ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಮನಿ ಅಪ್ಲಿಕೇಷನ್ ಶೀಘ್ರದಲ್ಲೇ ಚಾಲನೆಗೆ ಬರಲಿದೆ!

|
Google Oneindia Kannada News

ಬೆಂಗಳೂರು, ನವೆಂಬರ್ 24: ರಿಲಯನ್ಸ್ ಜಿಯೋ ತನ್ನ 20 ಕೋಟಿ ಗ್ರಾಹಕರಿಗೆ ಶೀಘ್ರವೇ ಹೊಸ ಉಡುಗೊರೆ ನೀಡಲು ಮುಂದಾಗಿದೆ. ರಿಲಯನ್ಸ್ ಜಿಯೋ, ಜಿಯೋ ಮನಿ ಆಪ್ ಶುರು ಮಾಡುತ್ತಿದೆ.

ಜಿಯೋ ಪೇಮೆಂಟ್ಸ್ ಬ್ಯಾಂಕ್ ನಿರ್ವಹಿಸುತ್ತಿರುವ ಪೂರ್ವಪಾವತಿ (ಪ್ರೀಪೇಯ್ಡ್ ಪೇಮೆಂಟ್ ಇನ್ಸ್‌ಟ್ರುಮೆಂಟ್, ಪಿಪಿಐ) ವ್ಯಾಲೆಟ್ ಆದ ಜಿಯೋಮನಿ ಜೊತೆಗೆ ಸೊಡೆಕ್ಸೋ ಮೀಲ್ ಕಾರ್ಡ್‌ಗಳನ್ನು ಸಹಭಾಗಿತ್ವ ಹೊಂದಿರುವುದನ್ನು ಇಲ್ಲಿ ಸ್ಮರಿಸಬಹುದು

ಮೊಬೈಲ್ ವ್ಯಾಲೆಟ್ ಸೇವೆಗಾಗಿ ಜಿಯೋ - ಸೊಡೆಕ್ಸೋ ಹೊಂದಾಣಿಕೆ ಮೊಬೈಲ್ ವ್ಯಾಲೆಟ್ ಸೇವೆಗಾಗಿ ಜಿಯೋ - ಸೊಡೆಕ್ಸೋ ಹೊಂದಾಣಿಕೆ

ಈಗ ಪೂರ್ಣಪ್ರಮಾಣ ಯುಪಿಐ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ನೀಡಲು ಜಿಯೋ ಮುಂದಾಗಿದ್ದು, ಡಿಜಿಟಲ್ ವ್ಯಾಲೆಟ್-ಜಿಯೋ ಮನಿ ಆಪ್ ಮೂಲಕ ಹಲವು ಸಾಧ್ಯತೆಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.

Jio Money To Soon Take on PhonePe and Google Pay with UPI-powered Payments Facility Integration

ಕೆಲವೇ ದಿನಗಳಲ್ಲಿ ಜಿಯೋ ಬಳಕೆದಾರರು ಹಣ ವರ್ಗಾವಣೆ ಮಾಡಬಹುದಾಗಿದೆ. ಇದಕ್ಕಾಗಿ ರಿಲಯನ್ಸ್ ಜಿಯೋ, ಜಿಯೋ ಮನಿ ಆಪ್ ಶುರು ಮಾಡುತ್ತಿದೆ.

ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ! ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!

2019 ರಲ್ಲಿ ಜಿಯೋ ಮನಿಯನ್ನು ಕಂಪನಿ ಯುಪಿಐ ಜೊತೆ ಒಂದುಗೂಡಿಸಲಿದೆ. ಲಭ್ಯವಾದ ವರದಿ ಪ್ರಕಾರ, ಜಿಯೋ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕ್ ಗಳ ಜೊತೆ ಜಿಯೋ ಮೊದಲ ಸುತ್ತಿನ ಮಾತುಕತೆ ನಡೆಸಿದೆಯಂತೆ. ಜಿಯೋ ಮನಿ ಆಪ್ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಪಾವತಿ ಬ್ಯಾಂಕ್ ಆರಂಭಿಸುವುದು ಖಚಿತವಾಗಿದೆ.

ವರದಿ ಪ್ರಕಾರ, ಯುಪಿಐ ಮೂಲಕ ಅಕ್ಟೋಬರ್ 2018 ರಲ್ಲಿ 74,978,27 ರೂಪಾಯಿ ( 482.36 ಮಿಲಿಯನ್) ವ್ಯವಹಾರ ನಡೆದಿದೆ. ಹೀಗಾಗಿ, ಈ ಡಿಜಿಟಲ್ ಪಾವತಿ ವ್ಯವಸ್ಥೆ ಜನಪ್ರಿಯಗೊಳ್ಳುತ್ತಿದ್ದು, ಪೇಟಿಎಂ, ಫೋನ್ ಪೇ, ಗೂಗಲ್ ಪೇ ಪ್ರಮುಖ ವಿಧಾನಗಳಾಗಿವೆ. ವಾಟ್ಸಾಪ್ ಕೂಡಾ ಯುಪಿಐ ಆಧಾರ ಮೇಲೆ ಮೊಬೈಲ್ ವ್ಯಾಲೆಟ್ ಆರಂಭಿಸಲು ಮುಂದಾಗಿದೆ.

English summary
Reliance Jio is reportedly in talks with banks like SBI, Axis Bank, ICICI Bank to integrate UPI payments in its Jio Money app. The company has a large suite of apps including Jio Cinema, Jio TV, Jio Music, Jio Money, where the latter is a digital wallet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X