ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕ್ರೀನ್ಸ್ ಜೊತೆ ಜಿಯೋ ಒಪ್ಪಂದ, ಅತಿದೊಡ್ಡ ಡಿಜಿಟಲ್ ವೇದಿಕೆ

By Mahesh
|
Google Oneindia Kannada News

ಮುಂಬೈ, ಮೇ 20: ಜಗತ್ತಿನಾದ್ಯಂತ ಪ್ರಮುಖ ಪ್ರಸರಣ ಸಂಸ್ಥೆಗಳು ಮನರಂಜನೆ ಆಧರಿತ ಇಂಟರಾಕ್ಟಿವಿಟಿಗೆ ಬಳಸುವ ಸದೃಢ ವೇದಿಕೆ ಸ್ಕ್ರೀನ್ಸ್ ಜೊತೆ ಅನನ್ಯ ಪಾಲುದಾರಿಕೆಯನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ('ಜಿಯೋ') ಇತ್ತೀಚೆಗೆ ಘೋಷಿಸಿದೆ.

ಸದ್ಯ 65 ಮಿಲಿಯನ್‌ಗೂ ಹೆಚ್ಚು ಸಂಖ್ಯೆಯ ಬಳಕೆದಾರರನ್ನು ಹೊಂದಿರುವ 'ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್', ಕೆಬಿಸಿ ಕಾರ್ಯಕ್ರಮವನ್ನು ಮನೆಮನೆಗೆ ತಲುಪಿಸಿ, ಸಾಮಾನ್ಯ ಮನುಷ್ಯನಿಗೂ ನಿಲುಕುವಂತೆ ಮಾಡಿದ 'ಜಿಯೋ ಕೌನ್ ಬನೇಗಾ ಕರೋಡ್‌ಪತಿ ಪ್ಲೇ ಅಲಾಂಗ್' ಮುಂತಾದ ಆಟಗಳಿಂದ ಹೆಸರುಮಾಡಿರುವ ಪ್ರಸ್ತುತ ಗೇಮಿಫಿಕೇಶನ್ ವೇದಿಕೆಯನ್ನು ಈ ಪಾಲುದಾರಿಕೆ ಇನ್ನಷ್ಟು ಸದೃಢಗೊಳಿಸಲಿದೆ.

ಆಪಲ್ ವಾಚ್ ಸೀರಿಸ್ 3 ನಲ್ಲಿ ಜಿಯೋ ನೆಟ್ವರ್ಕ್ಆಪಲ್ ವಾಚ್ ಸೀರಿಸ್ 3 ನಲ್ಲಿ ಜಿಯೋ ನೆಟ್ವರ್ಕ್

ಇದು ಕಳೆದ ಕೆಲ ದಿನಗಳಲ್ಲಿ ಜಿಯೋ ಪರಿಚಯಿಸುತ್ತಿರುವ ಇಂತಹ ಎರಡನೇ ಬ್ರಾಂಡ್-ಎಂಗೇಜ್‌ಮೆಂಟ್ ವೇದಿಕೆಯಾಗಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಐ) ಆಧರಿತ ಪ್ರಪಂಚದ ಮೊತ್ತಮೊದಲ ಬ್ರಾಂಡ್ ಎಂಗೇಜ್‌ಮೆಂಟ್ ವೇದಿಕೆ ಜಿಯೋಇಂಟರಾಕ್ಟ್ ಅನ್ನು ಜಿಯೋ ಕಳೆದ ವಾರವಷ್ಟೇ ಪರಿಚಯಿಸಿತ್ತು.

Jio Partners With Screenz to Enable Digital Interactivity For Broadcasters

ಜಿಯೋ ಸ್ಕ್ರೀನ್ಸ್ ವೇದಿಕೆಯ ವೈಶಿಷ್ಟ್ಯಗಳು:

1. ಟೀವಿ ಕಾರ್ಯಕ್ರಮದ ನಡುವೆ ರಸಪ್ರಶ್ನೆ, ಅಭಿಪ್ರಾಯ ಸಂಗ್ರಹಣೆ, ಮತದಾನ ಮೊದಲಾದ ಮಾರ್ಗಗಳ ಮೂಲಕ ಪ್ರಸರಣ ಸಂಸ್ಥೆಗಳು ಹಾಗೂ ಗ್ರಾಹಕರ ನಡುವೆ ತತ್‌ಕ್ಷಣದ ದ್ವಿಮುಖ ಸಂವಹನ ಏರ್ಪಡಿಸಲು ಜಿಯೋ ಸ್ಕ್ರೀನ್ಸ್ ವೇದಿಕೆ ನೆರವಾಗುತ್ತದೆ.

ಪ್ರಥಮ AI ಆಧಾರಿತ ವಿಡಿಯೋ ವೇದಿಕೆ ಪರಿಚಯಿಸಿದ ಜಿಯೋಪ್ರಥಮ AI ಆಧಾರಿತ ವಿಡಿಯೋ ವೇದಿಕೆ ಪರಿಚಯಿಸಿದ ಜಿಯೋ

2. ಇಂಟರಾಕ್ಟಿವ್ ಎಂಗೇಜ್‌ಮೆಂಟ್‌ಗಳನ್ನು ವಿನ್ಯಾಸಗೊಳಿಸಿ, ರಚಿಸಿ, ಪ್ರಕಟಿಸಲು ನೆರವಾಗುವ ಸುಲಭ ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಸಿಎಂಎಸ್) ಅನ್ನು ಜಿಯೋ ಸ್ಕ್ರೀನ್ಸ್ ಒದಗಿಸುತ್ತದೆ.

3. ಆಂಡ್ರಾಯ್ಡ್, ಐಓಎಸ್ ಹಾಗೂ ಜಿಯೋ ಕಾಯ್-ಓಎಸ್ ಬೆಂಬಲವಿರುವ ಎಸ್‌ಡಿಕೆ ಮೂಲಕ ಈ ಸೌಲಭ್ಯವನ್ನು ಯಾವುದೇ ಡಿಜಿಟಲ್ ಆಪ್‌ನಲ್ಲಿ ಸಕ್ರಿಯಗೊಳಿಸಬಹುದಾಗಿದೆ.

4. ಗೂಗಲ್, ಫೇಸ್‌ಬುಕ್, ಟ್ವಿಟರ್ ಮತ್ತಿತರ ಅನೇಕ ಸಮಾಜ ಜಾಲಗಳನ್ನು ಜಿಯೋ ಸ್ಕ್ರೀನ್ಸ್ ಬೆಂಬಲಿಸುತ್ತದೆ.

5. ನಿರಂತರ ಕಲಿಕೆ ಹಾಗೂ ಹಿಮ್ಮಾಹಿತಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಅದು ದತ್ತಾಂಶ ವರದಿಗಾರಿಕೆಯನ್ನು ಬೆಂಬಲಿಸುತ್ತದೆ. ಪ್ರತಿ ಗ್ರಾಹಕರಿಗೂ ವಿಶಿಷ್ಟ ಪ್ರೊಫೈಲ್ ರೂಪಿಸುವ ಮೂಲಕ ಅದು ನಿರ್ದಿಷ್ಟ ಬಳಕೆದಾರರನ್ನು ಮಾತ್ರ ಉದ್ದೇಶಿಸಿದ (ಟಾರ್ಗೆಟೆಡ್) ಜಾಹೀರಾತುಗಳನ್ನೂ ಸಾಧ್ಯವಾಗಿಸುತ್ತದೆ.

English summary
Reliance Jio Infocomm Ltd, Jio, today announced an exclusive partnership for the Indian market with Screenz, a platform for “entertainment-based interactivity” used by world’s top broadcasters and format owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X