ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ AI ಆಧಾರಿತ ವಿಡಿಯೋ ವೇದಿಕೆ ಪರಿಚಯಿಸಿದ ಜಿಯೋ

By Mahesh
|
Google Oneindia Kannada News

ಮುಂಬೈ, ಮೇ 05: ಕೃತಕ ಬುದ್ಧಿಮತ್ತೆ (ಎಐ) ಆಧರಿತ ಪ್ರಪಂಚದ ಪ್ರಥಮ ಬ್ರಾಂಡ್-ಎಂಗೇಜ್‌ಮೆಂಟ್ ವೀಡಿಯೋ ವೇದಿಕೆಯಾದ 'ಜಿಯೋಇಂಟರಾಕ್ಟ್' ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ('ಜಿಯೋ') ಇಂದು ಘೋಷಿಸಿದೆ.

ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ಹಲವು ವಿಶಿಷ್ಟ ಸೇವೆಗಳನ್ನು ಈ ವೇದಿಕೆಯ ಮೂಲಕ ಒದಗಿಸಲಾಗುವುದು. ಈ ವೇದಿಕೆಯೊಡನೆ ಕೈಜೋಡಿಸಿರುವವರ ಪೈಕಿ ಮೊದಲಿಗರಾದ ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಬಚ್ಚನ್ ಈ ಮೂಲಕ ತಮ್ಮ ಮುಂಬರುವ ಚಿತ್ರ '102 ನಾಟ್‌ ಔಟ್'ದ ಪ್ರಚಾರವನ್ನು ಅತ್ಯಂತ ವಿನೂತನ ರೀತಿಯಲ್ಲಿ ಕೈಗೊಳ್ಳಲಿದ್ದಾರೆ.

ಜಿಯೋ - ಸೊಡೆಕ್ಸೋ ಹೊಂದಾಣಿಕೆಜಿಯೋ - ಸೊಡೆಕ್ಸೋ ಹೊಂದಾಣಿಕೆ

186 ಮಿಲಿಯನ್ ಜಿಯೋ ಗ್ರಾಹಕರು ಹಾಗೂ ಇತರ 150 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ತಲುಪಬಲ್ಲ ಜಿಯೋಇಂಟರಾಕ್ಟ್, ಚಲನಚಿತ್ರ ಪ್ರಚಾರ ಹಾಗೂ ಬ್ರಾಂಡ್-ಎಂಗೇಜ್‌ಮೆಂಟ್‌ ಚಟುವಟಿಕೆಗಳ ಅತಿದೊಡ್ಡ ವೇದಿಕೆಯಾಗಿ ಬೆಳೆಯುವ ಗುರಿ ಹೊಂದಿದೆ.

ಮುಂದಿನ ಕೆಲ ವಾರಗಳಲ್ಲಿ ವೀಡಿಯೋ ಕಾಲ್ ಸೆಂಟರ್, ವೀಡಿಯೋ ಕೆಟಲಾಗ್ ಹಾಗೂ ವರ್ಚುಯಲ್ ಶೋರೂಮ್‌ನಂತಹ ಸೇವೆಗಳನ್ನು ಈ ವೇದಿಕೆಯಲ್ಲಿ ಪರಿಚಯಿಸಲಿರುವ ಜಿಯೋ, ಗ್ರಾಹಕರಿಗೆ ವಿನೂತನ ಅನುಭವ ಕಟ್ಟಿಕೊಡಲಿದೆ.

ಜಿಯೋಫೈ ವಿನಿಮಯ ಆಫರ್ : ವಿಶೇಷ ಕ್ಯಾಶ್‍ಬ್ಯಾಕ್ ಗಳಿಸಿಜಿಯೋಫೈ ವಿನಿಮಯ ಆಫರ್ : ವಿಶೇಷ ಕ್ಯಾಶ್‍ಬ್ಯಾಕ್ ಗಳಿಸಿ

ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಐ) ಈ ಬಗೆಯಲ್ಲಿ ಬಳಸುತ್ತಿರುವುದು ಪ್ರಪಂಚದಲ್ಲೇ ಇದು ಮೊದಲ ಸಲವಾಗಿದ್ದು ಈ ಪ್ರಯತ್ನ ಬ್ರಾಂಡ್‌ಗಳು ಹಾಗೂ ಗ್ರಾಹಕರ ನಡುವಿನ ಒಡನಾಟಕ್ಕೆ ಹೊಸ ಆಯಾಮ ನೀಡಲಿದೆ.

ಜಿಯೋಇಂಟರಾಕ್ಟ್‌ನ ಪ್ರಥಮ ಸೇವೆ - ಲೈವ್ ವೀಡಿಯೋ ಕಾಲ್

ಜಿಯೋಇಂಟರಾಕ್ಟ್‌ನ ಪ್ರಥಮ ಸೇವೆ - ಲೈವ್ ವೀಡಿಯೋ ಕಾಲ್

ಜಿಯೋಇಂಟರಾಕ್ಟ್ ನ ಪ್ರಥಮ ಕೊಡುಗೆಯಾದ 'ಲೈವ್ ವೀಡಿಯೋ ಕಾಲ್' ಸೇವೆ ಬಳಸಿ ಜಿಯೋ ಗ್ರಾಹಕರು ಹಾಗೂ ಇತರ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೆಚ್ಚಿನ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್‌ರಿಗೆ ನೇರ ವೀಡಿಯೋ ಕಾಲ್ ಮಾಡಬಹುದು. ಈ ಸೌಲಭ್ಯ ಮೇ 4, 2018ರಿಂದ ಲಭ್ಯವಿರಲಿದೆ.

ಈ ಮೂಲಕ ಅಮಿತಾಭ್ ಹೊಸ ಚಿತ್ರ '102 ನಾಟ್ ಔಟ್' ಬಗ್ಗೆ ಪ್ರಶ್ನೆಗಳನ್ನು ಕೇಳುವುದಷ್ಟೇ ಅಲ್ಲದೆ ಬುಕ್‌ ಮೈ ಶೋ ಸಹಯೋಗದಲ್ಲಿ ಸಿನಿಮಾ ಟಿಕೇಟುಗಳನ್ನೂ ಕಾಯ್ದಿರಿಸಬಹುದಾಗಿದೆ.

ಜಿಯೋ ಇಂಟರಾಕ್ಟ್ ಬಳಸುವುದು ಹೇಗೆ?

ಜಿಯೋ ಇಂಟರಾಕ್ಟ್ ಬಳಸುವುದು ಹೇಗೆ?

ಜಿಯೋ ಇಂಟರಾಕ್ಟ್ ಅನುಭವ ಪಡೆದುಕೊಳ್ಳಲು,
1. ಮೈಜಿಯೋ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ
2. ಆಪ್ ತೆರೆದು ಜಿಯೋಇಂಟರಾಕ್ಟ್ ಐಕನ್ ಮೇಲೆ ಕ್ಲಿಕ್ ಮಾಡಿ
3. ವೀಡಿಯೋ ಕಾಲ್ ಪ್ರಾರಂಭಿಸಿ ಅಮಿತಾಭ್ ಬಚ್ಚನ್‌ರೊಡನೆ ಮಾತನಾಡಿ
4. 'ಶೇರ್' ಆಯ್ಕೆ ಬಳಸಿ ವೀಡಿಯೋ ಕಾಲ್ ಅನುಭವವನ್ನು ಮನೆಯವರು ಹಾಗೂ ಮಿತ್ರರೊಡನೆ ಹಂಚಿಕೊಳ್ಳುವುದೂ ಸಾಧ್ಯವಿದೆ.
ವಿಶಿಷ್ಟ ಹಾಗೂ ವಿನೂತನವಾದ ಈ ಸೇವೆ ಶಕ್ತಿಶಾಲಿಯಾದ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯ ಮೂಲಕ ಬಳಕೆದಾರರ ಪ್ರಶ್ನೆಗಳನ್ನು ಕೇಳಿಸಿಕೊಂಡು ಅವರಿಗೆ ಸಮರ್ಪಕ ಉತ್ತರಗಳನ್ನು ನೀಡುತ್ತದೆ.

ಸದೃಢ ಮೊಬೈಲ್ ವೀಡಿಯೋ ಜಾಲ

ಸದೃಢ ಮೊಬೈಲ್ ವೀಡಿಯೋ ಜಾಲ

ಅಷ್ಟೇ ಅಲ್ಲದೆ, ಇದರಲ್ಲಿರುವ ಸ್ವಯಂ ಕಲಿಕೆಯ (ಆಟೋ-ಲರ್ನಿಂಗ್) ವ್ಯವಸ್ಥೆ ತಾನು ನೀಡುವ ಉತ್ತರಗಳ ನಿಖರತೆಯನ್ನು ಉತ್ತಮಪಡಿಸಿಕೊಳ್ಳಲು ನೆರವಾಗಲಿದೆ. ಜಿಯೋನ ಸದೃಢ ಮೊಬೈಲ್ ವೀಡಿಯೋ ಜಾಲ ಹಾಗೂ 186 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕ ಬಳಗವನ್ನು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸ್ವಯಂಕಲಿಕೆಯಂತಹ (ಮಶೀನ್ ಲರ್ನಿಂಗ್) ಹೊಸ ತಂತ್ರಜ್ಞಾನಗಳೊಡನೆ ಪರಿಣಾಮಕಾರಿಯಾಗಿ ಬಳಸುವ ಮೂಲಕ ಜಿಯೋಇಂಟರಾಕ್ಟ್ ಉದ್ದಿಮೆಗಳಿಗಾಗಿ ಬ್ರಾಂಡ್-ಎಂಗೇಜ್‌ಮೆಂಟ್‌ನ ವಿಶಿಷ್ಟ ಮಾರ್ಗವೊಂದನ್ನು ಒದಗಿಸಿದೆ.

ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್

ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್

VCBaaS (ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್) ಎಂದು ಗುರುತಿಸಲಾಗಿರುವ ಜಿಯೋಇಂಟರಾಕ್ಟ್ ವೇದಿಕೆಯು ಕೃತಕ ಬುದ್ಧಿಮತ್ತೆ ಹಾಗೂ ವೀಡಿಯೋ ಕಾಲ್ ತಂತ್ರಜ್ಞಾನಗಳನ್ನು ಎಲ್ಲರಿಗೂ ಸರಳವಾಗಿ ತಲುಪಿಸುವ ಮೂಲಕ ಪರಿಣಾಮಕಾರಿ ಬ್ರಾಂಡ್-ಎಂಗೇಜ್‌ಮೆಂಟ್‌‌ ಚಟುವಟಿಕೆಗಳನ್ನು ಸಾಧ್ಯವಾಗಿಸಲಿದೆ. ಉದ್ದಿಮೆಗಳು ಹಾಗೂ ಗ್ರಾಹಕರ ನಡುವಿನ ಸಂವಹನದಲ್ಲಿ (B2C) ಈ ತಂತ್ರಜ್ಞಾನ ದೊಡ್ಡಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವ ನಿರೀಕ್ಷೆಯಿದೆ. ಈ ವೇದಿಕೆಯನ್ನು ಬಳಸಿ ವರ್ಚುಯಲ್ ಶೋರೂಮ್, ಉತ್ಪನ್ನಗಳ ಪ್ರಾತ್ಯಕ್ಷಿಕೆ, ಇ-ಕಾಮರ್ಸ್ ಆರ್ಡರಿಂಗ್ ಕಾರ್ಟ್‌ನಂತಹ ಅನ್ವಯಗಳನ್ನು ರೂಪಿಸುವ ಹೊಸ ಅವಕಾಶವೂ ತಂತ್ರಜ್ಞರಿಗೆ ದೊರಕಲಿದೆ.

English summary
Reliance Jio Infocomm Ltd. (“Jio”) today announced the launch of the world’s first Artificial Intelligence (AI) based brand engagement platform – JioInteract.The first of many services to be launched on this platform is the Live Video Call that features India’s favourite celebrities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X