ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿನಂತೆ ವೇತನ ನೀಡಲಾಗದೆ ಕಾಲಾವಕಾಶ ಕೇಳಿದ ಜೆಟ್ ಏರ್ ವೇಸ್

|
Google Oneindia Kannada News

ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆಗೆ ಸಿಬ್ಬಂದಿ ವೇತನ ಪಾವತಿಸಲು ಮತ್ತೊಮ್ಮೆ ಸಾಧ್ಯವಾಗಿಲ್ಲ. ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಬಾಕಿ ಉಳಿಸಿಕೊಂಡ ಶೇಕಡಾ 50ರಷ್ಟು ವೇತನ ಪಾವತಿಗೆ ಇನ್ನೂ 10 ದಿನ ಸಮಯಾವಕಾಶ ಕೋರಿದೆ. ಮೊದಲ 50ರಷ್ಟು ವೇತನವನ್ನು ಸಂಸ್ಥೆಯು ಸೆಪ್ಟೆಂಬರ್ 11ರಂದು ಪಾವತಿಸಿತ್ತು. 26ನೇ ತಾರೀಕು ಬಾಕಿ ವೇತನ ಪಾವತಿಸುವುದಾಗಿ ತಿಳಿಸಿತ್ತು.

ಸೆಪ್ಟೆಂಬರ್ ಆರಂಭದಲ್ಲೇ ಈ ರೀತಿಯ ಪರಿಸ್ಥಿತಿಯನ್ನು ನವೆಂಬರ್ ತನಕ ಎದುರಿಸಬೇಕಾಗುತ್ತದೆ ಎಂದು ಜೆಟ್ ಏರ್ ವೇಸ್ ತಿಳಿಸಿತ್ತು. ಬುಧವಾರ ಸಿಬ್ಬಂದಿಗೆ ಇ ಮೇಲ್ ಕಳಿಸಲಾಗಿದ್ದು, ಇಂದು ಪಾವತಿಸಬೇಕಿದ್ದ ಬಾಕಿ ವೇತನವನ್ನು ಅಕ್ಟೋಬರ್ 9, 2018ರಂದು ನೀಡುವುದಾಗಿ ಹೇಳಲಾಗಿದೆ.

Jet airways defaults on salary payment to its employees again

ಸಾವಿರಾರು ಕೋಟಿ ನಷ್ಟದಲ್ಲಿ ವಿಮಾನಯಾನ ಸಂಸ್ಥೆಗಳುಸಾವಿರಾರು ಕೋಟಿ ನಷ್ಟದಲ್ಲಿ ವಿಮಾನಯಾನ ಸಂಸ್ಥೆಗಳು

ಅಂದ ಹಾಗೆ ಜೆಟ್ ಏರ್ ವೇಸ್ ನ ಆರ್ಥಿಕ ಪರಿಸ್ಥಿತಿಯು ಬಹಳ ಕೆಟ್ಟದಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆಗೆ ಹಣ ಹೊಂದಿಸಲು ಸಹ ಕಷ್ಟ ಆಗುತ್ತಿದೆ. ಮೊದಲಿಗೆ ಸಿಬ್ಬಂದಿಯ ವೇತನದಲ್ಲಿ ಕಡಿತ ಮಾಡಲು ಸಂಸ್ಥೆಯು ಮುಂದಾಗಿತ್ತು. ಅದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ನಂತರ ಆ ಆಲೋಚನೆಯನ್ನು ಸಂಸ್ಥೆಯು ಮುಂದಕ್ಕೆ ಹಾಕಿತು.

English summary
Jet Airways defaults on salary payments again and sought time of over 10 days from its employees to make full payment of the balance salary. The first 50% of this month’s salary was paid to the employees on September 11, 2018, and the rest was to be paid today (September 26) – the airline has been able to pay only the half of the promised 50% today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X