ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿಯೋ 4ಜಿ ಫೋನ್ ಗ್ರಾಹಕರ ಕೈ ಸೇರುವುದು ಯಾವಾಗ?
ಬೆಂಗಳೂರು, ಅಕ್ಟೋಬರ್ 05:ರಿಲಯನ್ಸ್ ಸಂಸ್ಥೆಯ ಜಿಯೋ ಫೋನ್ ಗಳ ಡೆಲಿವರಿ ಆರಂಭವಾಗಿದೆ. ಇನ್ನೂ ಮೊಬೈಲ್ ಫೋನ್ ತಲುಪಿಲ್ಲ ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದು, ದೀಪಾವಳಿ ಹಬ್ಬದೊಳಗೆ ಸುಮಾರು 60 ಲಕ್ಷಕ್ಕೂ ಅಧಿಕ ಹ್ಯಾಂಡ್ ಸೆಟ್ ವಿತರಣೆಯ ಭರವಸೆಯನ್ನು ರಿಲಯನ್ಸ್ ನೀಡಿದೆ.
ಅಂಬಾನಿಯ ಪುಕ್ಶೇಟಿ ಫೋನಿನಲ್ಲಿ ವಾಟ್ಸಾಪ್ ಇದೆಯಾ?
ದೇಶದ ಗ್ರಾಮೀಣ ಹಾಗೂ ಎರಡನೇ ಸ್ತರದ ನಗರಗಳಿಗೆ ಮೊದಲಿಗೆ ಹ್ಯಾಂಡ್ ಸೆಟ್ ವಿತರಿಸಲಾಗುವುದು, ನಂತರ ನಗರ ಪ್ರದೇಶಗಳ ಗ್ರಾಹಕರ ಕೈಗೆ ಮೊಬೈಲ್ ಸಿಗಲಿದೆ. 4ಜಿ ಆಧಾರಿತ ಕಡಿಮೆ ವೆಚ್ಚದ ಈ ಮೊಬೈಲ್ ಫೋನ್ ಗೆ ಭಾರಿ ಬೇಡಿಕೆ ಬಂದಿದೆ ಎಂದು ಪಿಟಿಐ ವರದಿ ಮಾಡಿದೆ.
0 ರೂ.ಗೆ ಮೊಬೈಲ್, ಮುಖೇಶ್ ಅಂಬಾನಿ ಹೊಸ ಕಮಾಲ್!
ದೀಪಾವಳಿ ಹಬ್ಬದ ವೇಳೆಗೆ ಜಿಯೋ ಫೋನ್ ಗಳು ಗ್ರಾಮೀಣ ಭಾರತದಲ್ಲಿ ರಿಂಗಣಿಸಲಿವೆ. ಈ ವರ್ಷ ಅಕ್ಟೋಬರ್ 19ರಂದು ಹಬ್ಬ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬದ ಸಂತಸವನ್ನು ಜಿಯೋ ಫೋನ್ ಹೆಚ್ಚಿಸುವುದೇ ಕಾದು ನೋಡಬೇಕಿದೆ.