ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋ ಫೈಬರ್‌ನಿಂದ ಹೊಸ ಪೋಸ್ಟ್‌ಪೇಡ್‌ ಪ್ಲಾನ್‌

|
Google Oneindia Kannada News

ನವದೆಹಲಿ, ಜೂನ್ 16: ರಿಲಯನ್ಸ್‌ ಜಿಯೋ ಫೈಬರ್ ಬಳಕೆದಾರರಿಗಾಗಿ ಹಲವಾರು ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ತಂದಿದೆ. ಈ ಪ್ಲಾನ್‌ಗಳು ಪ್ರತಿ ತಿಂಗಳಿಗೆ 399 ರೂ.ನಂತೆ ಆರಂಭವಾಗಲಿವೆ. ಹೊಸ ಪ್ಲಾನ್‌ ಚಾಲನೆಯ ಜೊತೆಗೆ ಕಂಪನಿಯು ಹೊಸ ಬಳಕೆದಾರರಿಗೆ ರೌಟರ್‌ಅನ್ನು ಉಚಿತವಾಗಿ ನೀಡುತ್ತಿದೆ.

ಅಲ್ಲದೆ ಗ್ರಾಹಕರು ಯಾವುದೇ ಇನ್‌ಸ್ಟಲೇಷನ್‌ಗಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಕನಿಷ್ಠ 6 ತಿಂಗಳ ವ್ಯಾಲಿಡಿಟಿಯನ್ನು ಖರೀದಿಸುವ ಗ್ರಾಹಕರು ಉಚಿತ ಇಂಟರ್ನೆಟ್ ಬಾಕ್ಸ್ ಮತ್ತು ಉಚಿತ ಇನ್‌ಸ್ಟಲೇಷನ್‌ ಲಾಭ ಪಡೆಯಲಿದ್ದು, ಇದರಿಂದ ಒಟ್ಟು 1500 ರೂ.ವರೆಗೆ ಉಳಿತಾಯವಾಗುವುದು. ಎಲ್ಲಾ ಪ್ಲಾನ್‌ಗಳು ಜೂನ್ 17 ರಿಂದ ಅನ್ವಯವಾಗುತ್ತವೆ.

ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ರಿಲಯನ್ಸ್ ಜಿಯೋನ ಹೊಸ ಪೋಸ್ಟ್‌ಪೇಯ್ಡ್ ಯೋಜನೆಯ ಒಂದು ವಿಶೇಷವೆಂದರೆ, ಇದರಲ್ಲಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಒಂದೇ ಆಗಿರುತ್ತದೆ. 399 ರೂ ಪ್ಲಾನ್‌ಗೆ 30 ಎಂಬಿ, 699 ರೂ. ಪ್ಲಾನ್‌ಗೆ 100 ಎಂಬಿ, 999 ರೂ. ಪ್ಲಾನ್‌ಗೆ 150 ಎಂಬಿ ಮತ್ತು 1499 ರೂ. ಪ್ಲಾನ್‌ಗೆ 300 ಎಂಬಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗವನ್ನು ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಇದಲ್ಲದೆ, 1 ಜಿಬಿಪಿಎಸ್ ವರೆಗಿನ ಪ್ಲಾನ್‌ಗಳು ಜಿಯೋ ಫೈಬರ್‌ನಲ್ಲಿ ಲಭ್ಯವಿವೆ.

JioFiber Postpaid new plan launched, How to get it

ರಿಲಯನ್ಸ್ ಜಿಯೋನ 999 ರೂ. ಪೋಸ್ಟ್‌ಪೇಯ್ಡ್ ಜಿಯೋಫೈಬರ್ ಸಂಪರ್ಕದೊಂದಿಗೆ, ಗ್ರಾಹಕರಿಗೆ ಉಚಿತ ಒಟಿಟಿ ಅಪ್ಲಿಕೇಶನ್‌ಗಳ ಲಾಭವೂ ಸಿಗಲಿದೆ. ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್, ಸೋನಿ ಲಿವ್, ಜಿ 5, ವೂಟ್ ಸೆಲೆಕ್ಟ್, ಸನ್ ನೆಕ್ಟ್ ಮತ್ತು ಹೊಯ್ಚೊಯ್‌ನಂತಹ 14 ಜನಪ್ರಿಯ ಒಟಿಟಿ ಅಪ್ಲಿಕೇಶನ್‌ಗಳು ಇದರಲ್ಲಿವೆ. 1499 ಯೋಜನೆಯು ನೆಟ್‌ಫ್ಲಿಕ್ಸ್ ಸೇರಿದಂತೆ ಎಲ್ಲಾ 15 ಒಟಿಟಿ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತದೆ.

ಈ ಅಪ್ಲಿಕೇಶನ್‌ಗಳ ಮಾರುಕಟ್ಟೆ ಬೆಲೆಯು 999 ರೂ. ಗಳಾಗಿದ್ದು, ಒಟಿಟಿ ಅಪ್ಲಿಕೇಶನ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು 1000 ರೂ.ಗಳ ಸೆಕ್ಯುರಿಟಿ ಠೇವಣಿ ತೆಗೆದುಕೊಳ್ಳುವ ಮೂಲಕ ಕಂಪನಿಯು 4K ಸೆಟ್ ಟಾಪ್ ಬಾಕ್ಸ್ ಅನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸುತ್ತದೆ.

ಜಿಯೋಫೈಬರ್ ಪೋಸ್ಟ್‌ಪೇಡ್ ಪಡೆಯುವುದು ಹೇಗೆ:

jio.com/fiberನಲ್ಲಿ ಲಾಗ್ ಇನ್ ಮಾಡುವ ಮೂಲಕ ಒಬ್ಬರು ಸೇವೆಯನ್ನು ಪಡೆಯಬಹುದು. ನಿಮ್ಮ ಪ್ರದೇಶವು ಜಿಯೋ ಫೈಬರ್ ಸಿದ್ಧವಾದ ತಕ್ಷಣ, ನಮ್ಮ ಕಾರ್ಯನಿರ್ವಾಹಕರು ನಿಮ್ಮನ್ನು ಸಂಪರ್ಕಿಸಿ, ಪೋಸ್ಟ್ ಪೇಡ್ ಕನೆಕ್ಷನ್ ನೀಡುತ್ತಾರೆ. ಜೂನ್ 17, ಗುರುವಾರದಿಂದ ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಸೇವೆ ಲಭ್ಯವಿರುತ್ತದೆ.

English summary
Jio launches JioFiber Postpaid with plans starting from Rs 399 per month, Here How to get it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X