ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕರ್ಫ್ಯೂ: ಚಿನ್ನ ಖರೀದಿಸಬೇಕೇ? ಒಂದು ವಾರ ತಡಿರಿ

|
Google Oneindia Kannada News

ಬೆಂಗಳೂರು, ಮರ್ಚ್ 20: ಕೊರೊನಾವೈರಸ್ ಭೀತಿ ನಡುವೆಯೂ ಚಿನಿವಾರ ಪೇಟೆ ಚೇತರಿಕೆ ಕಂಡಿದ್ದು, ಚಿನ್ನ ದಾಖಲೆ ಪ್ರಮಾಣಕ್ಕೇರಿ, ಇಂದು ಕೊಂಚ ಇಳಿಕೆಯಾಗಿದೆ. ಈ ನಡುವೆ ಚಿನ್ನ ಖರೀದಿದಾರರಿಗೆ ಕಹಿ ಸುದ್ದಿ ಇಲ್ಲಿದೆ. ಇನ್ನೊಂದು ವಾರಗಳ ಕಾಲ ಚಿನ್ನಾಭರಣ ಖರೀದಿ ಸಾಧ್ಯವಿಲ್ಲ.

Recommended Video

Corona inspection done by a tumkur officer goes viral | Tumkur | Checking

ರಾಜ್ಯದ ಚಿನ್ನಾಭರಣ ಅಂಗಡಿಗಳ ವ್ಯಾಪಾರ, ವಹಿವಾಟಿನ ಮೇಲೆ ಕೊರೊನಾ ದಾಳಿ ಇಟ್ಟಿದೆ. ಕೊರೊನಾವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಹೇಳಿದಂತೆ ಮಾರ್ಚ್ 22ರಂದು ಒಂದು ದಿನದ ಜನತಾ ಕರ್ಫ್ಯೂ ಆಚರಿಸಲಾಗುತ್ತದೆ. ನಂತರ ಒಂದು ವಾರಗಳ ಕಾಲ ಚಿನ್ನಾಭರಣ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಸೋಷಿಯಲ್ ಕರ್ಫ್ಯೂ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬೆಂಗಳೂರಿನ ಜ್ಯುವೆಲ್ಲರಿ ಅಸೋಸಿಯೇಷನ್ ಹೇಳಿದೆ.

Corona Effect: 1 ಗ್ರಾಂ ಚಿನ್ನದ ಬೆಲೆ 5 ಸಾವಿರಕ್ಕೆ ಐವತ್ತು ರೂಪಾಯಿ ಕಡಿಮೆCorona Effect: 1 ಗ್ರಾಂ ಚಿನ್ನದ ಬೆಲೆ 5 ಸಾವಿರಕ್ಕೆ ಐವತ್ತು ರೂಪಾಯಿ ಕಡಿಮೆ

ಭಾನುವಾರದಿಂದ ಒಂದು ವಾರಗಳ ಕಾಲ ಚಿನ್ನಾಭರಣ ಅಂಗಡಿ ಬಂದ್ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ದಿ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ಹೇಳಿದ್ದಾರೆ. ಕೊರೊನಾವೈರಸ್ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಬೇಕಾಗಿದ್ದು ಅನಿವಾರ್ಯ ಎಂದು ಹೇಳಿದ್ದಾರೆ.

Coronaraoutbreak: No Gold purchase for a week in Karnataka

ಈ ನಡುವೆ 10 ಗ್ರಾಂ ಚಿನ್ನ 45 ಸಾವಿರ ರು ಮುಟ್ಟಿ ಈಗ 39,996 ರು ನಂತೆ ವಹಿವಾಟು ನಡೆಸಿದೆ. ಬೆಳ್ಳಿ ಕೆಜಿಗೆ 35 ಸಾವಿರ ರು ನಷ್ಟಿದೆ. ಮಾರ್ಚ್ 20ರಂದು ಚಿನ್ನದ ಬೆಲೆ ಬೆಂಗಳೂರಿನಲ್ಲಿ 1 ರು ಏರಿಕೆ ಕಂಡು 10 ಗ್ರಾಂಗೆ 37,660ರು ನಷ್ಟಿದೆ. ಇದೇ ವೇಳೆ ಬೆಳ್ಳಿ ಬೆಲೆ 1 ಕೆ.ಜಿಗೆ 39,990 ರು ನಷ್ಟಿದೆ. ನಿಮ್ಮ ಊರಿನಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯಲು ಕ್ಲಿಕ್ ಮಾಡಿ

English summary
Coronaraoutbreak: No Gold purchase for a week in Karnataka as The jewellers association as decided to close the whole market for a week amid of virus scare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X