ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ಜಿ ಡೌನ್‌ಲೋಡ್ ವೇಗ: ಜುಲೈ ತಿಂಗಳಲ್ಲಿ ಜಿಯೋ ಪ್ರಥಮ

|
Google Oneindia Kannada News

ಬೆಂಗಳೂರು, ಆಗಸ್ಟ್ 21: ಕಳೆದ ಜುಲೈ ತಿಂಗಳಿನಲ್ಲಿ ಪ್ರತಿ ಸೆಕೆಂಡಿಗೆ 21 ಮೆಗಾಬಿಟ್ಸ್ (Mbps) ಸರಾಸರಿ ಡೌನ್‌ಲೋಡ್ ವೇಗದೊಂದಿಗೆ, ಅತ್ಯಂತ ವೇಗದ ಮೊಬೈಲ್ ಜಾಲವಾಗಿ ರಿಲಯನ್ಸ್ ಜಿಯೋ ತನ್ನ ಮುಂಚೂಣಿ ಸ್ಥಾನದಲ್ಲಿ ಮುಂದುವರೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ದತ್ತಾಂಶದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಅಪ್‌ಲೋಡ್ ವೇಗದಲ್ಲಿ ವೋಡಾಫೋನ್ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಜೂನ್ ತಿಂಗಳಿನಲ್ಲಿ 17.6 Mbps 4ಜಿ ಡೌನ್‌ಲೋಡ್ ವೇಗ ದಾಖಲಿಸಿದ್ದ ಜಿಯೋ, ಜುಲೈನಲ್ಲಿ 21 Mbps ತಲುಪುವ ಮೂಲಕ ವೇಗವನ್ನು ಉತ್ತಮಪಡಿಸಿಕೊಂಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಕಟಿಸಿರುವ ಸ್ಪೀಡ್ ಚಾರ್ಟ್ ಪ್ರಕಾರ ಏರ್‌ಟೆಲ್, ವೋಡಾಫೋನ್ ಹಾಗೂ ಐಡಿಯಾ ಸೆಲ್ಯುಲರ್ ಅನುಕ್ರಮವಾಗಿ 8.8 Mbps, 7.7 Mbps ಹಾಗೂ 6.6 Mbps ಸರಾಸರಿ ಡೌನ್‌ಲೋಡ್ ವೇಗವನ್ನು ದಾಖಲಿಸಿವೆ.

ಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿ ಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿ

ಜುಲೈ ತಿಂಗಳಿನಲ್ಲಿ 2.5 Mbps ಸರಾಸರಿ ಡೌನ್‌ಲೋಡ್ ವೇಗದೊಡನೆ ಸರ್ಕಾರಿ ಒಡೆತನದ ಬಿಎಸ್‌ಎನ್‌ಎಲ್ ಅತಿವೇಗದ 3G ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2 Mbps ಸರಾಸರಿ ಡೌನ್‌ಲೋಡ್ ವೇಗದೊಡನೆ ಐಡಿಯಾ, 1.9 Mbpsನೊಡನೆ ವೋಡಾಫೋನ್ ಹಾಗೂ 1.4 Mbpsನೊಡನೆ ಏರ್‌ಟೆಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಜುಲೈನಲ್ಲಿ 5.8 Mbps ಸರಾಸರಿ ಅಪ್‌ಲೋಡ್ ವೇಗ

ಜುಲೈನಲ್ಲಿ 5.8 Mbps ಸರಾಸರಿ ಅಪ್‌ಲೋಡ್ ವೇಗ

ಜುಲೈನಲ್ಲಿ 5.8 Mbps ಸರಾಸರಿ ಅಪ್‌ಲೋಡ್ ವೇಗದೊಡನೆ ವೋಡಾಫೋನ್ ಅತಿವೇಗದ 4G ಅಪ್‌ಲೋಡ್ ಜಾಲವಾಗಿ ಹೊರಹೊಮ್ಮಿದೆ. 5.3 Mbps ಅಪ್‌ಲೋಡ್ ವೇಗದೊಡನೆ ಐಡಿಯಾ ಸೆಲ್ಯುಲರ್, 4.3 Mbpsನೊಡನೆ ಜಿಯೋ ಹಾಗೂ 3.2 Mbpsನೊಡನೆ ಏರ್‌ಟೆಲ್, ಈ ಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ಪಡೆದಿವೆ.

3G ಜಾಲಗಳ ಪೈಕಿ ಡೌನ್ ಲೋಡ್ ವೇಗ

3G ಜಾಲಗಳ ಪೈಕಿ ಡೌನ್ ಲೋಡ್ ವೇಗ

ಬಳಕೆದಾರರು ಯಾವುದೇ ವೀಡಿಯೋ ವೀಕ್ಷಿಸಲು, ಅಂತರಜಾಲ ತಾಣಗಳನ್ನು ಬ್ರೌಸ್ ಮಾಡಲು, ಇಮೇಲ್‌ ಸಂದೇಶಗಳನ್ನು ಪಡೆದುಕೊಳ್ಳಲು ಡೌನ್‌ಲೋಡ್ ವೇಗ ಉತ್ತಮವಾಗಿರಬೇಕಾದ್ದು ಅತ್ಯಗತ್ಯ. ಇದೇ ರೀತಿ ಗ್ರಾಹಕರು ಇಮೇಲ್ ಅಥವಾ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಮೂಲಕ ಚಿತ್ರ, ವೀಡಿಯೋ ಮತ್ತಿತರ ಕಡತಗಳನ್ನು ಹಂಚಿಕೊಳ್ಳಲು ಅಪ್‌ಲೋಡ್ ವೇಗ ಉತ್ತಮವಾಗಿರಬೇಕಾಗುತ್ತದೆ. 3G ಜಾಲಗಳ ಪೈಕಿ ಬಿಎಸ್‌ಎನ್‌ಎಲ್, ವೋಡಾಫೋನ್ ಹಾಗೂ ಐಡಿಯಾ ಜುಲೈ ತಿಂಗಳಿನಲ್ಲಿ 1.2 Mbps ಸರಾಸರಿ ಅಪ್‌ಲೋಡ್ ವೇಗ ದಾಖಲಿಸಿದರೆ, ಏರ್‌ಟೆಲ್‌ನ ಅಪ್‌ಲೋಡ್ ವೇಗ 0.6 Mbpsಗಳಷ್ಟಿತ್ತು.

ರಿಲಯನ್ಸ್ ನಿವ್ವಳ ಲಾಭದಲ್ಲಿ 6.8% ಏರಿಕೆ, 30 ಕೋಟಿ ದಾಟಿದ ಗ್ರಾಹಕರು ರಿಲಯನ್ಸ್ ನಿವ್ವಳ ಲಾಭದಲ್ಲಿ 6.8% ಏರಿಕೆ, 30 ಕೋಟಿ ದಾಟಿದ ಗ್ರಾಹಕರು

ಜೂನ್ ತಿಂಗಳಿನಲ್ಲಿ ಜಿಯೋ ಗ್ರಾಹಕರ ಸಂಖ್ಯೆ

ಜೂನ್ ತಿಂಗಳಿನಲ್ಲಿ ಜಿಯೋ ಗ್ರಾಹಕರ ಸಂಖ್ಯೆ

ರಿಲಯನ್ಸ್ ಜಿಯೋ ಕಳೆದ ಜೂನ್ ತಿಂಗಳಿನಲ್ಲಿ 82.6 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ ಎಂದೂ ಟ್ರಾಯ್ ದತ್ತಾಂಶ ಹೇಳಿದೆ. ಇದೇ ಅವಧಿಯಲ್ಲಿ ಹಳೆಯ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್ ಹಾಗೂ ವೋಡಾಫೋನ್ ಐಡಿಯಾ ಒಟ್ಟಾರೆ 41.75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.

ಜಿಯೋ 33.12 ಕೋಟಿ ಗ್ರಾಹಕರು

ಜಿಯೋ 33.12 ಕೋಟಿ ಗ್ರಾಹಕರು

ಈ ಮೂಲಕ ಒಟ್ಟು ಗ್ರಾಹಕರ ಪಟ್ಟಿಯಲ್ಲಿ ಜಿಯೋ 33.12 ಕೋಟಿ ಗ್ರಾಹಕರೊಡನೆ ಎರಡನೇ ಸ್ಥಾನಕ್ಕೆ ತಲುಪಿದ್ದು, 38.34 ಕೋಟಿ ಗ್ರಾಹಕರೊಡನೆ ವೋಡಾಫೋನ್ ಐಡಿಯಾ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್‌ಗೆ 32.03 ಕೋಟಿ ಗ್ರಾಹಕರಿದ್ದಾರೆ.

English summary
Reliance Jio has topped the 4G download speed chart and Vodafone the 4G upload one in July, according to the MySpeed of Trai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X