ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ 4G ಡೌನ್‌ಲೋಡ್ ವೇಗದಲ್ಲಿ ಜಿಯೋ ನಂಬರ್ ಒನ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್‌ ಗಿಂತಲೂ ಉತ್ತಮ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಪ್ರಕಟಿಸಿರುವ ಸೆಪ್ಟೆಂಬರ್ ತಿಂಗಳ 4G ಡೌನ್‌ಲೋಡ್ ವೇಗದಲ್ಲಿ ಜಿಯೋ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಪ್ರತಿ ಸೆಕೆಂಡಿಗೆ ಸರಾಸರಿ 21 ಮೆಗಾಬಿಟ್ ವೇಗದ 4G ಡೌನ್‌ಲೋಡ್ ಇಂಟರ್ನೆಟ್ ಅನ್ನು ಜಿಯೋ ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದು ಏರ್‌ಟೆಲ್‌ಗಿಂತಲೂ 2.5 ಪಟ್ಟು ಅಧಿಕ ವೇಗವಾಗಿದೆ ಎಂಬುದು ಟ್ರಾಯ್ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿಯಬಹುದಾಗಿದೆ.

ರಿಲಯನ್ಸ್ ಜಿಯೋ ಗ್ರಾಹಕರಿಗೆ ಹೊಸ 'ಆಲ್​ ಇನ್​ ಒನ್​ ' ಯೋಜನೆರಿಲಯನ್ಸ್ ಜಿಯೋ ಗ್ರಾಹಕರಿಗೆ ಹೊಸ 'ಆಲ್​ ಇನ್​ ಒನ್​ ' ಯೋಜನೆ

ಸೆಪ್ಟೆಂಬರ್‌ನಲ್ಲಿ ಭಾರ್ತಿ ಏರ್‌ಟೆಲ್ ನೆಟ್‌ವರ್ಕ್ ಸರಾಸರಿ ಡೌನ್‌ಲೋಡ್ ವೇಗ 8.3 ಮೆಗಾಬಿಟ್ ಆಗಿದ್ದು. ಇದರ ನಂತರ ವೊಡಾಫೋನ್ 6.9 MBPS ವೇಗದಲ್ಲಿ ಮತ್ತು ಐಡಿಯಾ ಸೆಲ್ಯುಲಾರ್ 6.4 MBPS ಡೌನ್‌ಲೋಡ್ ವೇಗದ ನೆಟ್‌ವರ್ಕ್‌ ಅನ್ನು ತಮ್ಮ ಬಳಕೆದಾರರಿಗೆ ನೀಡುತ್ತಿದೆ ಎಂದು ಟ್ರಾಯ್ ತಿಳಿಸಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ಎರಡೂ ತಮ್ಮ ವ್ಯವಹಾರಗಳನ್ನು ವಿಲೀನಗೊಳಿಸಿವೆ ಆದರೆ ಅವುಗಳ ನೆಟ್‌ವರ್ಕ್ ಏಕೀಕರಣವು ಇನ್ನೂ ಚಾಲ್ತಿಯಲ್ಲಿದೆ.

ಭಾರ್ತಿ ಏರ್‌ಟೆಲ್ ವಿರುದ್ಧ ಜಿಯೋ ವೇಗ

ಭಾರ್ತಿ ಏರ್‌ಟೆಲ್ ವಿರುದ್ಧ ಜಿಯೋ ವೇಗ

ಖಾಸಗಿ ಮೊಬೈಲ್ ಡಾಟಾ ಅನಾಲಿಟಿಕ್ಸ್ ಸಂಸ್ಥೆ ಓಪನ್‌ ಸಿಗ್ನಲ್, ಭಾರ್ತಿ ಏರ್‌ಟೆಲ್ ಅನ್ನು ಜೂನ್-ಆಗಸ್ಟ್ 2019 ರ ನಡುವೆ ವೇಗವಾಗಿ ಡೇಟಾ ಡೌನ್‌ಲೋಡ್ ಸೇವೆಯನ್ನು ನೀಡಿದೆ ಎಂದು ಸಮೀಕ್ಷಾ ವರದಿಯೊಂದರಲ್ಲಿ ಹೇಳಿದೆ. ಆದರೆ ಇದೇ ಸಂದರ್ಭದಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಪ್ರಕಟಿಸಿದ ದತ್ತಾಂಶವು ಓಪನ್‌ಸಿಗ್ನಲ್ ಸಮೀಕ್ಷೆಯ ಅವಧಿಯಲ್ಲಿ ಜಿಯೋ ಡೌನ್‌ಲೋಡ್ ವೇಗದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ತೋರಿಸಿದೆ.

ಮೈಸ್ಪೀಡ್ ಅಪ್ಲಿಕೇಶನ್‌ ನಿಂದ ಸಿಕ್ಕ ಮಾಹಿತಿ

ಮೈಸ್ಪೀಡ್ ಅಪ್ಲಿಕೇಶನ್‌ ನಿಂದ ಸಿಕ್ಕ ಮಾಹಿತಿ

ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಹಾಕುತ್ತದೆ. ಕೇವಲ 3G ನೆಟ್‌ವರ್ಕ್ ಹೊಂದಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗಿಂತಲೂ ಉತ್ತಮವಾಗಿದ್ದು, 2.6 MBPS ಡೌನ್‌ಲೋಡ್ ವೇಗವನ್ನು ಮತ್ತು 1.3 MBPS ಅಪ್‌ಲೋಡ್ ವೇಗವನ್ನು ಹೊಂದಿದೆ.

ಐಎಂಸಿ 2019: ಜಿಯೋ ಮತ್ತು ಸ್ಯಾಮ್‌ಸಂಗ್ 5G ಮತ್ತು LTE ಪ್ರದರ್ಶನಐಎಂಸಿ 2019: ಜಿಯೋ ಮತ್ತು ಸ್ಯಾಮ್‌ಸಂಗ್ 5G ಮತ್ತು LTE ಪ್ರದರ್ಶನ

ಐಡಿಯಾ ಸೆಲ್ಯುಲಾರ್ ಗೂ ಅಗ್ರಸ್ಥಾನ

ಐಡಿಯಾ ಸೆಲ್ಯುಲಾರ್ ಗೂ ಅಗ್ರಸ್ಥಾನ

ಐಡಿಯಾ ಸೆಲ್ಯುಲಾರ್ ಸೆಪ್ಟೆಂಬರ್‌ನಲ್ಲಿ 5.4 MBPS ವೇಗದೊಂದಿಗೆ ಅಪ್‌ಲೋಡ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ವೋಡಾಪೋನ್ ಎರಡನೇ ಸ್ಥಾನದಲ್ಲಿದ್ದು, ಐಡಿಯಾ- ವೊಡಾಫೋನ್ ಎರಡನ್ನು ಸೇರಿಸಿದರೆ ಸರಾಸರಿ ಅಪ್‌ಲೋಡ್ ವೇಗವನ್ನು 5.2 MBPS ಆಗಲಿದೆ. ಟ್ರಾಯ್ ಪ್ರಕಟಿಸಿದ ಮಾಹಿತಿಯ ಪ್ರಕಾರ, ಜಿಯೋ ಈ ವಿಭಾಗದಲ್ಲಿ 4.2 MBPS ವೇಗದೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಏರ್‌ಟೆಲ್ 3.1 MBPS ಅಪ್‌ಲೋಡ್ ವೇಗವನ್ನು ಹೊಂದಿದೆ.

ವಿಡಿಯೋ ಅಪ್ಲೋಡ್, ಡೌನ್ ಲೋಡ್

ವಿಡಿಯೋ ಅಪ್ಲೋಡ್, ಡೌನ್ ಲೋಡ್

ಡೌನ್‌ಲೋಡ್ ವೇಗವು ವಿವಿಧ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಲು, ವಿಡಿಯೋ ನೋಡಲು ಮುಂತಾದ ಕಾರ್ಯಗಳಿಗೆ ಸಹಾಯ ಮಾಡುತ್ತದೆ ಮತ್ತು ಅಪ್‌ಲೋಡ್ ವೇಗವು ಇಮೇಲ್, ಫೋಟೋ, ವಿಡಿಯೋ ಮುಂತಾದ ವಿಷಯವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣ

English summary
Telecom operator Reliance Jio recorded over 2.5 times higher average data download speed of 21 megabit per second in September 2019, compared to its closest competitor Bharti Airtel, according to data released by the sector regulator Trai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X