ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.5; ಮುಖೇಶ್ ಅಂಬಾನಿ 'ಗಿಗಾ ಸುನಾಮಿ'ಗೆ ಮುಹೂರ್ತ ಫಿಕ್ಸ್!

|
Google Oneindia Kannada News

ಒಂದೇ ತಾಯಿಯ ಇಬ್ಬರು ಮಕ್ಕಳ ಹಣೆಬರಹವನ್ನು ದೇವರು ಯಾವ ರೀತಿ ಬರೆದಿರುತ್ತಾನೆ ನೋಡಿ. ಒಬ್ಬ ಮಗ ಮಾಡಿದ ಸಾಲವನ್ನು ತೀರಿಸಲು ಗಳಿಸಿದ್ದೆನ್ನಲ್ಲಾ ಮಾರುತ್ತಿದ್ದರೆ, ಇನ್ನೊಬ್ಬ ಮಗ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಹೋಗುತ್ತಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಯಜಮಾನ ಮುಖೇಶ್ ಅಂಬಾನಿ, ಸದ್ಯ ಮುಟ್ಟಿದೆಲ್ಲಾ ಚಿನ್ನ. ಹಿಡಿದ ಕೆಲಸವನ್ನು ಪಕ್ಕಾ ವೃತ್ತಿಪರತೆಯಿಂದ ಮಾಡಿ ಮುಗಿಸುವ ಮುಖೇಶ್ ಅಂಬಾನಿ, ಜಿಯೋ 4G ಸೇವೆಯ ನಂತರ, ಮತ್ತೊಂದು ಕ್ರಾಂತಿ ನಡೆಸಲು ಮಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಬಾರಿ ಇಂಟರ್ನೆಟ್ ಜಗತ್ತಿನಲ್ಲಿ.

ಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿ

ಸುಮಾರು ಎರಡು ವರ್ಷಗಳ ಹಿಂದೆ, ತನ್ನ ತಂದೆ ಧೀರೂಭಾಯಿ ಅಂಬಾನಿಯವರ 83ನೇ ಜನ್ಮದಿನದ ಸ್ಮರಣಾರ್ಥ (27 ಡಿಸೆಂಬರ್, 2015) ದೇಶದ ಮೊಬೈಲ್ ಮಾರುಕಟ್ಟೆಗೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇನ್ಫೋಕಾಂ 'ಜಿಯೋ' ಸೇವೆಯನ್ನು ಆರಂಭಿಸಿತ್ತು.

"ಮೈಕ್ರೋಸಾಫ್ಟ್, ಸೌದಿ ಕಂಪನಿ ಜತೆ ರಿಲಯನ್ಸ್, 10 ಟ್ರಿಲಿಯನ್ ಗುರಿ"

ಜುಲೈ 2017ರಂದು, ತನ್ನ 4G ಸೇವೆಯನ್ನು ಬಳಕೆದಾರರಿಗೆ ಬಿಡುಗಡೆ ಮಾಡಿತು. ಮೊದಲ ಐದಾರು ತಿಂಗಳು ಉಚಿತ ಸೇವೆ ನೀಡಿದ್ದ ರಿಲಯನ್ಸ್ ಸಂಸ್ಥೆ, ಇಡೀ ಮೊಬೈಲ್ ಮಾರುಕಟ್ಟೆಯನ್ನು ಆಪೋಸನೆಗೆ ತೆಗೆದುಕೊಳ್ಳುವತ್ತ ದಾಪುಗಾಲು ಹಾಕಿತು. ಜಿಯೋ, ಟೆಲಿಕಾಂ ಮಾರುಕಟ್ಟೆ ವಿಸ್ತರಿಸುತ್ತಿರುವ ವೇಗಕ್ಕೆ ಸಹೋದರ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ಧೂಳೀಪಟಗೊಂಡಿತ್ತು.

ಜಿಯೋ ಫ್ರೀ ಕಾಲ್, ಫ್ರೀ ಡಾಟಾ

ಜಿಯೋ ಫ್ರೀ ಕಾಲ್, ಫ್ರೀ ಡಾಟಾ

ಫ್ರೀ ಕಾಲ್, ಫ್ರೀ ಡಾಟಾ ಎನ್ನುವ ಮೂಲಕ ಮುಖೇಶ್ ಅಂಬಾನಿ ಸಂಸ್ಥೆ ಆರಂಭಗೊಂಡ ಕೆಲವೇ ತಿಂಗಳಲ್ಲಿ ಸುಮಾರು ಹನ್ನೊಂದು ಕೋಟಿಗೂ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಮೂಲಕ, ಇಡೀ ದೇಶದ ಇತರ ಟೆಲಿಕಾಂ ಸಂಸ್ಥೆಗಳಿಗೆ ಊಹಿಸಲೂ ಅಸಾಧ್ಯವಾದ ಹೊಡೆತವನ್ನು ನೀಡಿದ್ದರು. ಈಗ, ಮುಖೇಶ್ ಅಂಬಾನಿ, ISP (Internet Service Provider) ಸಂಸ್ಥೆಗಳಿಗೆ ನಿದ್ದೆಗೆಡಿಸುವ ಕೆಲಸಕ್ಕೆ ದಿನ ನಿಗದಿ ಮಾಡಿದ್ದಾರೆ. ಅದು ಇದೇ ಬರುವ ಸೆಪ್ಟಂಬರ್ ಐದರಂದು.

'ಗಿಗಾ ಫೈಬರ್ ಸೇವೆ' ಮುಂದಿನ ತಿಂಗಳಿನಿಂದ ಪ್ರಾರಂಭ

'ಗಿಗಾ ಫೈಬರ್ ಸೇವೆ' ಮುಂದಿನ ತಿಂಗಳಿನಿಂದ ಪ್ರಾರಂಭ

'ಗಿಗಾ ಫೈಬರ್ ಸೇವೆ' ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಿಸಿರುವ ಮುಖೇಶ್ ಅಂಬಾನಿ, ಪ್ರಾರಂಭಿಕ ಆಫರ್ ಘೋಷಣೆ ಮಾಡಿರುವುದು, ಅವರ ಗ್ರಾಹಕರನ್ನು ಸೆಳೆಯುವ 'ವ್ಯಾಪಾರ ಬುದ್ದಿ'ಯನ್ನು ತೋರಿಸುತ್ತದೆ. ಜಿಯೋ ಸಿಮ್ ನಂತೆ, ರಿಲಯನ್ಸ್ ಗಿಗಾ ಫೈಬರ್ ಇಂಟರ್ನೆಟ್ ಸೇವೆ, ಬ್ರಾಡ್ ಬ್ಯಾಂಡ್ ಲೋಕದಲ್ಲಿ ತಲ್ಲಣ ಮೂಡಿಸುವ ಎಲ್ಲಾ ಲಕ್ಷಣಗಳಿವೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಎಜಿಎಂ

ರಿಲಯನ್ಸ್ ಇಂಡಸ್ಟ್ರೀಸ್ ನ ಎಜಿಎಂ

ರಿಲಯನ್ಸ್ ಇಂಡಸ್ಟ್ರೀಸ್ ನ ಎಜಿಎಂ (annual general meeting) ಸಭೆಯಲ್ಲಿ ಗಿಗಾ ಫೈಬರ್ ಸೇವೆಯ ಬಗ್ಗೆ ಪ್ರಕಟಿಸಿರುವ ಮುಖೇಶ್, ಏಳು ನೂರು ರೂಪಾಯಿಯಿಂದ ಹತ್ತು ಸಾವಿರದವರೆಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಜೊತೆಗೆ, ಹತ್ತು ಸಾವಿರ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ಇತರ ಆಫರ್ ಗಳ ಬಗ್ಗೆ ಕೂಡಾ ವಿವರಿಸಿದ್ದಾರೆ.

ಒಂದೂವರೆ ಕೋಟಿ ಗ್ರಾಹಕರು

ಒಂದೂವರೆ ಕೋಟಿ ಗ್ರಾಹಕರು

"ಈಗಾಗಲೇ ದೇಶದ ವಿವಿಧ ಭಾಗದ ಒಂದೂವರೆ ಕೋಟಿ ಗ್ರಾಹಕರು ಗಿಗಾ ಸೇವೆಯನ್ನು ನೋಂದಣಿ ಮಾಡಿಕೊಂಡಿದ್ದಾರೆಂದು" ಹೇಳಿರುವ ಮುಖೇಶ್, 100 Mbps ಮೂಲ ಸ್ಪೀಡ್ ನಿಂದ ಹಿಡಿದು 1Gbps ವರೆಗೆ ವಿವಿಧ ಪ್ಲ್ಯಾನ್ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. "ಇಡೀ ದೇಶದಲ್ಲಿ ಅತೀಹೆಚ್ಚು ಜಿಎಸ್ಟಿ ಪಾವತಿಸುವ ಕಂಪೆನಿ ನಮ್ಮದೆಂದು" ಹೇಳಿರುವ ಮುಖೇಶ್, "ಗಿಗಾ ಸೇವೆಗಾಗಿ 3.5ಲಕ್ಷ ಕೋಟಿ ಹಣ ಹೂಡಿಕೆ ಮಾಡಲಾಗಿದೆ," ಎಂದಿದ್ದಾರೆ.

ವೆಲ್ಕಂ ಆಫರ್ ಎಂದು LED ಟಿವಿ, ಡಿಜಿಟಲ್ ಸೆಟ್ ಟಾಪ್ ಬಾಕ್ಸ್,

ವೆಲ್ಕಂ ಆಫರ್ ಎಂದು LED ಟಿವಿ, ಡಿಜಿಟಲ್ ಸೆಟ್ ಟಾಪ್ ಬಾಕ್ಸ್,

"ವಿಶ್ವದಲ್ಲೇ ಎರಡನೇ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಸಂಸ್ಥೆ" ನಮ್ಮದು ಎಂದಿರುವ ಮುಖೇಶ್, ವೆಲ್ಕಂ ಆಫರ್ ಎಂದು LED ಟಿವಿ, ಡಿಜಿಟಲ್ ಸೆಟ್ ಟಾಪ್ ಬಾಕ್ಸ್, ಸ್ಥಿರ ದೂರವಾಣಿ ಉಚಿತ. ಜಿಯೋ ಫೈಬರ್ ಮೂಲಕ ಟಿವಿ ಸಂಪರ್ಕ... ಹೀಗೆ ಹಲವು ಪ್ಲ್ಯಾನ್ ಗಳನ್ನು ಅಂಬಾನಿ ಪ್ರಕಟಿಸಿದ್ದಾರೆ. ಮುಖೇಶ್ ಅಂಬಾನಿಯ 'ಗಿಗಾ ಹೊಡೆತಕ್ಕೆ' ಇನ್ನೆಷ್ಟು ಕಂಪೆನಿಗಳು ಬಾಗಿಲು ಮುಚ್ಚತ್ತವೋ, ಕಾದು ನೋಡಬೇಕಿದೆ.,.

English summary
Reliance Industries' Chairman and MD Mukesh Ambani announced the roll-out of Jio Fiber broadband services during the company's 42nd Annual General Meeting (AGM) on Monday. Ambani said the high-speed internet service will be made available to the general public starting 5 September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X