ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಏರ್ವೇಸ್ ಸ್ಥಾಪಕ ನರೇಶ್ ಮನೆ ಮೇಲೆ ''ಇಡಿ'' ದಾಳಿ

|
Google Oneindia Kannada News

ಮುಂಬೈ, ಮಾರ್ಚ್ 5: ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆ ಸ್ಥಾಪಕ ನರೇಶ್ ಗೊಯೇಲ್ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನರೇಶ್ ಗೊಯೆಲ್ ಸೇರಿದಂತೆ ಕೆಲ ಉದ್ಯಮಿಗಳ ವಿರುದ್ಧ ಮನಿಲಾಂಡ್ರಿಂಗ್ ಪ್ರಕರಣ ದಾಖಲಾಗಿದ್ದು, ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ(ಪಿಎಂಎಲ್ಎ) ಅನ್ವಯ ನರೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು ಈ ಮುಂಚೆ ಇದೇ ಪ್ರಕರಣಕ್ಕೆ ಸೇರಿದಂತೆ ಎಫ್ಐಆರ್ ದಾಖಲಿಸಿದ್ದಾರೆ.

ಜೆಟ್ ಏರ್‌ವೇಸ್ ಮಂಡಳಿ ತ್ಯಜಿಸಿದ ಸಂಸ್ಥಾಪಕ ಗೋಯಲ್ ದಂಪತಿಜೆಟ್ ಏರ್‌ವೇಸ್ ಮಂಡಳಿ ತ್ಯಜಿಸಿದ ಸಂಸ್ಥಾಪಕ ಗೋಯಲ್ ದಂಪತಿ

ಮುಂಬೈ ಮೂಲದ ಟ್ರಾವೆಲ್ ಸಂಸ್ಥೆಜೊತೆಗಿನ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ಕಾಯ್ದೆ(ಫೆಮಾ) ಉಲ್ಲಂಘನೆ ಆರೋಪದಂತೆ ಪ್ರಕರಣ ದಾಖಲಾಗಿದ್ದು, ಕಳೆದ ಸೆಪ್ಟೆಂಬರ್ ನಲ್ಲಿ ವಿಚಾರಣೆಗೊಳಪಟ್ಟಿದ್ದರು.

Jet Airways founder Naresh Goyals home in Mumbai raided in

2019ರ ಏಪ್ರಿಲ್ ತಿಂಗಳಿನಿಂದ ಜೆಟ್ ಏರ್ ವೇಸ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಳೆದ ತಿಂಗಳು ಜೆಟ್ ಏರ್ ವೇಸ್ ಚೇರ್ಮನ್ ಸ್ಥಾನದಿಂದ ನರೇಶ್ ಕೆಳಗಿಳಿದಿದ್ದಾರೆ.ನರೇಶ್‌ ಗೋಯಲ್‌ ಮತ್ತು ಪತ್ನಿ ಅನಿತಾ ಗೋಯಲ್ ಆಡಳಿತ ಮಂಡಳಿಯಿಂದ ಹೊರ ನಡೆದಿರುವುದರಿಂದ ಹೆಚ್ಚುವರಿಯಾಗಿ ರೂ. 1500 ಕೋಟಿ ಆರ್ಥಿಕ ನೆರವು ಸಿಗುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೆಟ್‌ ಏರ್‌ವೇಸ್‌ ಈಗಾಗಲೇ 40ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. 2013ರಲ್ಲಿ ಕೂಡ ಜೆಟ್‌ ಏರ್‌ವೇಸ್‌ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಆದರೆ ಅಬುದಾಬಿಯ ಎತಿಹಾದ್ ಸಂಸ್ಥೆ ಮಾಡಿದ ಆರ್ಥಿಕ ನೆರವಿನಿಂದ ಜೀವದಾನ ಪಡೆದಿತ್ತು. ಆದರೆ, ಬಿಕ್ಕಟ್ಟು 20,000 ಉದ್ಯೋಗಗಳನ್ನು ಪಣಕ್ಕಿಟ್ಟಿತ್ತು ಮತ್ತು ಅವರಲ್ಲಿ ಹಲವರು ವೇತನ ಕಡಿತದೊಂದಿಗೆ ಇತರೆ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ಅರಸಿಕೊಂಡು ಹೋಗಿದ್ದಾರೆ.

ಯುಎಇಯ ಕೆರೀರ್ ಇಥೆಡ್ ಏರ್‌ವೇ, ಏರ್ ಕೆನಡಾ, ಏರ್‌ಲೈನ್ ಸಂಸ್ಥಾಪಕ ನರೇಶ್ ಘೋಯಲ್ ಇನ್ನೂ ಕೆಲವರು ಜೆಟ್ ಏರ್‌ವೇಸ್‌ ಅನ್ನು ಕೊಳ್ಳಲು ಮುಂದೆ ಬಂದಿದ್ದು, ಈಗಾಗಲೇ ತಮ್ಮ ಮೊತ್ತವನ್ನು ವಿಮಾನಯಾನ ಸಂಸ್ಥೆಗೆ ತಿಳಿಸಿದ್ದಾರೆ.

English summary
Jet Airways founder Naresh Goyal and few others have been boooked by ED in a Money Laundering case and conducting searches at his premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X