ಬೀಟಾ ಪ್ಲಾಟ್ ಫಾರ್ಮ್ ಆದ jiomart.com ಅನ್ನು ಏಕಕಾಲಕ್ಕೆ ದೇಶದ 200 ನಗರ ಹಾಗೂ ಪಟ್ಟಣಗಳಲ್ಲಿ ಮಾರ್ಚ್ ಅಂತ್ಯದ ಹೊತ್ತಿಗೆ ಆರಂಭಿಸಲಾಯಿತು. ದೇಶದ ನಾನಾ ಕಡೆ ಜಿಯೋಮಾರ್ಟ್ ಲಭ್ಯವಿದ್ದು, ನಿಜವಾದ ಡಿಜಿಟಲ್ ಖರೀದಿ ಅನುಭವ ನೀಡುತ್ತದೆ. ಟಯರ್ 2 ಹಾಗೂ ಟಯರ್ 3 ಪಟ್ಟಣಗಳಲ್ಲೂ ಗ್ರಾಹಕರು ಆನ್ ಲೈನ್ ಖರೀದಿ ಹಾಗೂ ದಿನಸಿ, ಹಣ್ಣು, ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳು ಮೊದಲ ಬಾರಿಗೆ ಮನೆಗೆ ತಲುಪುತ್ತಿರುವ ಅನುಭವ ಪಡೆಯುತ್ತಿದ್ದಾರೆ.

 ಕನಿಷ್ಠ 5% ರಿಯಾಯಿತಿ ಭರವಸೆ

ಕನಿಷ್ಠ 5% ರಿಯಾಯಿತಿ ಭರವಸೆ

ಪರ್ಸನಲ್ ಕೇರ್ ಉತ್ಪನ್ನಗಳು, ಮನೆ ಹಾಗೂ ಅಡುಗೆ ಮನೆಯ ಅಗತ್ಯದ ಉತ್ಪನ್ನಗಳು, ಪೂಜೆಗೆ ಬೇಕಾದ ವಸ್ತುಗಳು, ಶೂ ಕೇರ್, ಮಕ್ಕಳಿಗೆ ಅಗತ್ಯ ಇರುವ ವಸ್ತುಗಳು, ಬ್ರ್ಯಾಂಡೆಡ್ ಆಹಾರ ಪದಾರ್ಥಗಳು ಹೀಗೆ ವಿಶಾಲವಾದ ಖರೀದಿ ಆಯ್ಕೆಗಳಿವೆ. ಅಗತ್ಯ ವಸ್ತುಗಳು ಎಲ್ಲದರ ಮೇಲೂ ಕನಿಷ್ಠ 5% ರಿಯಾಯಿತಿ ಭರವಸೆ ನೀಡಿದಂತೆಯೇ ನಡೆದುಕೊಳ್ಳುತ್ತಿದೆ ಹಾಗೂ ಆಕರ್ಷಕ ಬೆಲೆಗೆ ಉತ್ಪನ್ನಗಳನ್ನು ಒದಗಿಸುತ್ತಿದೆ ಜಿಯೋಮಾರ್ಟ್.

ಝೂಮ್‌ ಬದಲಿಗೆ ಜಿಯೋಮೀಟ್ ಬಳಸಿದರೆ ಎಷ್ಟು ಉಳಿತಾಯ?ಝೂಮ್‌ ಬದಲಿಗೆ ಜಿಯೋಮೀಟ್ ಬಳಸಿದರೆ ಎಷ್ಟು ಉಳಿತಾಯ?

 ಜಿಯೋಮಾರ್ಟ್ ಗೆ ಪಾವತಿ ಸುಲಭ

ಜಿಯೋಮಾರ್ಟ್ ಗೆ ಪಾವತಿ ಸುಲಭ

ಇದಲ್ಲದೆ ಜಿಯೋಮಾರ್ಟ್ ಗೆ ಪಾವತಿ ಮಾಡುವುದಕ್ಕೆ ಕೂಡ ಗ್ರಾಹಕರಿಗೆ ಅನುಕೂಲಕರ ಆಯ್ಕೆಗಳನ್ನು ನೀಡಲಾಗಿದೆ. ಈಚೆಗೆ ಸೊಡೆಕ್ಸೊ ಮೀಲ್ ಕೂಪನ್ ಕೂಡ ಸೇರಿಸಲಾಗಿದೆ. ಇನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್, ರೊನ್ ಲಾಯಲ್ಟಿ ಪಾಯಿಂಟ್ಸ್ ಹಾಗೂ ಕ್ಯಾಶ್ ಆನ್ ಡೆಲಿವರಿ ಮುಂತಾದವು ಈಗಾಗಲೇ ಇದ್ದವು. ಈಚೆಗೆ ಕ್ರೆಡಿಟ್ ಕಾರ್ಡ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಜತೆಗೆ ವ್ಯಾಲೆಟ್ ಕೂಡ ಸೇರಿಸಲಾಗಿದೆ.

 ಪ್ರತಿ ನಿತ್ಯ 2.5 ಲಕ್ಷ ಆರ್ಡರ್ ಗಳು

ಪ್ರತಿ ನಿತ್ಯ 2.5 ಲಕ್ಷ ಆರ್ಡರ್ ಗಳು

ದೇಶದಾದ್ಯಂತ ಪ್ರತಿ ನಿತ್ಯ 2.5 ಲಕ್ಷ ಆರ್ಡರ್ ಗಳು ಜಿಯೋಮಾರ್ಟ್ ಗೆ ಬರುತ್ತಿವೆ ಎಂದು ಈಚೆಗೆ ನಡೆದ ರಿಲಯನ್ಸ್ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಹೇಳಿದ್ದರು. ದಿನದಿನಕ್ಕೂ ಈ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ ಎಂದು ಕೂಡ ತಿಳಿಸಿದ್ದರು.

 ಜಿಯೋಮಾರ್ಟ್ ಮಾರುಕಟ್ಟೆ ಪಾಲು

ಜಿಯೋಮಾರ್ಟ್ ಮಾರುಕಟ್ಟೆ ಪಾಲು

ದಿನಸಿ ಪದಾರ್ಥಗಳ ಜತೆಗೆ ಎಲೆಕ್ಟ್ರಾನಿಕ್ಸ್, ಫ್ಯಾಷನ್, ಫಾರ್ಮಾಸ್ಯುಟಿಕಲ್ ಹಾಗೂ ಹೆಲ್ತ್ ಕೇರ್ ಉತ್ಪನ್ನಗಳನ್ನು ಸಹ ಮುಂಬರುವ ದಿನಗಳಲ್ಲಿ ಮಾರಾಟ ಮಾಡಲಾಗುವುದು ಎಂದು ರಿಲಯನ್ಸ್ ಘೋಷಿಸಿದೆ. "ರಿಲಯನ್ಸ್- ಫೇಸ್ ಬುಕ್ ಸಹಭಾಗಿತ್ವದಲ್ಲಿ 2024ರ ಹೊತ್ತಿಗೆ ಆನ್ ಲೈನ್ ದಿನಸಿ ವಿಭಾಗದಲ್ಲಿ ಜಿಯೋಮಾರ್ಟ್ ಶೇಕಡಾ 50ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರಲಿದೆ" ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

English summary
JioMart, Reliance Retail’s beta online consumer grocery platform has debuted its JioMart app on Google Play Store and iOS App Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X