ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಯ 1350 ಕೋಟಿ ರು ಮೌಲ್ಯದ ಆಸ್ತಿ ವಶ

|
Google Oneindia Kannada News

ನವದೆಹಲಿ, ಜೂನ್ 11: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಹಾಗೂ ಸಹ ಆರೋಪಿ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಲು ವಿಶೇಷ ಕೋರ್ಟ್ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಹಾಂಗ್ ಕಾಂಗ್ ನಲ್ಲಿ ಇವರಿಬ್ಬರಿಗೆ ಸೇರಿದ ಆಭರಣ ಸಂಸ್ಥೆಯಲ್ಲಿದ್ದ ಚಿನ್ನಾಭರಣ, ಮುತ್ತು, ಹವಳ, ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು 14,356 ಕೋಟಿ ರು ಹಗರಣದಲ್ಲಿ ನೀರವ್ ಮೋದಿ ಅವರ ಸೋದರಿ ಪೂರ್ವಿ ಮೋದಿ ಮೆಹ್ತಾ, ಮೆಹುಲ್ ಚೋಕ್ಸಿ ಕೂಡಾ ಸಹ ಆರೋಪಿಗಳಾಗಿದ್ದಾರೆ.

ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?

ಮನಿಲಾಂಡ್ರಿಂಗ್(ಪಿಎಂಎಲ್ ಎ) ಪ್ರಕರಣದಲ್ಲಿ 2 ಬಿಲಿಯನ್ ಯುಎಸ್ ಡಾಲರ್ ವಂಚನೆ ಮಾಡಿರುವ ಆರೋಪವನ್ನು ಈ ಇಬ್ಬರು ಉದ್ಯಮಿಗಳು ಹೊತ್ತುಕೊಂಡಿದ್ದಾರೆ. ವಿಶೇಷ ಆರ್ಥಿಕ ಅಪರಾಧಿಯೊಬ್ಬರ ಆಸ್ತಿ ಜಪ್ತಿ ಮಾಡಲು Fugitive Economic Offenders Act (FEOA) ಅಡಿಯಲ್ಲಿ ತನಿಖಾ ಸಂಸ್ಥೆ ಜಾರಿ ನಿರ್ದೇಶನಲಯಕ್ಕೆ ಕೋರ್ಟಿನಿಂದ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ತನ್ನ ಬೇಟೆ ಮುಂದುವರೆಸಿದೆ.

1350 ಕೋಟಿ ರು ಮೌಲ್ಯದ ವಜ್ರಾಭರಣ

1350 ಕೋಟಿ ರು ಮೌಲ್ಯದ ವಜ್ರಾಭರಣ

ಹಾಂಗ್ ಕಾಂಗ್ ಸಂಸ್ಥೆಯಲ್ಲಿದ್ದ 2,300 ಕೆಜಿ ಮೌಲ್ಯದ ವಜ್ರ, ಹವಳಗಳನ್ನು ವಶಪಡಿಸಿಕೊಂಡಿರುವ ಜಾರಿ ನಿರ್ದೇಶಾನಾಲಯವು, ಮುಂಬೈಗೆ ಸರಕುಗಳನ್ನು ತಂದಿದೆ.

ಮುಂಬೈಗೆ ಬಂದಿರುವ 108 ಜಪ್ತಿ ವಸ್ತುಗಳ ಪೈಕಿ 32 ಆಭರಣಗಳು ನೀರವ್ ಮೋದಿ ಸಂಸ್ಥೆಗೆ ಹಾಗೂ ಮಿಕ್ಕ ವಜ್ರಾಭರಣಗಳು ಚೋಕ್ಸಿ ಸಂಸ್ಥೆಗೆ ಸೇರಿದ್ದಾಗಿದೆ. ವಜ್ರ, ಹವಳ, ಮುತ್ತು, ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ಆಭರಣಗಳ ಮೌಲ್ಯ 1,350 ರು ಎಂದು ಅಂದಾಜಿಸಲಾಗಿದೆ.

ಲಂಡನ್‌ನಲ್ಲಿ ನೀರವ್ ಮೋದಿ ಜಾಮೀನಿಲ್ಲ

ಲಂಡನ್‌ನಲ್ಲಿ ನೀರವ್ ಮೋದಿ ಜಾಮೀನಿಲ್ಲ

ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿ ಅವರು ಜಾಮೀನಿಗಾಗಿ ಐದು ಬಾರಿ ಮನವಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿಲ್ಲ. ನೀರವ್ ಮೋದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸುತ್ತಾ ಬಂದಿದೆ. ಮೋದಿ ಅವರ ಮಕ್ಕಳು ಲಂಡನ್ನಿನಲ್ಲೇ ವ್ಯಾಸಂಗ ಮಾಡುತ್ತಿದ್ದು, ಲಂಡನ್ ಬಿಡುವುದಿಲ್ಲ, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೋದಿ ಪರ ವಕೀಲರು ವಾದಿಸಿದ್ದರು.

ನೀರವ್ ಮೋದಿ ಸಮಸ್ತ ಆಸ್ತಿ ಜಪ್ತಿಗೆ ಕೋರ್ಟ್ ಅನುಮತಿನೀರವ್ ಮೋದಿ ಸಮಸ್ತ ಆಸ್ತಿ ಜಪ್ತಿಗೆ ಕೋರ್ಟ್ ಅನುಮತಿ

ಈ ಹಿಂದೆ 13 ಕೋಟಿ ಆಸ್ತಿ ವಶ

ಈ ಹಿಂದೆ 13 ಕೋಟಿ ಆಸ್ತಿ ವಶ

ನೀರವ್ ಮೋದಿ ಅವರು 6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರದಲ್ಲಿ ತೊಡಗಿದ್ದರು ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ. ಪಿಎಂಎಲ್ಎ ಕಾಯ್ದೆ ಉಲ್ಲಂಘನೆಯಡಿಯಲ್ಲಿ ಥೈಲ್ಯಾಂಡ್ ನಲ್ಲಿ 13 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿತ್ತು. ಗೀತಾಂಜಲಿ ಸಮೂಹ ಸಂಸ್ಥೆಗೆ ಸೇರಿದ ಈ ಆಸ್ತಿಗೆ ನೀರವ್ ಅವರ ಅಂಕಲ್ ಮೆಹುಲ್ ಚೋಕ್ಸಿ ಅವರು ಸಹ ಮಾಲೀಕರಾಗಿದ್ದಾರೆ

ನೀರವ್ ಸೋದರಿ ಪೂರ್ವಿ ಖಾತೆಯೂ ಜಪ್ತಿ

ನೀರವ್ ಸೋದರಿ ಪೂರ್ವಿ ಖಾತೆಯೂ ಜಪ್ತಿ

ಸಿಂಗಪುರ ಹೈಕೋರ್ಟ್ ಆದೇಶದಂತೆ ಪೂರ್ವಿ ಮೋದಿ ಮೆಹ್ತಾ ಅವರ ಖಾತೆಯನ್ನು ಜಪ್ತಿ ಮಾಡಲಾಗಿದ್ದು, 6.122 ಡಾಲರ್( 44.41 ಕೋಟಿ ರು) ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. ಪೂರ್ವಿ ಮೆಹ್ತಾ ಹಾಗೂ ಅವರ ಪತಿ ಮೈಯಾಂಕ್ ಮೆಹ್ತಾ ಒಡೆತನದ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನ ಪೆವಿಲಿಯನ್ ಪಾಯಿಂಟ್ ಕಾರ್ಪೊರೇಷನ್ ಕಂಪನಿ ಹೆಸರಿನಲ್ಲಿ ಖಾತೆ ನಿರ್ವಹಣೆಯಾಗುತ್ತಿತ್ತು. ಮಾರ್ಚ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯ ಹಾಕಿರುವ ಹೊಸ ಚಾರ್ಜ್ ಶೀಟ್ ನಲ್ಲಿ ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ, 1,201.18ಕೋಟಿ ರು ಅಕ್ರಮ ವರ್ಗಾವಣೆ ಆರೋಪವನ್ನು ಪೂರ್ವಿ ಮೇಲೆ ಹಾಕಲಾಗಿದೆ.

English summary
The Enforcement Directorate (ED) on Wednesday brought back over 2,300 kg of polished diamonds and pearls worth Rs 1,350 crore of firms belonging to Nirav Modi and Mehul Choksi from Hong Kong, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X