ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ WFH ತ್ರೈಮಾಸಿಕ ಯೋಜನೆ ಪ್ರಕಟಿಸಿದ ಜಿಯೋ

|
Google Oneindia Kannada News

ಬೆಂಹಳೂರು, ಮೇ 15: ಪ್ರಿಪೇಯ್ಡ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಶುಕ್ರವಾರ ಮತ್ತೊಂದು ಹೆಚ್ಚಿನ ಡೇಟಾವನ್ನು ನೀಡುವ ವರ್ಕ್‌ ಫ್ರಮ್‌ ಹೋಮ್ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ತ್ರೈಮಾಸಿಕ ಯೋಜನೆ ಲಾಂಚ್ ಆಗಿದ್ದು , ದಿನಕ್ಕೆ 3 ಜಿಬಿಯನ್ನು ಕೇವಲ ರೂ 999 ಕ್ಕೆ 84 ದಿನಗಳವರೆಗೆ ನೀಡುತ್ತದೆ.

ಈ ಹೊಸ ಯೋಜನೆಯು ಜಿಯೋದಿಂದ ಜಿಯೋ ಮತ್ತು ಲ್ಯಾಂಡ್‌ಲೈನ್‌ಗೆ ಉಚಿತ ಮತ್ತು ಅನಿಯಮಿತ ಕರೆ ಮಾಡುವ ಅವಕಾಶವನ್ನು ನೀಡುತ್ತದೆ. ಅಲ್ಲದೆ ಇದರೊಂದಿಗೆ ಜಿಯೋದಿಂದ ಇತರ ಮೊಬೈಲ್‌ಗೆ 3,000 ನಿಮಿಷಗಳ ಕರೆಗಳನ್ನು ಮಾಡುವ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ನೀಡುತ್ತದೆ ಮತ್ತು ನಿತ್ಯ 3 ಜಿಬಿ ಹೈ-ಸ್ಪೀಡ್ ಡೇಟಾವನ್ನು ಮತ್ತು ನಂತರ 64 ಕೆಬಿಪಿಎಸ್ ನಲ್ಲಿ ಅನಿಯಮಿತ ಡೇಟಾ ಬಳಕೆ ಅವಕಾಶ ಮಾಡಿಕೊಡುತ್ತಿದೆ, ಜೊತೆಗೆ ಬಳಕೆದಾರರಿಗೆ ಜಿಯೋ ಆಪ್ಸ್‌ ಗಳನ್ನು ಉಚಿತವಾಗಿ ಬಳಕೆ ಮಾಡುವ ಅವಕಾಶವನ್ನು ನೀಡುತ್ತಿದೆ.

ಹೊಸ ವರ್ಕ್ ಫ್ರಂ ಯೋಜನೆ ಪ್ರಕಟಿಸಿದ ರಿಲಯನ್ಸ್ ಜಿಯೋಹೊಸ ವರ್ಕ್ ಫ್ರಂ ಯೋಜನೆ ಪ್ರಕಟಿಸಿದ ರಿಲಯನ್ಸ್ ಜಿಯೋ

ಮನೆಯಿಂದಲೇ ಕುಳಿತು ಕೆಲಸವನ್ನು ಮಾಡುತ್ತಿರುವವರಿಗಾಗಿಯೇ ಆಕರ್ಷಕ 'ನ್ಯೂ ವರ್ಕ್ ಫ್ರಮ್ ಹೋಮ್ ಪ್ಲಾನ್' ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಲ್ಲದೇ, ಯಾವುದೇ ಡೇಟಾ ಖಾಲಿಯಾಗುವ ಚಿಂತೆ ಇಲ್ಲದೆ ವರ್ಷ ಪೂರ್ತಿ ಕೆಲಸ ಮಾಡಬಹುದಾಗಿದೆ.

 ಹೆಚ್ಚಿನ ವೇಗದ ಡೇಟಾದ ಅಗತ್ಯ

ಹೆಚ್ಚಿನ ವೇಗದ ಡೇಟಾದ ಅಗತ್ಯ

ಲಾಕ್‌ಡೌನ್ ಆದಾಗಿನಿಂದಲೂ ಹೆಚ್ಚಿನ ಮಂದಿ ವರ್ಕ್‌ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ವೇಗದ ಡೇಟಾದ ಅಗತ್ಯವು ಹೆಚ್ಚಾಗಿದೆ. ಇದರೊಂದಿಗೆ ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಮನರಂಜನೆಗಾಗಿ ಹುಡುಕುತ್ತಿದ್ದಾರೆ. ಈ ಅಗತ್ಯವನ್ನು ಪರಿಗಣಿಸಿ, ಜಿಯೋ ಈ ಹೊಸ ವರ್ಕ್‌ ಫ್ರಮ್ ಹೋಮ್ ತ್ರೈಮಾಸಿಕ ಪ್ಲಾನ್ ಅನ್ನು ಲಾಂಚ್ ಮಾಡಿದ್ದಾರೆ.

2 ಜಿಬಿ ಡೇಟಾ ಯೋಜನೆ ಪ್ರಕಟಿಸಲಾಗಿತ್ತು

2 ಜಿಬಿ ಡೇಟಾ ಯೋಜನೆ ಪ್ರಕಟಿಸಲಾಗಿತ್ತು

ಈ ಮೊದಲು ಜಿಯೋ ದಿನಕ್ಕೆ 2 ಜಿಬಿ ಡೇಟಾವನ್ನು ನೀಡುವಂತಹ ಹೊಸ ವರ್ಕ್‌ ಫ್ರಮ್ ಹೋಮ್ ವಾರ್ಷಿಕ ಯೋಜನೆಯನ್ನು 33% ಹೆಚ್ಚಿನ ಲಾಭದೊಂದಿಗೆ ರೂ. 2399 ಕ್ಕೆ ಘೋಷಿಸಿತು. ಇದರೊಂದೊಗೆ ಜಿಯೋ 336 ದಿನಗಳ ವ್ಯಾಲಿಟಿಡಿ ಹೊಂದಿರುವ ದಿನಕ್ಕೆ 1.5 ಜಿಬಿ ಡೇಟಾವನ್ನು ರೂ. 2,121 ರ ದಿನಕ್ಕೆ ನೀಡುತ್ತಿದೆ.

ಲಾಕ್ಡೌನ್ ಆಫರ್ : ಜಿಯೋ ರೀಚಾರ್ಜ್ ಮಾಡಿ ಕಮಿಷನ್ ಗಳಿಸಿಲಾಕ್ಡೌನ್ ಆಫರ್ : ಜಿಯೋ ರೀಚಾರ್ಜ್ ಮಾಡಿ ಕಮಿಷನ್ ಗಳಿಸಿ

ರೀಚಾರ್ಜ್‌ಗಳ ನಿರಂತರ ಲಭ್ಯತೆ

ರೀಚಾರ್ಜ್‌ಗಳ ನಿರಂತರ ಲಭ್ಯತೆ

ಡಿಜಿಟಲ್ ರೀಚಾರ್ಜ್‌ಗಳು: ಪ್ರತಿ ಜಿಯೋ ಬಳಕೆದಾರರು ತಮ್ಮ ರೀಚಾರ್ಜ್‌ಗಳನ್ನು ಮೈಜಿಯೊ ಅಪ್ಲಿಕೇಶನ್ ಮತ್ತು ಜಿಯೋ .ಕಾಮ್ ವೆಬ್‌ಸೈಟ್ ಮೂಲಕ ಮಾಡಿಕೊಳ್ಳಬಹುದಾಗಿದೆ. ವಾಲೆಟ್‌ಗಳು ಮತ್ತು ಡಿಜಿಟಲ್ ಪಾಲುದಾರರಾದ ಫೋನ್‌ಪೇ, ಪೇಟಿಎಂ, ಜಿಪೇ, ಅಮೆಜಾನ್ ಪೇ, ಮೊಬಿಕ್ವಿಕ್, ಫ್ರೀಚಾರ್ಜ್ ಮತ್ತು ಇನ್ನೂ ಅನೇಕ ಮೂಲಗಳಿಂದ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಹೊಸ ಆಡ್ ಆನ್ ಪ್ಯಾಕ್

ಹೊಸ ಆಡ್ ಆನ್ ಪ್ಯಾಕ್

ಜಿಯೋ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಆಡ್ ಆನ್ ಪ್ಯಾಕ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹಕರು ಯಾವುದೇ ಡೈಲಿ ಡೇಟಾ ಕ್ಯಾಪಿಂಗ್ ಇಲ್ಲದೇ ಡೇಟಾ ಬ್ರೌಸ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಪ್ಲಾನ್‌ಗಳು ಗ್ರಾಹಕರು ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯದ ಡೇಟವನ್ನು ಬಳಕೆಗೆ ನೀಡಲಿದೆ

ಜಿಯೋದಲ್ಲಿ 11,367 ಕೋಟಿ ರು ಹೂಡಿಕೆ ಮಾಡಿದ ಯುಎಸ್ ಕಂಪನಿಜಿಯೋದಲ್ಲಿ 11,367 ಕೋಟಿ ರು ಹೂಡಿಕೆ ಮಾಡಿದ ಯುಎಸ್ ಕಂಪನಿ

English summary
Reliance Jio has just announced new Work From Home Quarterly plan at Rs 999 that offers 3GB of data per day and it comes with a validity of 84 days. Here's what you need to know
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X