• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಜೆಫ್ ಬೇಜೋಸ್: ಆ್ಯಂಡಿ ಜಸ್ಸಿ ಮುಂದಿನ ಸಿಇಒ

|
Google Oneindia Kannada News

ವಾಷಿಂಗ್ಟನ್‌, ಫೆಬ್ರವರಿ 03: ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ಮತ್ತು ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ನ ಸಂಸ್ಥಾಪಕ ಮತ್ತು ಸಿಇಒ ಜೆಫ್‌ ಬೇಜೋಸ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಜೆಫ್ ಬೆಜೋಸ್ ಈ ವರ್ಷದ ಕೊನೆಯಲ್ಲಿ ತಮ್ಮ ಹುದ್ದೆಯನ್ನು ತೊರೆಯಲಿದ್ದು, ಕಂಪನಿಯ ಉನ್ನತ ಕ್ಲೌಡ್ ಕಾರ್ಯನಿರ್ವಾಹಕ ಆ್ಯಂಡಿ ಜಸ್ಸಿ ಅಮೆಜಾನ್ ಚುಕ್ಕಾಣಿ ಹಿಡಿಯುತ್ತಾರೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ಬೇಜೋಸ್ ಅಮೆಜಾನ್ ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಅಮೆಜಾನ್ ಹಾಗೂ ಕರ್ನಾಟಕದ ಮಧ್ಯದ ಒಪ್ಪಂದಕ್ಕೆ CAIT ಆಕ್ಷೇಪ ಅಮೆಜಾನ್ ಹಾಗೂ ಕರ್ನಾಟಕದ ಮಧ್ಯದ ಒಪ್ಪಂದಕ್ಕೆ CAIT ಆಕ್ಷೇಪ

ಅಮೆಜಾನ್‌ನ ವಿಶ್ವಾದ್ಯಂತ ಗ್ರಾಹಕ ವ್ಯವಹಾರದ ಸಿಇಒ ಜಸ್ಸಿ ಅಥವಾ ಜೆಫ್ ವಿಲ್ಕೆ, ಬೆಜೋಸ್‌ನ ಅಂತಿಮ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 53 ವರ್ಷದ ಜಸ್ಸಿ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಸಿಇಒ ಆಗಲಿದ್ದಾರೆ.

1997 ರಲ್ಲಿ ಅಮೆಜಾನ್ ಸೇರಿದ ಜಸ್ಸಿ, ಅಮೆಜಾನ್‌ನ ವೆಬ್ ಸರ್ವೀಸಸ್ ಕ್ಲೌಡ್ ತಂಡವನ್ನು ಪ್ರಾರಂಭದಿಂದಲೂ ಮುನ್ನಡೆಸಿದ್ದಾರೆ. ಇವರ ನೇತೃತ್ವದಲ್ಲಿ ಅಮೆಜಾನ್‌ ಹೆಚ್ಚಿನ ಲಾಭವನ್ನು ಗಳಿಸಿದೆ.

ಇನ್ನು ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ 57 ವರ್ಷದ ಜೆಫ್ ಬೇಜೋಸ್, ವಿಶ್ವದ ನಂಬರ್ 1 ಶ್ರೀಮಂತನಾಗಿ ಹಲವು ತಿಂಗಳುಗಳ ಕಾಲ ಇದ್ದರು. ಇತ್ತೀಚೆಗಷ್ಟೇ ಟೆಸ್ಲಾದ ಎಲೋನ್ ಮಸ್ಕ್‌ ನಂಬರ್ ಅವರನ್ನು ಹಿಂದಿಕ್ಕಿದರು.

English summary
Amazon CEO Jeff Bezos will leave his post later this year, turning the helm over to the company’s top cloud executive Andy Jassy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X