• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ 5ಜಿ, ರಿಲಯನ್ಸ್ ಜಿಯೋ- ಸ್ಯಾಮ್ ಸಂಗ್ ಗೆ ಪ್ರಶಸ್ತಿ

By Mahesh
|

ಬೆಂಗಳೂರು, ಮಾರ್ಚ್ 03: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ('ಜಿಯೋ') ಮತ್ತು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೊ.ಲಿ. ('ಸ್ಯಾಮ್ ಸಂಗ್'), ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ರಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಭಾರತಕ್ಕೆ 5ಜಿ ತಂತ್ರಜ್ಞಾನ ತರಲಿರುವ ಈ ಸಂಸ್ಥೆಗಳಿಗೆ ಜಾಗತಿಕ ಮೊಬೈಲ್ ಪ್ರಶಸ್ತಿಗಳು 2017ರಿಂದ 'ಹೊರಹೊಮ್ಮುತ್ತಿರುವ ಮಾರುಕಟ್ಟೆಗಳಲ್ಲಿ ಅತ್ಯುತ್ತಮ ಮೊಬೈಲ್ ನಾವೀನ್ಯತೆ' ವಿಭಾಗದ ಪ್ರಶಸ್ತಿ ಲಭಿಸಿದೆ.

ಭಾರತ ಡಿಜಿಟಲ್ ಅಂತರವನ್ನು ಮೀರಿ ದೇಶವನ್ನು ಡಿಜಿಟಲ್ ಆಗಿ ಸಶಕ್ತಗೊಂಡ ಸಮಾವಾಗಿ ರೂಪಾಂತರಗೊಳಿಸುವ ಜಿಯೋ ಮತ್ತು ಸ್ಯಾಮ್‍ ಸಂಗ್‍ ನ ನಿರಂತರ ಪ್ರಯತ್ನಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿಯೊಂದಿಗೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ದೊರೆತಿದೆ.

ಉಚಿತ ಧ್ವನಿ ಮತ್ತು ವಿಶ್ವದ ಕನಿಷ್ಠ ಡಾಟಾ ದರಗಳೊಂದಿಗೆ ಸಂವಹನ ಮತ್ತು ಮಾಹಿತಿಯ ಶಕ್ತಿಯನ್ನು ವಿಶ್ವದ ಅತಿದೊಡ್ಡ ಗ್ರೀನ್‍ ಫೀಲ್ಡ್ ಎಲ್‍ ಟಿಇ ನೆಟ್‍ವರ್ಕ್ ಅನ್ನು ಭಾರತದಲ್ಲಿ ನಿಯೋಜಿಸುವ ಮೂಲಕ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಾದ್ಯಂತ ತಲುಪಿಸುವತ್ತ ಈ ಎರಡು ಸಂಸ್ಥೆಗಳು ಗಮನ ಕೇಂದ್ರೀಕರಿಸಿವೆ.

ಇದರೊಂದಿಗೆ, ಜಿಯೋ, ಗ್ರಾಹಕ ಕೇಂದ್ರಿತ ಅನ್ವಯಿಸುವಿಕೆಗಳು ಹಾಗೂ ಟ್ಯಾರಿಫ್ ಗಳ ಮೂಲಕ ಡಿಜಿಟಲ್ ಜೀವನಕ್ಕೆ ಸುಲಭ ಪ್ರವೇಶವನ್ನು ಸಾಧ್ಯವಾಗಿಸುವತ್ತ ಗಮನಹರಿಸಿದೆ. ಇದರ ನಾವೀನ್ಯ ಆಫರ್ ಗಳಿಂದಾಗಿ, ಲಕ್ಷಾಂತರ ಭಾರತೀಯರು ಡಿಜಿಟಲ್ ಜೀವನಶೈಲಿಯನ್ನು ಅಪ್ಪಿಕೊಳ್ಳಲು ಸಾಧ್ಯವಾಗಿದೆ ಮತ್ತು ಜಿಯೋಗೆ ಬಿಡುಗಡೆಯಾದ 170 ದಿನಗಳೊಳಗೆ ದಾಖಲೆಯ 100 ಮಿಲಿಯನ್ ಚಂದಾದಾರರ ನೆಲೆಯನ್ನು ಕ್ಷಿಪ್ರವಾಗಿ ವಿಸ್ತರಿಸಲು ನೆರವಾಯಿತು.

ಜ್ಯೋತೀಂದ್ರ ಥಾಕರೆ, ಜಿಯೋ

ಜ್ಯೋತೀಂದ್ರ ಥಾಕರೆ, ಜಿಯೋ

ನೈಜ ಡಿಜಿಟಲ್ ಇಂಡಿಯಾವನ್ನು ಸೃಷ್ಟಿಸುವ ನಮ್ಮ ಪ್ರಯತ್ನದಲ್ಲಿನ ವಿಶ್ವಾಸಾರ್ಹ ಪಾಲುದಾರನಾಗಿರುವ ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ಸ್ ನೊಂದಿಗಿನ ಜಂಟಿ ಪ್ರಯತ್ನಕ್ಕಾಗಿ ನಾವು ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರುವುದು ನಮಗೆ ಖುಷಿ ತಂದಿದೆ. ನಮ್ಮ ಸೇವೆಗಳಲ್ಲಿ ಗ್ರಾಹಕ ಕೇಂದ್ರಿತ ಆಯ್ಕೆಗಳನ್ನು ಪರಿಚಯಿಸುವುದನ್ನು ಮುಂದುವರಿಸುವ ಮೂಲಕ ಮತ್ತು ತೀರಾ ಸುಲಭವಾದ ಪ್ರವೇಶಗಳ ಮೂಲಕ ಭಾರತದ ಡಿಜಿಟಲ್ ಅಂತರವನ್ನು ತಗ್ಗಿಸಲಿದೆ ಮತ್ತು ಪ್ರತಿಯೊಬ್ಬ ಭಾರತೀಯ ಡಿಜಿಟ್ ಜೀನವದ ಅನುಕೂಲ ಪಡೆಯುವುದು ಸಾಧ್ಯವಾಗಿಸಿದೆ

ಯಾಂಗ್‍ಕೀ ಕಿಮ್

ಯಾಂಗ್‍ಕೀ ಕಿಮ್

ಇಂದಿನ ಸಾಧನೆಯು ಒಂದು ಪ್ರಶಸ್ತಿಗಿಂತ ಹೆಚ್ಚು ಮಹತ್ವದ್ದಾಗಿದೆ, ಇದು ಭಾರತ ಮತ್ತು ಅದರ ಜನರಿಗೆ ನಾವು ತಂದಿರುವ ರೂಪಾಂತರದ ಸೂಚಕವಾಗಿದೆ. ಡಿಜಿಟಲ್ ಇಂಡಿಯಾದ ವಾಸ್ತಗೊಳಿಸುವಲ್ಲಿ ಜಿಯೋದ ವ್ಯೂಹಾತ್ಮಕ ಪಾಲುದಾರನಾಗಿರುವ ಸ್ಯಾಮ್‍ಸಂಗ್, ಜಾಗತಿಕ ದೂರಸಂಪರ್ಕ ಉದ್ಯಮದಲ್ಲಿ ಅಗ್ರಗಣ್ಯನಾಗುವತ್ತ ಹೆಜ್ಜೆಯಿಡುತ್ತಿರುವ ಭಾರತಕ್ಕೆ ಬೆಂಬಲಿಸಲು ಸಾಧ್ಯವಾಗಿರುವುದಕ್ಕೆ ಹೆಮ್ಮೆ ಪಡುತ್ತದೆ

ಪಾಲುದಾರನಾಗಿರುವ ಸ್ಯಾಮ್‍ಸಂಗ್

ಪಾಲುದಾರನಾಗಿರುವ ಸ್ಯಾಮ್‍ಸಂಗ್

ಜಿಯೋದ ವ್ಯೂಹಾತ್ಮಕ ಪಾಲುದಾರನಾಗಿರುವ ಸ್ಯಾಮ್‍ಸಂಗ್, ಭಾರತೀಯರಿಗೆ ತಮ್ಮ ಎಂಜಿನ್ ಆಗಿ ಡಾಟಾದೊಂದಿಗೆ ಧ್ವನಿ ಕರೆಗಳ ಸಹಿತ ವಿಶಿಷ್ಟ ಸೇವೆಗಳನ್ನು ಪಡೆಯುವ ಬುನಾದಿಯನ್ನು ಹಾಕಿಕೊಟ್ಟಿತು. ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ತನ್ನ ಬಳಕೆದಾರರಿಗೆ ಸ್ಯಾಮ್‍ಸಂಗ್ ವೋಲ್ಟೆ, ಗುಣಮಟ್ಟ ನಿಗಾ ಮತ್ತು ವಿಶ್ಲೇಷಣೆ (ವೋಮಾ) ಮತ್ತು ಕಾಗ್ನಿಟಿವ್ ಟ್ರಾಫಿಕ್ ಮಾನಿಟರಿಂಗ್ ಮತ್ತು ಉತ್ಕೃಷ್ಟ ಬಳಕೆದಾರ ಅನುಭವಕ್ಕಾಗಿ ಆಪ್ಟಿಮೈಝರ್ ನಂತಹ ವೃತ್ತಿಪರ ಸೊಲ್ಯೂಶನ್‍ಗಳನ್ನು ಒದಗಿಸಿದೆ.

5ಜಿ ತರಲಿರುವ ಜಿಯೋ

5ಜಿ ತರಲಿರುವ ಜಿಯೋ

ಜಿಯೋ ಹಾಗೂ ಸ್ಯಾಮ್‍ಸಂಗ್ ನಡುವಿನ ಸಂಬಂಧ 2012ರಿಂದ ಆರಂಭವಾಗಿದ್ದು, ಎರಡು ಕಂಪನಿಗಳು ಉಪಕರಣದಿಂದ ಸ್ಥಾಪನೆ ಮತ್ತು ನಿರ್ವಹಣಾ ಸೇವೆಗಳ ತನಕ ಸಂಪೂರ್ಣ ನೆಟ್‍ವರ್ಕ್ ಸ್ಕೋಪ್ ಒಳಗೊಂಡ ಟರ್ನ್ ಕೀ ಒಪ್ಪಂದಕ್ಕೆ ಸಹಿ ಹಾಕಿದವು.ಎಲ್‍ಟಿಇ-ಸುಧಾರಿತ ಪ್ರೊ ಮತ್ತು 5ಜಿಗಾಗಿ ಹೊಸ ಮಾದರಿಯನ್ನು ಸೃಷ್ಟಿಸಲು ಸ್ಯಾಮ್ ಸಂಗ್ ಶ್ರಮಿಸಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jio and Samsung Win “Best Mobile Innovation for Emerging Markets” at Global Mobile Awards 2017. Samsung recently announced its innovative "I&G (Infill & Growth) Project" for Reliance Jio Infocomm Ltd that will help expand both the current network capacity.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more