ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋದಲ್ಲಿ ಒಟ್ಟಾರೆ 104,326.95 ಕೋಟಿ ರೂ. ಹೂಡಿಕೆ

|
Google Oneindia Kannada News

ಮುಂಬೈ, ಜೂನ್ 13: ಪ್ರಪಂಚದ ಅತಿದೊಡ್ಡ ಗ್ರಾಹಕ ಕೇಂದ್ರಿತ ಪ್ರೈವೇಟ್ ಈಕ್ವಿಟಿ ಸಂಸ್ಥೆಗಳಲ್ಲೊಂದಾದ ಎಲ್ ಕ್ಯಾಟರ್‌ಟನ್‌ನಿಂದ 1894.50 ಕೋಟಿ ರೂ.ಗಳ ಹೂಡಿಕೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಇಂದು ಘೋಷಿಸಿವೆ.

ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಎಲ್ ಕ್ಯಾಟರ್‌ಟನ್‌ನ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ 0.39% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.

ಜಿಯೋ ವೇದಿಕೆಯಲ್ಲಿ 4,546.80 ಕೋಟಿ ರೂ ಹೂಡಿಕೆ ಟಿಪಿಜಿಜಿಯೋ ವೇದಿಕೆಯಲ್ಲಿ 4,546.80 ಕೋಟಿ ರೂ ಹೂಡಿಕೆ ಟಿಪಿಜಿ

ಈ ಹೂಡಿಕೆಯೊಂದಿಗೆ, ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 104,326.95 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.

 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ

388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ.

ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

1989ರಲ್ಲಿ ಸ್ಥಾಪನೆಯಾದ ಎಲ್ ಕ್ಯಾಟರ್ಟನ್

1989ರಲ್ಲಿ ಸ್ಥಾಪನೆಯಾದ ಎಲ್ ಕ್ಯಾಟರ್ಟನ್

1989ರಲ್ಲಿ ಸ್ಥಾಪನೆಯಾದ ಎಲ್ ಕ್ಯಾಟರ್ಟನ್, ವಿಶ್ವದೆಲ್ಲೆಡೆಯ ಪ್ರಮುಖ ಗ್ರಾಹಕ-ಕೇಂದ್ರಿತ ಬ್ರಾಂಡ್‌ಗಳ ಮೆಚ್ಚಿನ ಹೂಡಿಕೆ ಪಾಲುದಾರ ಸಂಸ್ಥೆಯಾಗಿದೆ. ಕಾರ್ಯಾಚರಣೆಯ ಪರಿಣತಿಯನ್ನು ಬಳಸಿಕೊಳ್ಳುವ 30-ವರ್ಷಗಳ ದಾಖಲೆ, ವಲಯಗಳನ್ನು ಕುರಿತು ಅಗಾಧ ಒಳನೋಟಗಳು, ಜಾಗತಿಕ ಸಂಪನ್ಮೂಲಗಳ ಜಾಲ, ಹಾಗೂ ಎಲ್‌ವಿಎಂಹೆಚ್ ಮತ್ತು ಗ್ರೂಪ್ ಅರ್ನಾಲ್ಟ್ ಅವರೊಂದಿಗಿನ ವಿಶಿಷ್ಟ ಪಾಲುದಾರಿಕೆಯೊಂದಿಗೆ, ಪೆಲೋಟಾನ್, ವ್ರೂಮ್, ಕ್ಲಾಸ್‌ಪಾಸ್, ಓನ್‌ಡೇಸ್, ಫ್ಯಾಬ್‌ಇಂಡಿಯಾ ಮತ್ತಿತರ ಹಲವು ನವೀನ ಬ್ರಾಂಡ್‌ಗಳಲ್ಲಿ ಎಲ್ ಕ್ಯಾಟರ್ಟನ್ ಹೂಡಿಕೆ ಮಾಡಿದೆ ಹಾಗೂ ಬದಲಾಗುತ್ತಿರುವ ಗ್ರಾಹಕ ಪರಿಸ್ಥಿತಿಯಲ್ಲಿ ಅವುಗಳನ್ನು ಬೆಳೆಸಲು ನೆರವಾಗಿದೆ.

ರಿಲಯನ್ಸ್ ಜಿಯೋದಲ್ಲಿ 5,683.50 ಕೋಟಿ ರು. ಹೂಡಿಕೆ ಮಾಡಲಿರುವ ಎಡಿಐಎ(ADIA)ರಿಲಯನ್ಸ್ ಜಿಯೋದಲ್ಲಿ 5,683.50 ಕೋಟಿ ರು. ಹೂಡಿಕೆ ಮಾಡಲಿರುವ ಎಡಿಐಎ(ADIA)

ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಮಾತನಾಡಿ

ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಮಾತನಾಡಿ

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, "ಗ್ರಾಹಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಹಾಗೂ ಡಿಜಿಟಲ್ ಶಕ್ತಿಯ ಸಾಮರ್ಥ್ಯವನ್ನು ಭಾರತಕ್ಕೆ ಪರಿಚಯಿಸುವ ನಮ್ಮ ಪ್ರಯಾಣದಲ್ಲಿ ಪಾಲುದಾರರಾಗಿ ಎಲ್ ಕ್ಯಾಟರ್‌ಟನ್ ಅನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಗ್ರಾಹಕ-ಕೇಂದ್ರಿತ ವ್ಯವಹಾರಗಳನ್ನು ರೂಪಿಸುವಲ್ಲಿ ಎಲ್ ಕ್ಯಾಟರ್ಟನ್‌ನ ಅಮೂಲ್ಯ ಅನುಭವದ ಪ್ರಯೋಜನ ಪಡೆದುಕೊಳ್ಳುವುದನ್ನು ನಾನು ವಿಶೇಷವಾಗಿ ಎದುರು ನೋಡುತ್ತಿದ್ದೇನೆ, ಏಕೆಂದರೆ ಭಾರತವನ್ನು ಡಿಜಿಟಲ್ ನಾಯಕತ್ವದತ್ತ ಕೊಂಡೊಯ್ಯಲು ತಂತ್ರಜ್ಞಾನ ಮತ್ತು ಗ್ರಾಹಕ ಅನುಭವಗಳೆರಡೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ." ಎಂದು ಹೇಳಿದ್ದಾರೆ.

ಎಲ್ ಕ್ಯಾಟರ್‌ಟನ್‌ನ ಮೈಕೆಲ್ ಚು

ಎಲ್ ಕ್ಯಾಟರ್‌ಟನ್‌ನ ಮೈಕೆಲ್ ಚು

ಎಲ್ ಕ್ಯಾಟರ್‌ಟನ್‌ನ ಜಾಗತಿಕ ಸಹ-ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈಕೆಲ್ ಚು, "30ಕ್ಕೂ ಹೆಚ್ಚು ವರ್ಷಗಳ ನಮ್ಮ ಇತಿಹಾಸದಲ್ಲಿ, ಚಿಲ್ಲರೆ ವ್ಯಾಪಾರಿಗಳಿಂದ ಓಮ್ನಿ-ಚಾನೆಲ್ ಹಾಗೂ ಡಿಜಿಟಲಿ ನೇಟಿವ್ ಬ್ರಾಂಡ್‌ಗಳವರೆಗೆ ಎಲ್ಲ ಗ್ರಾಹಕ ವರ್ಗಗಳು ಮತ್ತು ಭೌಗೋಳಿಕತೆಗಳಾದ್ಯಂತ ಅನೇಕ ಪ್ರಮುಖ ಬ್ರಾಂಡ್‌ಗಳನ್ನು ನಿರ್ಮಿಸುವ ದಾಖಲೆಯನ್ನು ನಾವು ಸ್ಥಾಪಿಸಿದ್ದೇವೆ. ಉತ್ಪನ್ನ ಅಭಿವೃದ್ಧಿ, ವರ್ಧಿತ ಡಿಜಿಟಲ್ ಸಾಮರ್ಥ್ಯಗಳು ಮತ್ತು ಕಾರ್ಯತಂತ್ರದ ಸಹಭಾಗಿತ್ವಗಳ ಮೂಲಕ ಬೆಳವಣಿಗೆಯ ಉತ್ತೇಜನವನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಸಾಟಿಯಿಲ್ಲದ ಡಿಜಿಟಲ್ ಹಾಗೂ ತಾಂತ್ರಿಕ ಸಾಮರ್ಥ್ಯದ ಮೂಲಕ ದೇಶವನ್ನು ಪರಿವರ್ತಿಸುವ ಹಾಗೂ 1.3 ಶತಕೋಟಿ ಭಾರತೀಯರಿಗಾಗಿ ಡಿಜಿಟಲ್ ಸಮಾಜವನ್ನು ನಿರ್ಮಿಸುವ ತನ್ನ ದೃಷ್ಟಿ ಹಾಗೂ ಧ್ಯೇಯವನ್ನು ಕಾರ್ಯಗತಗೊಳಿಸಲು ಅನನ್ಯವಾದ ಸ್ಥಾನದಲ್ಲಿರುವ ಜಿಯೋ ಜೊತೆಗಿನ ಪಾಲುದಾರಿಕೆಗಾಗಿ ನಾವು ಎದುರು ನೋಡುತ್ತಿದ್ದೇವೆ." ಎಂದು ಹೇಳಿದ್ದಾರೆ.

English summary
RIL has sold over 22 per cent in Jio Platforms taking the total investment in the digital services platform to Rs 1.04 trillion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X