ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್: ಟ್ರಾಯ್ ವರದಿ

|
Google Oneindia Kannada News

ಬೆಂಗಳೂರು, ಅ 13: ಸೆಪ್ಟೆಂಬರ್‌ನಲ್ಲಿ ರಿಲಯನ್ಸ್ ಜಿಯೋ ಸೆಕೆಂಡಿಗೆ ಸರಾಸರಿ 19.3 ಮೆಗಾಬಿಟ್ (mbps ) ಡೌನ್‌ಲೋಡ್ ವೇಗವನ್ನು ಹೊಂದಿರುವ ದೇಶದ ವೇಗದ ಮೊಬೈಲ್ ನೆಟ್‌ವರ್ಕ್ ಆಗಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್‌ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ ಅಪ್‌ಲೋಡ್ ವಿಷಯದಲ್ಲಿ ವೊಡಾಫೋನ್ ಅತಿ ಹೆಚ್ಚು ವೇಗವನ್ನು ದಾಖಲಿಸಿದೆ.

ಜಿಯೋ ನಂತರದಲ್ಲಿ 8.6 ಎಮ್‌ಬಿಪಿಎಸ್ ವೇಗವನ್ನು ಹೊಂದಿರುವ ಐಡಿಯಾ ಸೆಲ್ಯುಲಾರ್ ನೆಟ್‌ವರ್ಕ್ (ಈಗ ವೊಡಾಫೋನ್ ಐಡಿಯಾ) ಎರಡನೇ ಸ್ಥಾನದಲ್ಲಿದ್ದು, ವೊಡಾಫೋನ್ 7.9 ಎಮ್‌ ಬಿಪಿಎಸ್ ವೇಗವನ್ನು ಹಾಗೂ ಭಾರ್ತಿ ಏರ್‌ಟೆಲ್ 7.5 ಎಮ್‌ ಬಿಪಿಎಸ್ ಡೌನ್‌ಲೋಡ್ ವೇಗದ ಸೇವೆಯನ್ನು ನೀಡುತ್ತಿವೆ ಎಂದು ಅಕ್ಟೋಬರ್ 10 ರಂದು ನವೀಕರಿಸಿದ ಡೇಟಾವನ್ನು ಟ್ರಾಯ್ ಬಿಡುಗಡೆ ಮಾಡಿದೆ.

ಜಿಯೋದಿಂದ ಪೋಸ್ಟ್‌ ಪೇಯ್ಡ್ ಕ್ರೆಡಿಟ್ ಲಿಮಿಟ್ ಬಳಸುವುದು ಹೇಗೆ?ಜಿಯೋದಿಂದ ಪೋಸ್ಟ್‌ ಪೇಯ್ಡ್ ಕ್ರೆಡಿಟ್ ಲಿಮಿಟ್ ಬಳಸುವುದು ಹೇಗೆ?

ವೊಡಾಫೋನ್ ಮತ್ತು ಐಡಿಯಾ ತಮ್ಮ ಮೊಬೈಲ್ ವ್ಯವಹಾರಗಳನ್ನು ವಿಲೀನಗೊಳಿಸಿದ್ದರೂ, ಎರಡೂ ಕಂಪನಿಗಳ ನೆಟ್‌ವರ್ಕ್‌ಗಳ ಏಕೀಕರಣವು ಪ್ರಸ್ತುತದಲ್ಲಿರುವುದರಿಂದ ಟ್ರಾಯ್ಸ್ ಅವರ ಕಾರ್ಯಕ್ಷಮತೆಯನ್ನು ಪ್ರತ್ಯೇಕವಾಗಿ ಅಳೆಯುತ್ತಿದೆ.

49 ನಗರಗಳಲ್ಲಿ ಭಾರ್ತಿ ಏರ್‌ಟೆಲ್ ಮುಂದೆ

49 ನಗರಗಳಲ್ಲಿ ಭಾರ್ತಿ ಏರ್‌ಟೆಲ್ ಮುಂದೆ

ಖಾಸಗಿ ಸಂಸ್ಥೆ ಓಪನ್‌ ಸಿಗ್ನಲ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ 49 ನಗರಗಳಲ್ಲಿ ಭಾರ್ತಿ ಏರ್‌ಟೆಲ್ ಭಾರತದಲ್ಲಿ ವೇಗವಾಗಿ ಡೌನ್‌ಲೋಡ್ ವೇಗವನ್ನು ಹೊಂದಿದೆ ಎಂದು ಘೋಷಿಸಿದ ನಂತರ ಈ ವರದಿ ಬಂದಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ನೈಜ-ಸಮಯದ ಆಧಾರದ ಮೇಲೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಂಗ್ರಹಿಸಿದ ಡೇಟಾದಿಂದ ಸರಾಸರಿ ನೆಟ್‌ವರ್ಕ್ ವೇಗವನ್ನು ಲೆಕ್ಕಾಚಾರ ಮಾಡುತ್ತದೆ.

ಟೆಲಿಕಾಂ ಆಪರೇಟರ್ ಗಳ ಸರಾಸರಿ ವೇಗ ಹೆಚ್ಚಿದೆ

ಟೆಲಿಕಾಂ ಆಪರೇಟರ್ ಗಳ ಸರಾಸರಿ ವೇಗ ಹೆಚ್ಚಿದೆ

ಟ್ರಾಯ್ ಚಾರ್ಟ್ ಪ್ರಕಾರ, ಆಗಸ್ಟ್ ನಲ್ಲಿ ದಾಖಲಾದ ದತ್ತಾಂಶಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಎಲ್ಲಾ ಖಾಸಗಿ ಟೆಲಿಕಾಂ ಆಪರೇಟರ್ ಗಳ ಸರಾಸರಿ ವೇಗ ಹೆಚ್ಚಾಗಿದೆ.

ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

ರಿಲಯನ್ಸ್ ಜಿಯೋ ನೆಟ್‌ವರ್ಕ್‌ನಲ್ಲಿ ಡೌನ್‌ಲೋಡ್ ವೇಗ ಸೆಪ್ಟೆಂಬರ್‌ನಲ್ಲಿ ಶೇ 21 ರಷ್ಟು ಏರಿಕೆಯಾಗಿದ್ದು, ಆಗಸ್ಟ್‌ನಲ್ಲಿ 15.9 ಎಮ್‌ಬಿಪಿಎಸ್‌ ನಷ್ಟು ಇದ್ದ ವೇಗ 19.3 ಎಮ್‌ಬಿಪಿಎಸ್ ಗೆ ಏರಿಕೆಯಾಗಿದೆ. ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ 7 ಶೇಕಡಾ ರಷ್ಟು, ವೊಡಾಫೋನ್ ಮತ್ತು ಐಡಿಯಾ ನೆಟ್‌ವರ್ಕ್‌ನಲ್ಲಿ ಶೇಕಡಾ 1-3 ರಷ್ಟು ಹೆಚ್ಚಾಗಿದೆ.

ವಿವಿಧ ಟೆಲಿಕಾಂ ನಡುವೆ ಹೋಲಿಕೆ

ವಿವಿಧ ಟೆಲಿಕಾಂ ನಡುವೆ ಹೋಲಿಕೆ

ಡೌನ್‌ಲೋಡ್ ವೇಗವು ವಿವಿಧ ಅಪ್ಲಿಕೇಶನ್‌ಗಳ ಕಂಟೆಂಟ್‌ಗಳನ್ನು ನೋಡಲು ಸಹಾಯ ಮಾಡುತ್ತದೆ, ಆದರೆ ಅಪ್‌ಲೋಡ್ ವೇಗವು ಚಂದಾದಾರರಿಗೆ ಫೋಟೋಗಳು ಮತ್ತು ವೀಡಿಯೊಗಳಂತಹ ವಿಷಯವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ವೊಡಾಫೋನ್ ಗರಿಷ್ಠ ಸರಾಸರಿ ಅಪ್‌ಲೋಡ್ ವೇಗವನ್ನು 6.5 ಎಮ್‌ಬಿಪಿಎಸ್ ದಾಖಲಿಸಿದ್ದು, ಐಡಿಯಾ 6.4 ಎಮ್‌ಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿದೆ. ಭಾರ್ತಿ ಏರ್‌ಟೆಲ್ ಮತ್ತು ಜಿಯೋ ನೆಟ್‌ವರ್ಕ್ ತಲಾ 3.5 ಎಮ್‌ಬಿಪಿಎಸ್ ವೇಗವನ್ನು ದಾಖಲಿಸಿದೆ.

Recommended Video

Corona ಬಿಕ್ಕಟ್ಟಿನ ನಡುವೆಯೂ ISRO ಮಹತ್ವದ ಹೆಜ್ಜೆ | Oneindia Kannada
ಜಿಯೋ ನಿರ್ದೇಶಕ ಆಕಾಶ್ ಅಂಬಾನಿ

ಜಿಯೋ ನಿರ್ದೇಶಕ ಆಕಾಶ್ ಅಂಬಾನಿ

ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ಒಂದು ದಶಲಕ್ಷಕ್ಕೂ ಹೆಚ್ಚು ಸಂಪರ್ಕಿತ ಮನೆಗಳನ್ನು ಹೊಂದಿರುವ ಜಿಯೋಫೈಬರ್ ಈಗಾಗಲೇ ದೇಶದ ಅತಿದೊಡ್ಡ ಫೈಬರ್ ಪ್ರೊವೈಡರ್ ಆಗಿದೆಯಾದರೂ ಭಾರತ ಮತ್ತು ಭಾರತೀಯರಿಗಾಗಿ ನಮ್ಮ ದೂರದೃಷ್ಟಿ ಇನ್ನೂ ದೊಡ್ಡದಾಗಿದೆ. ನಾವು ಫೈಬರ್ ಅನ್ನು ಪ್ರತಿಯೊಂದು ಮನೆಗೂ ಕೊಂಡೊಯ್ಯಲು ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಸಶಕ್ತರಾಗಿಸಲು ಬಯಸುತ್ತೇವೆ ಎಂದಿದ್ದಾರೆ.

ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?

English summary
Reliance Jio continues to remain the fastest mobile network with an average download speed of 19.3 megabit per second (mbps), while Vodafone recorded the highest speed in terms of upload in September, according to the latest data from telecom regulator Trai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X