ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಫೈಬರ್ ಸಂಪರ್ಕದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ

|
Google Oneindia Kannada News

ಮುಂಬೈ, ಜೂನ್ 12: ದೇಶದೆಲ್ಲೆಡೆಯ ಜಿಯೋಫೈಬರ್ ಬಳಕೆದಾರರು ಇದೀಗ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಅಮೆಜಾನ್ ಪ್ರೈಮ್ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದೆ. ಜಿಯೋಫೈಬರ್‌ನ ಸದ್ಯದ ಅಥವಾ ಹೊಸ ಬಳಕೆದಾರರಿಗೆ, ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ, ರೂ. 999 ಮೌಲ್ಯದ ಅಮೆಜಾನ್ ಪ್ರೈಮ್ ಒಂದು ವರ್ಷದ ಸದಸ್ಯತ್ಯವನ್ನು ರಿಲಯನ್ಸ್ ಜಿಯೋ ಘೋಷಿಸಿದೆ.

Recommended Video

ಸೌತೆಕಾಯಿ ಸೇವಿಸಿದ ನಂತರ ನೀರು ಕುಡಿದ್ರೆ ಆರೋಗ್ಯಕ್ಕೆ ಹಾನಿ | Oneindia Kannada

ಅಮಿತಾಭ್ ಬಚ್ಚನ್ ಹಾಗೂ ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೊ ಸೀತಾಬೊ ಅಮೆಜಾನ್ ಪ್ರೈಮ್‌ನಲ್ಲಿ ಶುಕ್ರವಾರ(ಜೂನ್ 12) ಸಂಜೆ ಪ್ರದರ್ಶನಗೊಳ್ಳುತ್ತಿದೆ. ಜಿಯೋಫೈಬರ್ ಬಳಕೆದಾರರು ಈ ಪ್ರೀಮಿಯರ್ ಅನ್ನು ಆನಂದಿಸಬಹುದಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ, ತಮಿಳು, ಮಲಯಾಳಂ, ಗುಜರಾತಿ, ತೆಲುಗು, ಪಂಜಾಬಿ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಅನ್ನೂ ಬಳಕೆದಾರರು ವೀಕ್ಷಿಸಬಹುದು.

ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಲ್ಲದೆ ಇನ್ನೂ 25 OTT ಗಳಿವೆ

ಉತ್ಪನ್ನಗಳ ಉಚಿತ ಹಾಗೂ ಕ್ಷಿಪ್ರ ಬಟವಾಡೆ, ಅತ್ಯುತ್ತಮ ಕೊಡುಗೆಗಳನ್ನು ಮುಂಚಿತವಾಗಿ ಪಡೆಯುವ ಅವಕಾಶ, ಜಾಹೀರಾತು-ಮುಕ್ತ ಪ್ರೈಮ್ ಮ್ಯೂಸಿಕ್, ಪ್ರೈಮ್ ಗೇಮಿಂಗ್ ಮತ್ತು ಪ್ರೈಮ್ ರೀಡಿಂಗ್ ಸವಲತ್ತುಗಳನ್ನು ಕೂಡ ಬಳಕೆದಾರರು ಒಂದು ವರ್ಷದವರೆಗೆ ಪಡೆಯಲಿದ್ದಾರೆ.

Jio announces one year Amazon Prime remembership free

ಗೋಲ್ಡ್ ಅಥವಾ ಅದಕ್ಕೂ ಮೇಲಿನ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡುವ ಜಿಯೋಫೈಬರ್‌ನ ಸದ್ಯದ ಹಾಗೂ ಹೊಸ ಬಳಕೆದಾರರೆಲ್ಲರೂ ಈ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ. ನಿಷ್ಠೆಯನ್ನು ಪುರಸ್ಕರಿಸುವ ತನ್ನ ಭರವಸೆಯ ಮುಂದುವರಿಕೆಯಾಗಿ, ಗೋಲ್ಡ್ ಅಥವಾ ಅದಕ್ಕೂ ಮೇಲಿನ ಪ್ಲಾನ್‌ನಲ್ಲಿ ಈಗಾಗಲೇ ಸಕ್ರಿಯವಾಗಿರುವ ಬಳಕೆದಾರರೆಲ್ಲರಿಗೂ ಜಿಯೋ ಈ ಪ್ರಯೋಜನವನ್ನು ವಿಸ್ತರಿಸುತ್ತಿದೆ. ಪ್ರಸ್ತುತ ಸಿಲ್ವರ್ ಹಾಗೂ ಬ್ರಾಂಜ಼್ ಪ್ಲಾನ್‌ಗಳಲ್ಲಿರುವ ಗ್ರಾಹಕರು ಗೋಲ್ಡ್ ಅಥವಾ ಅದಕ್ಕೂ ಮೇಲಿನ ಪ್ಲಾನ್‌‌ಗೆ ರೀಚಾರ್ಜ್ ಮಾಡುವ ಮೂಲಕ ಈ ಉತ್ತೇಜಕ ಕೊಡುಗೆಯನ್ನು ಪಡೆಯಬಹುದು.

ಇದಕ್ಕಾಗಿ, ಜಿಯೋಫೈಬರ್ ಬಳಕೆದಾರರು ಮೈಜಿಯೋ ಅಪ್ಲಿಕೇಶನ್ ಅಥವಾ ವೆಬ್ ತಾಣ ಮೂಲಕ ಜಿಯೋಫೈಬರ್ ಗೋಲ್ಡ್ ಅಥವಾ ಅದಕ್ಕೂ ಮೇಲಿನ ಪ್ಲಾನ್ ಅನ್ನು ರೀಚಾರ್ಜ್ ಮಾಡಿ ಸಕ್ರಿಯಗೊಳಿಸಬೇಕು ಹಾಗೂ ತಮ್ಮ ಜಿಯೋಫೈಬರ್ ಖಾತೆಗೆ ಲಾಗ್ಇನ್ ಮಾಡಬೇಕು. ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವದ ಬ್ಯಾನರ್ ಕ್ಲಿಕ್ ಮಾಡುವ ಮೂಲಕ ಅವರು ತಮ್ಮ ಅಮೆಜಾನ್ ಪ್ರೈಮ್ ಖಾತೆಗೆ ಸೈನ್-ಇನ್ ಮಾಡಬಹುದು ಮತ್ತು ಕಂಟೆಂಟ್ ಅನ್ನು ಆನಂದಿಸಬಹುದು.

ಸದ್ಯದಲ್ಲಿ, 250 ಎಂಬಿಪಿಎಸ್‌ವರೆಗಿನ ಡೇಟಾ ವೇಗ, ಅಪರಿಮಿತ ಅಂತರಜಾಲ (ತಿಂಗಳಿಗೆ 1,750 ಜಿಬಿವರೆಗೆ), ಅಪರಿಮಿತ ವಾಯ್ಸ್ ಕಾಲಿಂಗ್, ಅಪರಿಮಿತ ವೀಡಿಯೊ ಕಾಲಿಂಗ್ ಮತ್ತು ಕಾನ್ಫರೆನ್ಸಿಂಗ್ (ಟಿವಿ ವೀಡಿಯೊ ಕಾಲಿಂಗ್ ಸೇರಿ) ಹಾಗೂ ಜಿಯೋ ಅಪ್ಲಿಕೇಶನ್‌ಗಳಿಗೆ ಅಪರಿಮಿತ ಪ್ರವೇಶಾವಕಾಶವನ್ನು ಜಿಯೋಫೈಬರ್ ಗೋಲ್ಡ್ ಪ್ಲಾನ್ ಒದಗಿಸುತ್ತಿದೆ.

English summary
JioFiber users across India can now watch and enjoy Amazon Prime content at no extra cost for one-year worth Rs 999.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X