• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೈಮ್‌ 100 ಅತ್ಯಂತ ಪ್ರಭಾವಶಾಲಿ ಕಂಪೆನಿಗಳಲ್ಲಿ ಜಿಯೋ ಪ್ಲಾಟ್‌ಫಾರ್ಮ್

|
Google Oneindia Kannada News

ನವದೆಹಲಿ, ಏಪ್ರಿಲ್ 28: ಜಗತ್ತಿನಾದ್ಯಂತ ಅಸಾಧಾರಣ ಪ್ರಭಾವ ಬೀರುತ್ತಿರುವ ಅತ್ಯಂತ ಪ್ರಭಾವಶಾಲಿ ಕಂಪೆನಿಗಳ ಟೈಮ್100 ಪಟ್ಟಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ ಸ್ಥಾನ ಪಡೆದಿದೆ ಎಂದು ರಿಲಯನ್ಸ್ ಸಂಸ್ಥೆ ಪ್ರಕಟಿಸಿದೆ.

ಜಿಯೋ ಪ್ಲಾಟ್‌ಫಾರ್ಮ್ ಅನ್ನು ಭಾರತದಲ್ಲಿನ ಮುಂಚೂಣಿ ಡಿಜಿಟಲ್ ರೂಪಾಂತರಕ್ಕಾಗಿ ಇನ್ನೋವೇಟರ್ಸ್ ವಿಭಾಗದಲ್ಲಿ ಗುರುತಿಸಲಾಗಿದೆ. ಪರಿವರ್ತಕರ ವಿಭಾಗದಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಕಂಪೆನಿ ಎಂಬ ಹೆಗ್ಗಳಿಕೆಗೆ ಜಿಯೋ ಪ್ಲಾಟ್‌ಫಾರ್ಮ್ ಪಾತ್ರವಾಗಿದೆ. ಈ ವಿಭಾಗದಲ್ಲಿ ನೆಟ್‌ಫ್ಲಿಕ್ಸ್, ನಿಂಟೆಂಡೊ, ಮಾಡೆರ್ನಾ, ದಿ ಲೆಗೊ ಗ್ರೂಪ್, ಸ್ಪಾಟಿಫೈ ಸೇರಿದಂತೆ ವಿವಿಧ ಪ್ರಮುಖ ಜಾಗತಿಕ ಕಂಪೆನಿಗಳಿವೆ.

ಜಿಯೋ ಈಗ ವಿಶ್ವದ 5ನೇ ಅತ್ಯಂತ ಪ್ರಬಲ ಬ್ರ್ಯಾಂಡ್ಜಿಯೋ ಈಗ ವಿಶ್ವದ 5ನೇ ಅತ್ಯಂತ ಪ್ರಬಲ ಬ್ರ್ಯಾಂಡ್

ಮುಂಬೈ ಮೂಲದ ಸಂಘಟಿತ ಉದ್ಯಮ ರಿಲಯನ್ಸ್ ಇಂಡಸ್ಟ್ರೀಸ್, ಕಳೆದ ಕೆಲವು ವರ್ಷಗಳಿಂದ ಜಗತ್ತಿನ ಅತಿ ಕಡಿಮೆ ಡೇಟಾ ದರವನ್ನು (ತಿಂಗಳಿಗೆ 1 ಜಿಬಿ ಡೇಟಾಕ್ಕೆ ಐದು ಸೆಂಟ್ಸ್‌ಗಿಂತ ಕಡಿಮೆ) ವಿಧಿಸುವ ಜತೆಗೆ ಭಾರತದ ಬೃಹತ್ 4ಜಿ ನೆಟ್‌ವರ್ಕ್‌ಅನ್ನು ಸ್ಥಾಪಿಸಿದೆ ಎಂದು ಟೈಮ್100ನ ಅತ್ಯಂತ ಪ್ರಭಾವಶಾಲಿ ಕಂಪೆನಿಗಳ ಪಟ್ಟಿ ತಿಳಿಸಿದೆ.

ರಿಲಯನ್ಸ್ ಡಿಜಿಟಲ್ ಉದ್ಯಮದ ಹಿಡುವಳಿ ಕಂಪೆನಿಯಾಗಿರುವ ಜಿಯೋ ಪ್ಲಾಟ್‌ಫಾರ್ಮ್‌ನ 410 ಮಿಲಿಯನ್‌ಗೂ ಅಧಿಕ ಗ್ರಾಹಕರನ್ನು ತಲುಪಲು ಮುಂಚೂಣಿ ಹೂಡಿಕೆದಾರರು ಮುಂದಾಗುತ್ತಿದ್ದಾರೆ. ಅವರಲ್ಲಿ ವಾಟ್ಸಾಪ್ ಆಧಾರಿತ ಇ-ಕಾಮರ್ಸ್ ವೇದಿಕೆ ಸೃಷ್ಟಿಸಲು ಮುಂದಾಗಿರುವ ಫೇಸ್‌ಬುಕ್ ಮತ್ತು ಕಡಿಮೆ ವೆಚ್ಚದ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವ ಗೂಗಲ್ ಸೇರಿವೆ.

ತನ್ನ ಮೌಲ್ಯ ಮತ್ತು ತ್ವರಿತವಾಗಿ ಬೆಳೆಯುತ್ತಿರುವ ಬಳಕೆದಾರರ ಸಾಮರ್ಥ್ಯದ ಸಾಕ್ಷಿಯಾಗಿ ಜಿಯೋ ಕಳೆದ ವರ್ಷ 20 ಬಿಲಿಯನ್ ಡಾಲರ್ ಮೊತ್ತವನ್ನು ಬಂಡವಾಳವಾಗಿ ಸಂಗ್ರಹಿಸಿತ್ತು.

ನಾಗರಿಕರ ಜೀವನ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುವಲ್ಲಿ ಹಾಗೂ ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳಿಗೆ ಜಾಗತಿಕ ಸ್ಪರ್ಧಾತ್ಮಕತೆ ಸೃಷ್ಟಿಸುವಲ್ಲಿ ಜಿಯೋ ಪ್ಲಾಟ್‌ಫಾರ್ಮ್ ಟೋಟಲ್ ಡಿಜಿಟಲ್ ಸಲ್ಯೂಷನ್ಸ್ ಅನ್ನು ಸ್ಥಾಪಿಸುತ್ತಿದೆ ಎಂದು ಟೈಮ್100 ಅತ್ಯಂತ ಪ್ರಭಾವಶಾಲಿ ಕಂಪೆನಿಗಳ ಪಟ್ಟಿ ತಿಳಿಸಿದೆ.

English summary
Jio Platforms listed in Time magazine's 100 most influential companies in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X