ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಉಡಾನ್: ಜಿಯೋ ಪಾಠಶಾಲೆಯಲ್ಲಿ 10 ಭಾಷೆಯಲ್ಲಿ ಕಲಿಕೆ

|
Google Oneindia Kannada News

ಮುಂಬೈ, ಜುಲೈ 04: ಜಿಯೋ ಭಾರತಕ್ಕಾಗಿ ಹೊಸ ಡಿಜಿಟಲ್ ಸಾಕ್ಷರತೆ ಉಪಕ್ರಮವನ್ನು ಘೋಷಿಸಿದೆ. 'ಡಿಜಿಟಲ್ ಉಡಾನ್' ಎಂಬ ಹೆಸರಿನ ಈ ಉಪಕ್ರಮವು, ಮೊದಲ ಬಾರಿ ಅಂತರಜಾಲ ಬಳಸುವವರಿಗೆ ಡಿಜಿಟಲ್ ಸಾಕ್ಷರತೆ ಹಾಗೂ ಅಂತರಜಾಲದ ತಿಳಿವಳಿಕೆಯೊಡನೆ ನೆರವು ನೀಡಲಿದೆ. 300 ಮಿಲಿಯನ್‌ಗಿಂತ ಹೆಚ್ಚಿನ ಬಳಕೆದಾರರು ಜಿಯೋ ನೆರವಿನಿಂದ ಡಿಜಿಟಲ್ ಅಲೆಯ ಮೇಲೆ ಪ್ರಯಾಣಿಸುತ್ತಿದ್ದು, ಅದರಲ್ಲಿ ಬಹುಮಂದಿ ಅಂತರಜಾಲವನ್ನು ಮೊದಲ ಬಾರಿಗೆ ಬಳಸುತ್ತಿದ್ದಾರೆ.

ಡಿಜಿಟಲ್ ಉಡಾನ್ ಉಪಕ್ರಮದ ಅಡಿಯಲ್ಲಿ, ಜಿಯೋ ಪ್ರತಿ ಶನಿವಾರ ತನ್ನ ಬಳಕೆದಾರರಿಗೆ ಮಾಹಿತಿ ನೀಡಲಿದ್ದು ಜಿಯೋಫೋನ್ ವೈಶಿಷ್ಟ್ಯಗಳು, ವಿವಿಧ ಆಪ್‌ಗಳ ಬಳಕೆ, ಅಂತರಜಾಲ ಸುರಕ್ಷತೆ, ಬಂಧುಮಿತ್ರರನ್ನು ಸುಲಭ ಹಾಗೂ ಸುರಕ್ಷಿತವಾಗಿ ಸಂಪರ್ಕಿಸಲು ಜಿಯೋಫೋನ್‌ನಲ್ಲಿ ಫೇಸ್‌ಬುಕ್ ಬಳಕೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ.

ಜಿಯೋ ಗ್ರಾಹಕರಿಗೆ ಬಂಪರ್ : ವಿಶ್ವಕಪ್‌ನ ಪ್ರತಿ ಪಂದ್ಯ ಲೈವ್ ನೋಡಿ ಜಿಯೋ ಗ್ರಾಹಕರಿಗೆ ಬಂಪರ್ : ವಿಶ್ವಕಪ್‌ನ ಪ್ರತಿ ಪಂದ್ಯ ಲೈವ್ ನೋಡಿ

10 ಪ್ರಾದೇಶಿಕ ಭಾಷೆಗಳಲ್ಲಿ ಆಡಿಯೋ-ವಿಷುಯಲ್ ತರಬೇತಿಯ ಮೂಲಕ ಇದನ್ನು ಸಾಧ್ಯವಾಗಿಸಲಾಗುವುದು. ಡಿಜಿಟಲ್ ಉಡಾನ್‌ಗಾಗಿ ತಯಾರಿಸಲಾದ ಘಟಕಗಳು ಈ ನಗರ ಹಾಗೂ ಪ್ರದೇಶಗಳ ಜನತೆಗೆ ಉಪಯುಕ್ತವಾಗಿರುವಂತೆ ನೋಡಿಕೊಳ್ಳಲು ಜಿಯೋ ಫೇಸ್‌ಬುಕ್ ಜೊತೆಯಲ್ಲಿ ಕೆಲಸಮಾಡಿದ್ದು ತರಬೇತುದಾರರ ತರಬೇತಿ (ಟ್ರೈನ್ ದ ಟ್ರೈನರ್) ಕಾರ್ಯಕ್ರಮಗಳು, ತರಬೇತಿ ವೀಡಿಯೋಗಳು ಹಾಗೂ ಮಾಹಿತಿ ಪುಸ್ತಿಕೆಗಳನ್ನೂ ಒದಗಿಸಲಿದೆ.

Jio launches Digital Literacy Program Ditigal Udaan

ಪ್ರಾರಂಭದಲ್ಲಿ, ಈ ಕಾರ್ಯಕ್ರಮವನ್ನು 13 ರಾಜ್ಯಗಳ ಸುಮಾರು 200 ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಉಪಕ್ರಮವನ್ನು ಶೀಘ್ರದಲ್ಲೇ 7,000 ಸ್ಥಳಗಳಿಗೆ ವಿಸ್ತರಿಸಲಾಗುವ ನಿರೀಕ್ಷೆಯಿದ್ದು, ಜಿಯೋ‌ಫೋನ್‌ನ ಹಲವು ಮಿಲಿಯನ್ ಬಳಕೆದಾರರು ಹಾಗೂ ಮೊದಲ ಬಾರಿ ಅಂತರಜಾಲ ಬಳಸುತ್ತಿರುವ ಇತರರಿಗೂ ನೆರವಾಗಲಿದೆ.

"ಭಾರತೀಯ ಗ್ರಾಹಕರ ಡಿಜಿಟಲ್ ಜೀವನಶೈಲಿ ಅನುಭವವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಜಾಗತಿಕ ಸಹಭಾಗಿಗಳೊಡನೆ ಕೆಲಸಮಾಡಲು ಜಿಯೋ ಯಾವಾಗಲೂ ಸಿದ್ಧವಾಗಿರುತ್ತದೆ. ಡಿಜಿಟಲ್ ಉಡಾನ್ ಅಭಿಯಾನವು ಅಂಥದ್ದೊಂದು ಉದಾಹರಣೆಯಾಗಿದ್ದು, ಮಾಹಿತಿ ಅಸಮಾನತೆಯ ಅಡಚಣೆಗಳನ್ನು ಹೋಗಲಾಡಿಸಿ ತತ್‌ಕ್ಷಣದ ಪ್ರವೇಶ ಸಾಧ್ಯತೆಯನ್ನು ಒದಗಿಸುತ್ತದೆ.

ಡ್ರೆಂಚ್ ಕೋಟ್ಸ್ ಪರಿಚಯಿಸಿದ ರಿಲಯನ್ಸ್ ನ ರೀಟೇಲರ್ ಆಜಿಯೋ ಡ್ರೆಂಚ್ ಕೋಟ್ಸ್ ಪರಿಚಯಿಸಿದ ರಿಲಯನ್ಸ್ ನ ರೀಟೇಲರ್ ಆಜಿಯೋ

ಇದು ಮಾಹಿತಿ, ಶಿಕ್ಷಣ ಹಾಗೂ ಮನರಂಜನೆಯ ಪ್ರಸಾರದಲ್ಲಿ ಎಲ್ಲರನ್ನೂ ಒಳಗೊಳ್ಳುವ ಯೋಜನೆಯಾಗಿದ್ದು, ಈ ಡಿಜಿಟಲ್ ಡ್ರೈವ್‌ನಿಂದ ಯಾವುದೇ ಭಾರತೀಯರನ್ನು ಹೊರಗುಳಿಸಲಾಗುತ್ತಿಲ್ಲ. ಇದನ್ನು ಭಾರತದ ಎಲ್ಲ ನಗರ ಹಾಗೂ ಗ್ರಾಮಗಳಿಗೂ ಕೊಂಡೊಯ್ಯಲು ಜಿಯೋ ಉದ್ದೇಶಿಸಿದ್ದು, ಭಾರತದಲ್ಲಿ ಶೇ. 100 ಡಿಜಿಟಲ್ ಸಾಕ್ಷರತೆ ಸಾಧಿಸಲು ಬಯಸುತ್ತದೆ," ಎಂದು ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದರು.

ಈ ಉಪಕ್ರಮದ ಬಗ್ಗೆ ಮಾತನಾಡಿದ ಫೇಸ್‌ಬುಕ್ ಇಂಡಿಯಾ ಉಪಾಧ್ಯಕ್ಷ ಹಾಗೂ ಎಂಡಿ ಅಜಿತ್ ಮೋಹನ್, "ಮಿಲಿಯನ್‌ಗಟ್ಟಲೆ ಭಾರತೀಯರನ್ನು ಸಶಕ್ತರಾಗಿಸುವ ಹಾಗೂ ಅಂತರಜಾಲ ಪ್ರವೇಶಾವಕಾಶವನ್ನು ವಿಸ್ತರಿಸುವ ಮೂಲಕ ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಜಿಯೋ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕಾರ್ಯದಲ್ಲಿ ಫೇಸ್‌ಬುಕ್ ಕೂಡ ಸಹಾಯಕವಾಗಿದ್ದು, ಹೊಸ ಅಂತರಜಾಲ ಬಳಕೆದಾರರನ್ನು ಆಕರ್ಷಿಸುವಲ್ಲಿ ಹಾಗೂ ಆ ಸಂಪರ್ಕದ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವರಿಗೆ ನೆರವಾಗುವ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಜಿಯೋ ಜೊತೆ ಸಹಭಾಗಿಯಾಗಲು ಹರ್ಷಿಸುತ್ತದೆ," ಎಂದು ಹೇಳಿದರು.

ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ನಲ್ಲಿ ದೊರೆಯಲಿದೆ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಸ್‌ನಲ್ಲಿ ದೊರೆಯಲಿದೆ

ಈ ವಿಶಿಷ್ಟ ಉಪಕ್ರಮವು ಅದರಲ್ಲಿ ಪಾಲ್ಗೊಳ್ಳುವವರಿಗೆ ರಾಷ್ಟ್ರ ಹಾಗೂ ಪ್ರಪಂಚದ ಡಿಜಿಟಲ್ ಸಂಪರ್ಕ ನೀಡುತ್ತದೆ. ಸರಕಾರಿ ಸೌಲಭ್ಯ ಹಾಗೂ ಕಾರ್ಯಕ್ರಮಗಳ ಮಾಹಿತಿ, ಅಗತ್ಯ ಸೇವೆಗಳಿಗೆ ಸಂಪರ್ಕ, ಮನರಂಜನೆ ಸೇರಿದಂತೆ ಜ್ಞಾನದ ಪ್ರಪಂಚವನ್ನೇ ಅವರು ತಮ್ಮ ಫೋನುಗಳಲ್ಲಿ ಫೇಸ್‌ಬುಕ್ ಹಾಗೂ ಜಿಯೋ ಆಪ್ಸ್ ಸಂಗ್ರಹದ ಮೂಲಕ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

English summary
Jio today announced a digital literacy initiative in India. This new initiative named ‘Digital Udaan’, will empower first-time internet users with digital literacy and understanding of the Internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X