ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋದಿಂದ ಐದು ಹೊಸ ಪ್ರೀಪೇಯ್ಡ್ ಯೋಜನೆ

|
Google Oneindia Kannada News

ನವದೆಹಲಿ, ಜೂನ್ 13: ದೂರಸಂಪರ್ಕ ಕಂಪೆನಿ ರಿಲಯನ್ಸ್ ಜಿಯೋ, ಇತ್ತೀಚೆಗೆ ಜಿಯೋ ಫ್ರೀಡಂ ಯೋಜನೆಗಳನ್ನು ಪರಿಚಯಿಸಿದೆ. ಇದು ಐದು ಹೊಸ ದೈನಂದಿನ ಮಿತಿರಹಿತ ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳನ್ನು ಒದಗಿಸುತ್ತದೆ ಎಂದು ಜಿಯೋದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ತಿಳಿಸಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಹೊಸ ಯೋಜನೆಗಳು 127 ರೂಪಾಯಿಗೆ 15 ದಿನಗಳ ವ್ಯಾಲಿಡಿಟಿಯೊಂದಿಗೆ ಯೋಜನಾ ಅವಧಿಯಲ್ಲಿ 12 ಜಿಬಿ ತಡೆರಹಿತ ದೈನಂದಿನ ಡೇಟಾ ಆಫರ್‌ನೊಂದಿಗೆ ಆರಂಭವಾಗುತ್ತವೆ.

30 ದಿನಗಳು, 60 ದಿನಗಳು, 90 ದಿನಗಳು ಮತ್ತು 365 ದಿನಗಳ ಇತರೆ ಯೋಜನೆಗಳನ್ನು ಸಹ ಪರಿಚಯಿಸಲಾಗಿದೆ. ಈ ಯೋಜನೆಗಳು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಮತ್ತು ಇತರೆ ಆಪ್‌ಗಳು ಸೇರಿದಂತೆ ಜಿಯೋದ ಮಾಜಿತಿ ಹಾಗೂ ಯುಟಿಲಿಟಿ ಆಪ್‌ಗಳಿಗೆ ಪ್ರವೇಶ ಕಲ್ಪಿಸುತ್ತವೆ.

ಜಿಯೋ ಫ್ರೀಡಂ ಯೋಜನೆ

ಜಿಯೋ ಫ್ರೀಡಂ ಯೋಜನೆ

ಜಿಯೋ ಫ್ರೀಡಂ ಯೋಜನೆಗಳ ಅಡಿ ಪರಿಚಯಿಸಲಾಗಿರುವ ಐದು ಹೊಸ ದೈನಂದಿನ ಮಿತಿರಹಿತ ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳು ಡಿಜಿಟಲ್ ಲೈಫ್‌ಗೆ ಮತ್ತಷ್ಟು ಆಯ್ಕೆಗಳನ್ನು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹೊಸ ಪ್ರೀಪೇಯ್ಡ್ ಯೋಜನೆ

ಈ ಹೊಸ ಪ್ರೀಪೇಯ್ಡ್ ಯೋಜನೆ

ಈ ಹೊಸ ಪ್ರೀಪೇಯ್ಡ್ ಯೋಜನೆಗಳು, ಹಿಂದಿನ ಜನಪ್ರಿಯ 28 ದಿನಗಳು ಮತ್ತು ಬಹು ವಾಯಿದೆಯ ಪ್ರೀಪೇಯ್ಡ್ ಯೋಜನೆಗಳಿಗಿಂತ ವಿಭಿನ್ನವಾಗಿದ್ದು, 30 ದಿನಗಳ ಬಹು ವಾಯಿದೆಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ದೈನಂದಿನ ಮಿತಿ ಇಲ್ಲದ ಯೋಜನೆ

ದೈನಂದಿನ ಮಿತಿ ಇಲ್ಲದ ಯೋಜನೆ

ನಿಗದಿತ ಡೇಟಾದೊಂದಿಗೆ ದೈನಂದಿನ ಮಿತಿ ಇಲ್ಲದ ಹಾಗೂ ಅನಿಯಮಿತ ವಾಯ್ಸ್‌ಅನ್ನು ಈ ಐದು ಯೋಜನೆಗಳು ನೀಡಲಿವೆ. 'ದೈನಂದಿನ ಮಿತಿ ರಹಿತ' ಯೋಜನೆಗಳು, ದೈನಂದಿಯ ಮಿತಿಗಳು ಖಾಲಿಯಾಗುವ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲದೆ ತಡೆರಹಿತ ಡೇಟಾ ಬಳಕೆಯನ್ನು ಆನಂದಿಸಲು ಅಧಿಕ ಡೇಟಾ ಬಳಕೆದಾರರಿಗೆ ನೆರವಾಗುತ್ತದೆ. 30 ದಿನಗಳ ವ್ಯಾಲಿಡಿಟಿ ಚಕ್ರವು ರೀಚಾರ್ಜ್ ದಿನಾಂಕವನ್ನು ನೆನಪಿಸಲು ನೆರವಾಗುತ್ತದೆ ಎಂದು ಮೂಲಗಳು ಹೇಳಿವೆ.

Recommended Video

Renukacharya ಅವರು ತಹಶೀಲ್ದಾರ್ ಅವರಿಗೆ ಉತ್ತರ ಕೊಟ್ಟಿದ್ದು ಹೀಗೆ | Oneindia Kannada
ಜಿಯೋ ವೆಬ್‌ಸೈಟ್ ಮಾಹಿತಿಯ ಪ್ರಕಾರ

ಜಿಯೋ ವೆಬ್‌ಸೈಟ್ ಮಾಹಿತಿಯ ಪ್ರಕಾರ

ಜಿಯೋ ವೆಬ್‌ಸೈಟ್ ಮಾಹಿತಿಯ ಪ್ರಕಾರ, 247 ರೂ. ದರದ ಯೋಜನೆಯು 30 ದಿನಗಳ ವ್ಯಾಲಿಡಿಟಿ ಮತ್ತು ಯಾವುದೇ ದೈನಂದಿನ ಮಿತಿಯಿಲ್ಲದೆ 25 ಜಿಬಿ ಡೇಟಾ ನೀಡುತ್ತಿದೆ. ಇತರೆ ಯೋಜನೆಗಳು 447 ರೂ., (60 ದಿನಗಳ ವ್ಯಾಲಿಡಿಟಿ, 50 ಜಿಬಿ ಡೇಟಾ), 597 ರೂ. (90 ದಿನಗಳ ವ್ಯಾಲಿಡಿಟಿ ಮತ್ತು 75 ಜಿಬಿ ಡೇಟಾ), ಮತ್ತು 2397 ರೂ. (365 ದಿನಗಳ ವ್ಯಾಲಿಡಿಟಿ ಮತ್ತು 365 ಜಿಬಿ ಡೇಟಾ) ದರವನ್ನು ಹೊಂದಿವೆ.

English summary
Jio introduces 5 new 'no daily limit' prepaid plans, Know more about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X