ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ ಬಿಲ್ ಗೇಟ್ಸ್

|
Google Oneindia Kannada News

ವಾಷಿಂಗ್ಟನ್, ಜುಲೈ 28: ವಿಶ್ವದ ಅತಿ ಶ್ರೀಮಂತನೆಂಬ ಹೆಗ್ಗಳಿಕೆಯಿಂದ ಕೆಳಕ್ಕಿಳಿದಿದ್ದ ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ ಬಿಲ್ ಗೇಟ್ಸ್, ಇದೀಗ 24 ಗಂಟೆಗಳಲ್ಲಿ ಮತ್ತೆ ಆ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ.

ರಾಜಕುಮಾರಿ ಡಯಾನಾ ಲೈಂಗಿಕ ರಹಸ್ಯಗಳ ವಿಡಿಯೋ ಟೇಪ್ ಬಹಿರಂಗ!ರಾಜಕುಮಾರಿ ಡಯಾನಾ ಲೈಂಗಿಕ ರಹಸ್ಯಗಳ ವಿಡಿಯೋ ಟೇಪ್ ಬಹಿರಂಗ!

ಗುರುವಾರ ಅಂತ್ಯಗೊಂಡ ಅಮೆರಿಕದ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆರಿಕದ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆಯಾದ ಅಮೆಜಾನ್, 90.6 ಬಿಲಿಯನ್ ಡಾಲರ್ ಗಳ ವ್ಯವಹಾರ ಮಾಡಿ ದಿನದ ವಹಿವಾಟಿನಲ್ಲಿ ನಂಬರ್ ಒನ್ ಸಂಸ್ಥೆಯಾಗಿ ಹೊರಹೊಮ್ಮಿತು. ಇದು, ಮೈಕ್ರೋಸಾಫ್ಟ್ ಕಂಪನಿಗಿಂತ 500 ಮಿಲಿಯನ್ ಹೆಚ್ಚಿನ ವ್ಯವಹಾರವಾಗಿತ್ತು.

Jeff Bezos loses world's richest person title to Bill Gates in less than a day

ಹಾಗಾಗಿ, ಈ ಬಗ್ಗೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ ಫೋರ್ಬ್ಸ್ ನಿಯತ ಕಾಲಿಕೆಯು, ಅಮೆಜಾನ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆಫ್ ಬೆಝೋಜ್ ಅವರು, ವಿಶ್ವದ ನಂಬರ್ ಒನ್ ಶ್ರೀಮಂತನೆಂದು ಬಣ್ಣಿಸಿತು.

ಜೆಫ್ ಅವರಿಗೆ ಸಂದ ಈ ಬಣ್ಣನೆ ಕೇವಲ 24 ಗಂಟೆಗಳ ಅವಧಿಯದ್ದಾಗಿತ್ತು. ಶುಕ್ರವಾರ ಆರಂಭಗೊಂಡ ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಮೈಕ್ರೋಸಾಫ್ಟ್ ಕಂಪನಿ ಮತ್ತಷ್ಟು ಹೂಡಿಕೆ ಆಕರ್ಷಿಸಿತಲ್ಲದೆ, 89 ಮಿಲಿಯನ್ ಡಾಲರ್ ಗಳಷ್ಟು ವಹಿವಾಟು ನಡೆಸಿದರೆ, ಅಮೆಜಾನ್ ಕಂಪನಿಯು 88 ಮಿಲಿಯನ್ ಡಾಲರ್ ನಡೆಸಿದೆ. ಹಾಗಾಗಿ, ವಿಶ್ವದ ನಂಬರ್ ಒನ್ ಪಟ್ಟ ಪುನಃ ಮೈಕ್ರೋಸಾಫ್ಟ್ ಗೇ ಒಲಿದಿದ್ದು, ನಂಬರ್ ಒನ್ ಶ್ರೀಮಂತನೆಂಬ ಹೆಗ್ಗಳಿಕೆ ಗೇಟ್ಸ್ ಅವರಿಗೇ ಸಂದಿದೆ.

English summary
With a fortune of $90 billion, Amazon's chief executive officer Jeff Bezos briefly overtook Microsoft co-founder Bill Gates to become the richest person in the world on Thursday. Bezos lost the top spot in less than 24 hours when Amazon's stock dropped as the online
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X