ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17

|
Google Oneindia Kannada News

ವಾಷಿಂಗ್ಟನ್, ಜುಲೈ 29: ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೇಜೋಸ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಮೆರಿಕಾ ಕಾಂಗ್ರೆಸ್ ಮುಂದೆ ಸಾಕ್ಷ್ಯ ನುಡಿದಾಗ ಅಮೆಜಾನ್ ಕಂಪನಿ ಆರಂಭಿಕ ದಿನಗಳಲ್ಲಿ ಎದುರಿಸದ ಸವಾಲುಗಳು ಮತ್ತು ತೊಂದರೆಗಳನ್ನು ವಿವರಿಸಿದರು.

26 ವರ್ಷಗಳ ಹಿಂದೆಯೇ ಅಮೆಜಾನ್ ಕಂಪನಿಯನ್ನು ಹುಟ್ಟು ಹಾಕಿದ ಜೆಫ್ ಬೇಜೋಸ್ ಈ ಭೂಮಿಗೆ ಎಂಟ್ರಿ ಕೊಟ್ಟಾಗ ಅವರ ತಾಯಿಯ ವಯಸ್ಸು 17 ಎಂದು ತಮ್ಮ ಜೀವನದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಸಲಿರುವ ಅಮೆಜಾನ್ಭಾರತದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಸಲಿರುವ ಅಮೆಜಾನ್

ಜೆಫ್ ತಾಯಿ 17 ವರ್ಷ ವಯಸ್ಸಿನಲ್ಲೇ ಗರ್ಭಿಣಿ

ಜೆಫ್ ತಾಯಿ 17 ವರ್ಷ ವಯಸ್ಸಿನಲ್ಲೇ ಗರ್ಭಿಣಿ

"ನಾನು ಜೆಫ್ ಬೆಜೋಸ್. ನಾನು 26 ವರ್ಷಗಳ ಹಿಂದೆ 'ಅಮೆಜಾನ್' ಅನ್ನು ಜಗತ್ತಿನ ಅತ್ಯಂತ ಗ್ರಾಹಕ-ಕೇಂದ್ರಿತ ಕಂಪನಿಯನ್ನಾಗಿ ಮಾಡುವ ದೀರ್ಘಕಾಲೀನ ಉದ್ದೇಶದಿಂದ ಸ್ಥಾಪಿಸಿದೆ. ನನ್ನ ತಾಯಿ ಜಾಕಿ ನ್ಯೂ ಮೆಕ್ಸಿಕೊದ ಅಲ್ಬುಕರ್ಕ್ನ್‌ನಲ್ಲಿ 17 ವರ್ಷದ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ನನ್ನನ್ನು ಹೆತ್ತರು. 1964 ರಲ್ಲಿ ಅಲ್ಬುಕರ್ಕ್ನ್‌ನಲ್ಲಿ ಪ್ರೌಢ ಶಾಲೆಯಲ್ಲಿ ಗರ್ಭಿಣಿಯಾಗುವುದು ಸವಾಲಿನ ಸಂಗತಿಯಾಗಿತ್ತು. ಇದು ಅವರಿಗೆ ಕಷ್ಟಕರವಾಗಿತ್ತು "ಎಂದು ಅವರು ಆಂಟಿಟ್ರಸ್ಟ್, ವಾಣಿಜ್ಯ ಮತ್ತು ಆಡಳಿತಾತ್ಮಕ ಕಾನೂನುಗಳ ಉಪಸಮಿತಿಯ ಮುಂದೆ ನೀಡಿದ ಸಾಕ್ಷ್ಯದಲ್ಲಿ ಹೇಳಿದರು.

ಬೇಜೋಸ್ ತಾಯಿಯನ್ನು ಶಾಲೆಯಿಂದ ಹೊರಹಾಕಲು ಯತ್ನ

ಬೇಜೋಸ್ ತಾಯಿಯನ್ನು ಶಾಲೆಯಿಂದ ಹೊರಹಾಕಲು ಯತ್ನ

ವಿಶ್ವದ ಶ್ರೀಮಂತ ವ್ಯಕ್ತಿಯ ತಾಯಿ ಗರ್ಭಿಣಿ ಎಂಬ ವಿಷಯ ತಿಳಿದಿದ್ದೇ ತಡ ಶಾಲೆಯ ಆಡಲಿತ ಮಂಡಳಿ ಆಕೆಯನ್ನು ಶಾಲೆಯಿಂದ ಹೊರಹಾಕಲು ಪ್ರಯತ್ನಿಸಿತು. ಆಕೆಯ ಅಜ್ಜ ಅವಳ ಸಹಾಯಕ್ಕೆ ನೆರವಾದರು ಎಂದು ಹಳೆಯ ಘಟನೆಗಳನ್ನು ಮೆಲಕು ಹಾಕಿದ್ದಾರೆ.

ತನ್ನ ಶಿಕ್ಷಣವನ್ನು ಮುಂದುವರಿಸಲು ದೃಢವಾಗಿ ನಿಶ್ಚಯಿಸಿದ ನಂತರ ಬೇಜೋಸ್ ತಾಯಿ ಜಾಕಿ, ರಾತ್ರಿ ಶಾಲೆಗೆ ಸೇರಿಕೊಂಡರು. ಪ್ರಾಧ್ಯಾಪಕರ ನೇತೃತ್ವದಲ್ಲಿ ತರಗತಿಗಳನ್ನು ಆರಿಸಿಕೊಂಡಳು, ಅವರು ಶಿಶುವನ್ನು ತರಗತಿಗೆ ಕರೆತರಲು ಅವಕಾಶ ಮಾಡಿಕೊಟ್ಟರು.

 ಜೆಫ್ ಬೇಜೋಸ್ ಸಂಪತ್ತು ದಾಖಲೆಯ ಹೆಚ್ಚಳ: ಆಸ್ತಿ 171.6 ಬಿಲಿಯನ್ ಡಾಲರ್ ಜೆಫ್ ಬೇಜೋಸ್ ಸಂಪತ್ತು ದಾಖಲೆಯ ಹೆಚ್ಚಳ: ಆಸ್ತಿ 171.6 ಬಿಲಿಯನ್ ಡಾಲರ್

ಜೆಫ್ ಬೇಜೋಸ್ ತಂದೆಯ ಹೆಸರು ಮಿಗುಯೆಲ್

ಜೆಫ್ ಬೇಜೋಸ್ ತಂದೆಯ ಹೆಸರು ಮಿಗುಯೆಲ್

ಜೆಫ್ ಬೇಜೋಸ್ ರ ತಂದೆಯ ಹೆಸರು ಮಿಗುಯೆಲ್ ಎಂದು ಹೇಳಿಕೊಂಡಿದ್ದಾರೆ. ತಾನು ನಾಲ್ಕು ವರ್ಷದವನಿದ್ದಾಗಿ ಅವರು ನನ್ನನ್ನು ದತ್ತು ತೆಗೆದುಕೊಂಡರು ಎಂದು ಅಮೆಜಾನ್ ಸಿಇಒ ಹೇಳಿದ್ದಾರೆ.

"ಕ್ಯಾಸ್ಟ್ರೊ ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ, ಆಪರೇಷನ್ ಪೆಡ್ರೊ ಪ್ಯಾನ್‌ನ ಭಾಗವಾಗಿ ಕ್ಯೂಬಾದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಬಂದಾಗ ಅವರಿಗೆ 16 ವರ್ಷ. ನನ್ನ ತಂದೆ ಅಮೆರಿಕಕ್ಕೆ ಮಾತ್ರ ಬಂದರು. ಅವರು ಇಲ್ಲಿ ಸುರಕ್ಷಿತನಾಗಿರುತ್ತಾನೆ ಎಂದು ಅವರ ಹೆತ್ತವರು ಭಾವಿಸಿದ್ದರು.

ಡೆಲವೇರ್ನ ವಿಲ್ಮಿಂಗ್ಟನ್‌ನಲ್ಲಿರುವ ಕ್ಯಾಥೊಲಿಕ್ ಮಿಷನ್‌ಗೆ ಸ್ಥಳಾಂತರಗೊಳ್ಳುವ ಮೊದಲು, ಅವರ ತಂದೆ ಫ್ಲೋರಿಡಾದ ನಿರಾಶ್ರಿತರ ಕೇಂದ್ರವಾದ ಕ್ಯಾಂಪ್ ಮ್ಯಾಟೆಕುಂಬೆಯಲ್ಲಿ ಎರಡು ವಾರಗಳನ್ನು ಕಳೆದರು ಎಂದು ಅವರು ಉಲ್ಲೇಖಿಸಿದ್ದಾರೆ.

ನನ್ನ ಜೀವನದ ಬಹುದೊಡ್ಡ ಉಡುಗೊರೆ ನನ್ನ ಪೋಷಕರು

ನನ್ನ ಜೀವನದ ಬಹುದೊಡ್ಡ ಉಡುಗೊರೆ ನನ್ನ ಪೋಷಕರು

ನನ್ನ ಜೀವನದ ಬಹುದೊಡ್ಡ ಉಡುಗೊರೆ ನನ್ನ ತಾಯಿ ಮತ್ತು ತಂದೆ ಎಂದಿದ್ದಾರೆ. ಅವರು ನನಗೆ ಮತ್ತು ನನ್ನ ಒಡಹುಟ್ಟಿದವರಿಗೆ ನಮ್ಮ ಇಡೀ ಜೀವನಕ್ಕೆ ನಂಬಲಾಗದ ಆದರ್ಶಪ್ರಾಯರಾಗಿದ್ದಾರೆ ಎಂದು ಬೆಜೋಸ್ ಹೇಳಿದರು.

1994 ರಲ್ಲಿ ಅಮೆಜಾನ್ ಸ್ಥಾಪಿಸುವ ಪರಿಕಲ್ಪನೆ

1994 ರಲ್ಲಿ ಅಮೆಜಾನ್ ಸ್ಥಾಪಿಸುವ ಪರಿಕಲ್ಪನೆ

ಅಮೆಜಾನ್‌ನ ಪರಿಕಲ್ಪನೆಯು 1994 ರಲ್ಲಿ ತನಗೆ ಬಂದಿತು ಎಂದು ಅವರು ಹೇಳಿದ್ದಾರೆ. ಲಕ್ಷಾಂತರ ಶೀರ್ಷಿಕೆಗಳೊಂದಿಗೆ ಆನ್‌ಲೈನ್ ಪುಸ್ತಕದಂಗಡಿಯೊಂದನ್ನು ನಿರ್ಮಿಸುವ ಆಲೋಚನೆಯೊಂದಿಗೆ ಕಂಪನಿಯನ್ನು ಆರಂಭಿಸಿದೆ. ನಾನು ನ್ಯೂಯಾರ್ಕ್ ನಗರದ ಹೂಡಿಕೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ.

ಅಮೆಜಾನ್ ಸಿಇಒ ಆರಂಭಿಕ ಬಂಡವಾಳವು ಮುಖ್ಯವಾಗಿ ನನ್ನ ಪೋಷಕರಿಂದ ಬಂದಿದೆ ಎಂದು ಹೇಳಿದರು, ಅವರು ತಮ್ಮ ಜೀವನದ ಉಳಿತಾಯದ ಹೆಚ್ಚಿನ ಭಾಗವನ್ನು ಅವರು ಹೂಡಿಕೆ ಮಾಡಿದರು ಎಂದಿದ್ದಾರೆ.

English summary
Jeff Bezos, Amazon founder and CEO, spoke about his personal life and narrated the difficulties his company faced in its initial years when he testified before the US congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X